ADVERTISEMENT

ರಾಜ್ಯ ಆರ್ಯ ಈಡಿಗರ ಸಂಘಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 9:25 IST
Last Updated 19 ಅಕ್ಟೋಬರ್ 2011, 9:25 IST

ಬೆಂಗಳೂರು: ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷರಾಗಿ ಜೆ.ಪಿ. ನಾರಾಯಣಸ್ವಾಮಿ ಪುನರಾಯ್ಕೆಯಾಗಿದ್ದಾರೆ. ನಗರದ ಶೇಷಾದ್ರಿಪುರದಲ್ಲಿರುವ ಈಡಿಗರ ಭವನದಲ್ಲಿ ಭಾನುವಾರ ನಡೆದ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಾರಾಯಣಸ್ವಾಮಿ ಅವರು ಬಹುಮತದಿಂದ ಮರುಆಯ್ಕೆಯಾದರು.

ಉಪಾಧ್ಯಕ್ಷರಾಗಿ ಎಂ. ತಿಮ್ಮೇಗೌಡ, ಜಿ.ಕೆ. ಓಬಯ್ಯ, ಡಿ. ರವೀಂದ್ರನಾಥ್ ಹಾಗೂ ಮಹಿಳಾ ಮೀಸಲು ಸ್ಥಾನದ ಉಪಾಧ್ಯಕ್ಷೆಯಾಗಿ ಸುಧಾ ಕೃಷ್ಣಸ್ವಾಮಿ ಆಯ್ಕೆಗೊಂಡಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಜೆ. ಕಾಳೇಗೌಡ, ಖಜಾಂಚಿಯಾಗಿ ಕೆ.ಜಿ. ಹನುಮಂತರಾಜು, ಜಂಟಿ ಕಾರ್ಯದರ್ಶಿಯಾಗಿ ಟಿ. ವಾಸನ್ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಎನ್. ಉದಯ್ ಆಯ್ಕೆ ಆಗಿದ್ದಾರೆ.

ಬೆಂಗಳೂರು ನಗರ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ. ಅಂಬರೀಷ್, ಈಶ್ವರಯ್ಯ, ಕೆ.ಎಸ್. ದುಶ್ಯಂತ್, ಎನ್.ಟಿ. ನಾರಾಯಣ್, ಟಿ. ಮುತ್ತುರಾಜ್, ವಿ. ಶ್ರೀನಿವಾಸಯ್ಯ, ಟಿ. ಸುರೇಶ್ ಹಾಗೂ ಎಂ.ಪಿ. ಹರಿಚರಣ್ ಆಯ್ಕೆಯಾಗಿದ್ದಾರೆ.

ಜಿಲ್ಲೆಗಳ ಕಾರ್ಯಕಾರಿ ಸಮಿತಿ ಸದಸ್ಯರ ವಿವರ: ಬಿ.ವಿ. ಯಲ್ಲೇಗೌಡ (ಬೆಂಗಳೂರು ಗ್ರಾಮಾಂತರ), ಜಿ.ಎನ್. ನಾಗರಾಜ್ (ಚಿಕ್ಕಬಳ್ಳಾಪುರ), ಮೋಹನ್‌ಕುಮಾರ್ (ಗುಲ್ಬರ್ಗ), ರವಿಕುಮಾರ್ ಹೊಸಪೇಟೆ (ಗದಗ), ಎಂ. ನಾಗರಾಜ್ (ತುಮಕೂರು), ರವಿ ಗುತ್ತೇದಾರ್ (ಬೀದರ್), ಎ. ಲೀಲಾ ಮತ್ತು ಶುಭಾ (ಬೆಂಗಳೂರು ನಗರ: ಮಹಿಳಾ ಮೀಸಲು), ಮಂಗಳಾ (ಬೆಂಗಳೂರು ಗ್ರಾಮಾಂತರ: ಮಹಿಳಾ ಮೀಸಲು), ಚಂದ್ರಕಾಂತ ಕೃಷ್ಣಪ್ಪ ಈಳೀಗೇರ (ಬೆಳಗಾವಿ). ಆರ್.ಆರ್. ಶಿವಾನಂದ (ಶಿವಮೊಗ್ಗ), ಸಿ.ಎನ್. ದಿನೇಶ್ (ಮಂಡ್ಯ), ಮಂಜುಳಾ (ಮಂಡ್ಯ-ಮಹಿಳಾ ಮೀಸಲು), ಕೆ. ಅಣ್ಣಯ್ಯ (ಚಿಕ್ಕಮಗಳೂರು),  ಎ. ಉಮೇಶ್ (ಚಿತ್ರದುರ್ಗ), ಗಣಪತಿ ನಾ. ನಾಯ್ಕ (ಉತ್ತರ ಕನ್ನಡ), ಕೆ.ಸಿ. ಯೋಗೀಶ್ (ಹಾಸನ), ಉಷಾ ಕೃಷ್ಣಮೂರ್ತಿ (ಹಾಸನ-ಮಹಿಳಾ ಮೀಸಲು), ಎಂ.ಎಲ್. ಲಿಂಗರಾಜು (ಹಾವೇರಿ), ಲಕ್ಷ್ಮೀದೇವಿ (ತುಮಕೂರು-ಮಹಿಳಾ ಮೀಸಲು), ಎ. ನಾಗರಾಜ್ (ದಾವಣಗೆರೆ), ಚಂದ್ರಶೇಖರ ಆರ್. ಢವಳಗಿ (ಧಾರವಾಡ), ಎನ್. ರಾಮಮೂರ್ತಿ (ಚಾಮರಾಜನಗರ), ಎ.ಇ. ರಾಮಣ್ಣ (ಕೊಪ್ಪಳ), ಆರ್. ಶ್ರೀನಿವಾಸಪ್ಪ (ಕೋಲಾರ), ಎಂ.ಎನ್. ಮಂಜುನಾಥ (ರಾಮನಗರ), ಬಿ. ವಿದ್ಯಾಸಾಗರ ಕದಂಬ (ಮೈಸೂರು) ಮತ್ತು ಸೋಮರಾಯ (ಯಾದಗಿರಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.