ADVERTISEMENT

ಸಾವಯವ ಕೃಷಿ ಪದ್ಧತಿ ಲಾಭದಾಯಕ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 9:45 IST
Last Updated 15 ಅಕ್ಟೋಬರ್ 2012, 9:45 IST

ಹೊನ್ನಾಳಿ: ಸಾವಯವ ಕೃಷಿ ಪದ್ಧತಿ  ಲಾಭದಾಯಕವೂ ಹೌದು ಎಂದು ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲ್ಲೂಕಿನ ತ್ಯಾಗದಕಟ್ಟೆಯಲ್ಲಿ ಕೃಷಿ ಇಲಾಖೆ, ಸಹರಾ ಸಂಸ್ಥೆ ವತಿಯಿಂದ ಸಾವಯವ ಗ್ರಾಮ ಸ್ಥಳ ಯೋಜನೆ ಉದ್ಘಾಟನೆ, ನೀರಿನ ಟ್ಯಾಂಕ್, ಶಾಲಾ ಕೊಠಡಿಗಳಿಗೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯ್ತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ  ಸಮಿತಿ ಅಧ್ಯಕ್ಷೆ ಅಂಬಿಕಾ ರಾಜಪ್ಪ, ಸದಸ್ಯೆ ಶೀಲಾ ಗದ್ದಿಗೇಶ್, ಜಂಟಿ ಕೃಷಿ ನಿರ್ದೇಶಕ ಡಾ.ಆರ್.ಜಿ. ಗೊಲ್ಲರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರತ್ನಮ್ಮ ರಾಜಪ್ಪ, ಹುಣಸಘಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹನುಮಂತಪ್ಪ, ಎಚ್.ಜಿ. ರವಿಕುಮಾರ್, ಕೆ.ಎಲ್. ರಂಗನಾಥ್, ಕೆ.ಸಿ. ಮಲ್ಲಿಕಾರ್ಜುನ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.