ADVERTISEMENT

ಅನಧಿಕೃತ ಬಡಾವಣೆ ತೆರವು ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 7 ಮೇ 2012, 7:55 IST
Last Updated 7 ಮೇ 2012, 7:55 IST

ದಾವಣಗೆರೆ: ನಗರದ ಸುತ್ತಮುತ್ತಲಿನ 7 ಅನಧಿಕೃತ ಬಡಾವಣೆಗಳನ್ನು ತಹಶೀಲ್ದಾರ್ ನೇತೃತ್ವದಲ್ಲಿ ಶನಿವಾರ ತೆರವುಗೊಳಿಸಲಾಯಿತು.

ಡಾ.ಬಿ.ಆರ್. ಹರೀಶ್‌ನಾಯಕ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಮತ್ತು ದಾವಣಗೆರೆ-ಹರಿಹರ ನಗರಾಭಿವದ್ದಿ ಪ್ರಾಧಿಕಾರದ ಅಧಿಕಾರಿಗಳು ಅನಧಿಕೃತವಾಗಿ ನಿರ್ಮಿಸಲ್ಪಟ್ಟ ಬಡಾವಣೆಗಳನ್ನು ತೆರವುಗೊಳಿಸಿದರು.

ನಗರದ ಸುತ್ತಮುತ್ತಲಿನ ಯರಗುಂಟೆ ಗ್ರಾಮದ ಸರ್ವೇ ನಂ. 16, ದೊಡ್ಡಬೂದಿಹಾಳ್ ಗ್ರಾಮದ ಸರ್ವೇ ನಂ. 74, 76 ಮತ್ತು ಬೇತೂರು ಕಲ್ಪನಹಳ್ಳಿ ಗ್ರಾಮದ ಸರ್ವೇ ನಂ. 183ರಲ್ಲಿ ಸುಮಾರು 45 ಎಕರೆಗೂ ಹೆಚ್ಚು ಪ್ರದೇಶವನ್ನು ತೆರವುಗೊಳಿಸಲಾಯಿತು. 

ಈ ಪ್ರದೇಶಗಳು ಭೂ- ಪರಿವರ್ತನೆ ಆಗಿರಲಿಲ್ಲ. ಪಾಲಿಕೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಹೊಂದಿರಲಿಲ್ಲ. ಈ ರೀತಿ ಅನುಮೋದನೆ ಪಡೆಯದೇ ಕೆಲವು ರಿಯಲ್ ಎಸ್ಟೇಟ್ ಏಜೆಂಟರು ಹಾಗೂ ದಲಾಲರು ಅಕ್ರಮವಾಗಿ ನಿವೇಶನ ಗುರುತು, ಹಾಗೂ ಮೂಲಸೌಲಭ್ಯ ಅಭಿವೃದ್ಧಿಪಡಿಸಿದ್ದರು.

ಇಲ್ಲಿನ ಸಿಮೆಂಟ್, ಡಾಂಬರು ರಸ್ತೆ, ಚರಂಡಿಗಳು, ಸೇತುವೆ, ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಯಿತು.
 ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ಸಿದ್ದೇಶ್, ಕುಮಾರ್, ಧನಂಜಯ, ಮತ್ಯುಂಜಯಪ್ಪ, ದಿನೇಶ್ ಇತರರು ಇದ್ದರು.

ದೂಡಾ ವ್ಯಾಪ್ತಿಯಲ್ಲಿ 2000 ನಿವೇಶನಗಳ ಡೋರ್‌ನಂಬರ್ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.