ADVERTISEMENT

ಕಾರ್ಮಿಕ ಸಚಿವರ ಮಗನ ಪಂಚಾಯ್ತಿ ಪ್ರೇಮ

ತಂದೆಯ ಹೆಜ್ಜೆ ತುಳಿದ ಮಗ: ಪಂಚಾಯ್ತಿಯಲ್ಲಿ ಭವಿಷ್ಯ ಕಾಣುವ ಕಾತರ

ಪ್ರಕಾಶ ಕುಗ್ವೆ
Published 1 ಜೂನ್ 2015, 7:52 IST
Last Updated 1 ಜೂನ್ 2015, 7:52 IST
ಕಾರ್ಮಿಕ ಸಚಿವರ ಮಗನ ಪಂಚಾಯ್ತಿ ಪ್ರೇಮ
ಕಾರ್ಮಿಕ ಸಚಿವರ ಮಗನ ಪಂಚಾಯ್ತಿ ಪ್ರೇಮ   

ದಾವಣಗೆರೆ: ಸಚಿವರ ಮಗ ಗ್ರಾಮ ಪಂಚಾಯ್ತಿ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ರಾಜ್ಯ ಕಾರ್ಮಿಕ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಅವರ ಮಗ ಪಿ.ಟಿ.ಭರತ್‌ ಈಗ ತಮ್ಮ ರಾಜಕೀ ಯ ಜೀವನದ ಆರಂಭಕ್ಕೆ ಗ್ರಾಮ ಪಂಚಾ ಯ್ತಿಯನ್ನೇ ಅಡಿಪಾಯ ಮಾಡಿ ಕೊಂಡಿದ್ದಾರೆ.

ಈಗಷ್ಟೇ ಬಿಬಿಎಂ ಮುಗಿಸಿರುವ 22 ಹರೆಯದ ಭರತ್‌, ಹರಪನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮ ಪಂಚಾಯ್ತಿ ಅಭ್ಯರ್ಥಿ. ಸ್ಪರ್ಧಾ ಕಣದಲ್ಲಿ ಯಾರೂ ಇಲ್ಲದಿರುವುದರಿಂದ ಅವಿರೋಧವಾಗಿಯೂ ಆಯ್ಕೆ ಯಾಗಿದ್ದಾರೆ. ತಂದೆ ಪಿ.ಟಿ.ಪರಮೇಶ್ವರ ನಾಯ್ಕ ಕೂಡ ಗ್ರಾ.ಪಂ.ಯಿಂದ ರಾಜಕೀಯ ಪ್ರವೇಶ ಮಾಡಿದ್ದರು. ತಂದೆಯಂತೆ ಮಗನೂ ಇದೇ ಹಾದಿ ತುಳಿಯಲು ಹೊರಟಿದ್ದಾರೆ.

ಈ ವರ್ಷವೇ ಸೃಷ್ಟಿಯಾದ ಲಕ್ಷ್ಮೀಪುರ ಗ್ರಾಮ ಪಂಚಾಯ್ತಿಗೆ ಭರತ್‌ ಮೊದಲ ಸದಸ್ಯ. ತಾಲ್ಲೂಕಿನ ಚುನಾವಣಾ ಓಡಾಟದಲ್ಲಿ ಬ್ಯುಸಿಯಾಗಿರುವ ಅವರು ‘ಪ್ರಜಾವಾಣಿ’ ಜತೆ ನಡೆಸಿದ ಮಾತುಕತೆ ಇಲ್ಲಿದೆ.

*ಗ್ರಾಮ ಪಂಚಾಯ್ತಿ ಚುನಾವಣೆ ಯಲ್ಲಿ ಸ್ಪರ್ಧೆ ಏಕೆ?
–ನನಗಿದು ಅನಿರೀಕ್ಷಿತ. ಬಿಬಿಎಂ ಪರೀಕ್ಷೆ ಮುಗಿಸಿ ಊರಿಗೆ ಬರುತ್ತಿದ್ದಂತೆ ಹಿತೈಷಿಗಳು, ಸ್ನೇಹಿತರು, ಮುಖ್ಯವಾಗಿ ಗ್ರಾಮಸ್ಥರು ಚುನಾವಣೆಗೆ ನಿಲ್ಲುವಂತೆ ಒತ್ತಾಯ ಮಾಡಿದರು. ತಂದೆಯಂತೆ ನೀವು ಕೂಡ ರಾಜಕೀಯದಲ್ಲಿ ಇರ ಬೇಕು ಎಂದು ಆಸೆ ಪಟ್ಟರು. ನನಗೂ, ನನ್ನ ರಾಜಕೀಯ ಪ್ರವೇಶ ಇದ ರಲ್ಲೇ ಇರಬಹುದು ಎಂದು ಅನಿಸಿತು. ಹಾಗಾಗಿ, ಸ್ಪರ್ಧೆ ಮಾಡಿದೆ.

*ಇದಕ್ಕೆ ತಂದೆ ಯವರ ಅಭಿ ಪ್ರಾಯ?
–ಈಗಲೇ ರಾಜಕೀಯಕ್ಕೆ ಬರುವುದು ಬೇಡ ಎಂಬುದು ತಂದೆಯವರ ಅಭಿ ಪ್ರಾಯ. ನಾನು ಇನ್ನೂ ಓದಬೇಕು ಎಂಬುದು ಅವರ ಆಸೆ. ಆದರೆ, ಜನರ ಪ್ರೀತಿಯ ಒತ್ತಾಯಕ್ಕೆ ಅವರೂ ಮಣಿಯಲೇ ಬೇಕಾಯಿತು. ಅವರೂ ನನ್ನ ವಯಸ್ಸಿನಲ್ಲೇ ಆಗಿನ ಹಿರೇಮೆಗಳೂರು ಮಂಡಲ ಪಂಚಾಯ್ತಿಯ ಸದಸ್ಯರಾಗಿ ರಾಜಕೀಯ ಪ್ರವೇಶ ಪಡೆದಿದ್ದರು. ಮುಂದೆ ತಾಲ್ಲೂಕು ಪಂಚಾಯ್ತಿ, ಶಾಸಕರಾಗಿಯೂ ಆಯ್ಕೆಯಾಗಿದ್ದು ಎಲ್ಲರಿಗೂ ತಿಳಿದಿದೆ.

* ರಾಜಕೀಯ ಕ್ಷೇತ್ರಕ್ಕೆ ಬರಲು ನಿಮಗಿರುವ ಆರ್ಹತೆ ಏನು?
–ಶಾಲೆ–ಕಾಲೇಜುಗಳಲ್ಲಿನ ಚುನಾ ವಣೆಗಳಲ್ಲಿ ಸ್ಪರ್ಧಿಸುತ್ತಿದ್ದೆ. ಬಹಳಷ್ಟು ಬಾರಿ ಆಯ್ಕೆ ಆಗುತ್ತಿದ್ದೆ. ಕ್ರೀಡಾ ವಿಭಾಗದ ನಾಯಕನಾಗಿ ಕೆಲಸ ಮಾಡಿದ್ದೇನೆ. ಕಾಲೇಜುಗಳಲ್ಲಿ ಸಂಘದ ಪದಾಧಿಕಾರಿಯಾಗಿ ಆಯ್ಕೆಯಾಗಿದ್ದೆ. ವಿಧಾನಸಭಾ ಕಲಾಪಗಳು ನಡೆ ಯುತ್ತಿರುವ ಸಮಯದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಅಲ್ಲಿನ ಚರ್ಚೆ ಗಳನ್ನು ಆಲಿಸುತ್ತಾ ಬಂದಿದ್ದೇನೆ. ತಂದೆ ಅವರ ಕಾರ್ಯ ಶೈಲಿಯನ್ನೂ ಗಮನಿ ಸುತ್ತಾ ಬಂದಿದ್ದೇನೆ.

* ಮುಂದಿನ ನಿಮ್ಮ ಗುರಿ?
–ರಾಜಕೀಯ ಕ್ಷೇತ್ರದ ಬಗ್ಗೆ ನನಗೆ ಮೊದಲಿನಿಂದಲೂ ಆಸಕ್ತಿ. ಜನರ ಸೇವೆ ಮಾಡಬೇಕು ಎಂಬುದು ನನ್ನ ಉದ್ದೇಶ. ಜನರ ಆಶೀರ್ವಾದ ಇದ್ದರೆ ಏನು ಬೇಕಾ ದರೂ ಆಗಬಹುದು. ಅದಕ್ಕೆ ತಕ್ಕಂತೆ ನಾವೂ ನಡೆದುಕೊಳ್ಳಬೇಕು ಅಷ್ಟೇ.

*ಗ್ರಾ.ಪಂ. ಅಧ್ಯಕ್ಷ ಆಗು ವುದಕ್ಕಾಗಿಯೇ ಚುನಾವಣೆಗೆ ಸ್ಪರ್ಧಿಸಿದ್ದಾರೆಂಬ ಎಂಬ ಮಾತುಗಳಿವೆಯಲ್ಲ?
–ಗಣತಿ ಆಧಾರದ ಮೇಲೆ ಮೀಸಲಾತಿ ನಿಗದಿಯಾಗುತ್ತದೆ. ಜಿಲ್ಲಾಧಿ ಕಾರಿಗಳು ಸಮೀಕ್ಷೆ ನಡೆಸಿಯೇ ಮೀಸ ಲಾತಿ ನಿರ್ಧರಿಸುತ್ತಾರೆ. ಅಧ್ಯಕ್ಷ–ಉಪಾ ಧ್ಯಕ್ಷ ಸ್ಥಾನದ ಮೀಸಲಾತಿ ಕೂಡ ಇದೇ ರೀತಿ ನಿಗದಿಯಾಗುತ್ತದೆ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡಲು ಸಾಧ್ಯ ವಿಲ್ಲ.

ಇಂತಹ ವಾದಗಳಲ್ಲಿ ಹುರುಳಿಲ್ಲ. ಲಕ್ಷ್ಮಿಪುರ ಗ್ರಾಮ ಪಂಚಾಯ್ತಿಗೆ ನಾಲ್ಕು ಸ್ಥಾನಗಳಿವೆ. ಇದರಲ್ಲಿ ಒಂದು ಎಸ್ಸಿ ಮಹಿಳೆ, ಒಂದು ಸಾಮಾನ್ಯ ಪುರುಷ, ಒಂದು ಸಾಮಾನ್ಯ ಮಹಿಳೆ, ಎಸ್ಸಿ ಪುರುಷ ಇದ್ದಾರೆ. ಎಲ್ಲರೂ ಅವಿರೋಧ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.