ADVERTISEMENT

ದಾವಣಗೆರೆ ಎರಡನೇ ರಾಜಧಾನಿಗೆ ಒತ್ತಡ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 6:00 IST
Last Updated 6 ಅಕ್ಟೋಬರ್ 2012, 6:00 IST
ದಾವಣಗೆರೆ ಎರಡನೇ ರಾಜಧಾನಿಗೆ ಒತ್ತಡ
ದಾವಣಗೆರೆ ಎರಡನೇ ರಾಜಧಾನಿಗೆ ಒತ್ತಡ   

ದಾವಣಗೆರೆ: ಎಲ್ಲ ದೃಷ್ಟಿಯಿಂದ ಮೂಲಸೌಲಭ್ಯ ಹೊಂದಿರುವ ದಾವಣಗೆರೆಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡುವ ಮೂಲಕ ಈ ಭಾಗದ ಸರ್ವತೋಮುಖ ಬೆಳವಣಿಗೆಗೆ ಒತ್ತು ನೀಡಬೇಕು ಎಂದು  ನಗರದಲ್ಲಿ ಈಚೆಗೆ ನಡೆದ ದಾವಣಗೆರೆ ಎರಡನೇ ರಾಜಧಾನಿ ಹೋರಾಟ ಸಮಿತಿ ಸಭೆಯಲ್ಲಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ.ವೀರಭದ್ರಪ್ಪ ಹಾಗೂ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಮಾತನಾಡಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಡಾ.ಅಮಾರ್ತ್ಯ ಸೇನ್ ಅವರ ಸಿದ್ಧಾಂತ ಮತ್ತು ಕಲ್ಪನೆಯಂತೆ ದಾವಣಗೆರೆ ಎರಡನೇ ರಾಜಧಾನಿ ಕೇಂದ್ರ ಆಗಲು ಪೂರಕವಾಗಿ ಸಮೀಪದಲ್ಲಿ ತುಂಗಾಭದ್ರಾ ನದಿ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ -4 ಹಾದು ಹೋಗಿದೆ. ರೈಲ್ವೆ ಸಂಪರ್ಕ ಇದ್ದು, ರಾಷ್ಟ್ರದ ಯಾವುದೇ ಮೂಲೆಯಿಂದ ಇಲ್ಲಿಗೆ ಬಂದು ಹೋಗಲು ವ್ಯವಸ್ಥೆ ಇದೆ.
 
ಮಹಾರಾಷ್ಟ್ರದ ನಾಗಪುರದಲ್ಲಿ, ಕಾಶ್ಮೀರದ ಅನಂತನಾಗ್ ಮಹಾನಗರಗಳಲ್ಲಿ ಎರಡನೇ ರಾಜಧಾನಿ ಕೇಂದ್ರಗಳಾಗಿ ಸ್ಥಾಪನೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಎರಡನೇ ರಾಜಧಾನಿ ಮಾಡಿ, ಪ್ರತಿ ವರ್ಷ ಒಂದು ವಿಧಾನಸಭಾ ಅಧಿವೇಶನ ನಡೆಸಬೇಕು ಎಂದು ಆಗ್ರಹಿಸಿದರು. 

ವಕೀಲ ಬಳ್ಳಾರಿ ರೇವಣ್ಣ, ಕೆ. ಹಾಲಪ್ಪ, ಪ್ರೇಮಲತಾ, ಮಲ್ಲಿಕಾರ್ಜುನಪ್ಪ, ಪೂಜಾರ್ ರಾಜೇಂದ್ರ, ಗೌಡರ ಚನ್ನಬಸಪ್ಪ, ಎಲ್.ಎಸ್. ಹೇಮಾವತಿ, ಗುಡ್ಡದ ಕಲ್ಲಪ್ಪ, ಎಂ.ಸಿ. ಪಾಟೀಲ್, ಪಿ. ವೀರಭದ್ರಪ್ಪ, ಎಂ. ಶೈಲಜಾ, ಗುಜ್ಜರ್ ಉಮೇಶ್, ನಿರ್ಮಲಮ್ಮ, ಮಾಲತೇಶ್ ನಾಯ್ಕ, ಬಿ. ವಿಜಯಮೂರ್ತಿ ಉದಯ ಪ್ರಕಾಶ, ರಿಜ್ವಾನ್ ಸಾಹೇಬ್ ಇದ್ದರು. ಕೆ.ಜಿ. ಶರಣಪ್ಪ ಸ್ವಾಗತಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.