ADVERTISEMENT

ಹೈಕೋರ್ಟ್ ಆದೇಶ ಉಲ್ಲಂಘಿಸಿ ಜಿಲ್ಲೆಯಲ್ಲಿ ನೀರು ಮಾರಾಟ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 6:50 IST
Last Updated 2 ಜುಲೈ 2012, 6:50 IST

ದಾವಣಗೆರೆ: ಜಿಲ್ಲೆಯಲ್ಲಿ ಐಎಸ್‌ಐ ಮಾರ್ಕ್ ಪಡೆಯದೇ ಕಾನೂನುಬಾಹಿರವಾಗಿ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರಾಟ ಮಾಡಲಾಗುತ್ತಿದೆ ಎಂದು `ಪ್ರಜಾಂದೋಲನ~ ಗ್ರಾಹಕರ  ಹೋರಾಟ ಸಂಘಟನೆ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಅವರಿಗೆ ಶನಿವಾರ ಮನವಿ ಸಲ್ಲಿಸಿದೆ.

ಹೈಕೋರ್ಟ್ ರಾಜ್ಯದ ವ್ಯಾಪ್ತಿಯಲ್ಲಿರುವ ಐಎಸ್‌ಐ ರಹಿತ ಪ್ಯಾಕೇಜ್ಡ್ ಕುಡಿಯುವ ನೀರು ಉತ್ಪಾದನೆ ಮತ್ತು ಮಾರಾಟ ನಿಷೇಧಿಸಿ ಮಧ್ಯಂತರ ಆದೇಶ ನೀಡಿದೆ. ಆದರೆ, ಜಿಲ್ಲೆಯಲ್ಲಿ ಶಿವಾಸ್, ನೈಸ್ ಪಿಡಿಡಬ್ಲ್ಯು, ಅಸ್ಮೊಟೆಕ್ (ಪ್ಯೂರ್), ಮೈಕ್ರಾನ್, ಬೂಸ್ಟರ್, ಗಗನ್, ನಂದಿ, ರಾಯಲ್ ಚಾಯ್ಸ, ವರ್ಷಾ ಅಕ್ವಾ, ಸ್ಕೈವಾರ್ ಮತ್ತಿತರರ 15ಕ್ಕೂ ಹೆಚ್ಚು ಘಟಕಗಳು ಕಾನೂನುಬಾಹಿರವಾಗಿ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರಾಟ ಮಾಡುತ್ತಿದ್ದಾರೆ ಎಂದು `ಪ್ರಜಾಂದೋಲನ~ದ ಅಧ್ಯಕ್ಷ ಲೋಚನೇಶ ಬಿ. ಹೂಗಾರ ಮನವಿಯಲ್ಲಿ ಆರೋಪಿಸಿದ್ದಾರೆ.

ಐಎಸ್‌ಐ ಮಾರ್ಕ್ ಪಡೆಯದೇ ನೀರನ್ನು ಉತ್ಪಾದಿಸುವುದಾಗಲೀ, ಮಾರಾಟ ಮಾಡುವುದಾಗಲೀ ಇಲ್ಲವೇ ಮಾರಾಟಕ್ಕಾಗಿ ಪ್ರದರ್ಶನ ಮಾಡುವುದೂ ಸಹ ಅಪರಾಧವಾಗಲಿದೆ. ಈ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ, ಜಿಲ್ಲಾ ವ್ಯಾಪ್ತಿಯಲ್ಲಿರುವ ಐಎಸ್‌ಐ ಮಾರ್ಕ್ ಪಡೆಯದೇ ಪ್ಯಾಕೇಜ್ಡ್ ಕುಡಿಯುವ ನೀರಿನ ಉತ್ಪಾದಕರ ಮತ್ತು ಮಾರಾಟಗಾರರ ವಿರುದ್ಧ  ಕ್ರಮ ಕೈಗೊಂಡು ಗ್ರಾಹಕರ ಆರೋಗ್ಯ ಕಾಪಾಡಬೇಕು ಎಂದು ಅವರು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.