ADVERTISEMENT

ಬರ ಅಧ್ಯಯನ ತಂಡಕ್ಕೆ ಭರ್ಜರಿ ಬಾಡೂಟ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 11:03 IST
Last Updated 18 ನವೆಂಬರ್ 2018, 11:03 IST
   

ದಾವಣಗೆರೆ: ಕೇಂದ್ರ ಕೃಷಿ ಇಲಾಖೆಯ ಅಮಿತಾಬ್ ಗೌತಮ್‌ ನೇತೃತ್ವದಬರ ಅಧ್ಯಯನ ತಂಡಕ್ಕೆ ಜಿಲ್ಲಾಡಳಿತಹರಪನಹಳ್ಳಿ ತಾಲ್ಲೂಕಿನ ನಜೀರ ನಗರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾನುವಾರ ಮಧ್ಯಾಹ್ನ ಭರ್ಜರಿ ಬಾಡೂಟಕ್ಕೆ ವ್ಯವಸ್ಥೆ ಮಾಡಿತ್ತು.

ಮಧ್ಯಾಹ್ನ 1.30ಕ್ಕೆ ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿ ತಾಲ್ಲೂಕು ಪ್ರವೇಶಿಸಿದ ಕೇಂದ್ರದ ಅಮಿತಾಬ್ ಗೌತಮ್, ಬಿ.ಕೆ. ಶ್ರೀವಾತ್ಸವ್‌ ಹಾಗೂ ಎಸ್.ಸಿ. ಶರ್ಮಾ ಒಳಗೊಂಡ ಬರ ಅಧ್ಯಯನ ತಂಡ ಬೆಣ್ಣೆಹಳ್ಳಿ ಗ್ರಾಮದ ಕೆಲವು ರೈತರ ಜಮೀನಿನಲ್ಲಿ ಬೆಳೆಹಾನಿ ವೀಕ್ಷಿಸಿತು.

ನಂತರ ಮಧ್ಯಾಹ್ನದ ಭೋಜನಕ್ಕೆ ಮೊರಾರ್ಜಿ ದೇಸಾಯಿ ಶಾಲೆಗೆ ಅಧಿಕಾರಿಗಳ ತಂಡ ಬಂದಿದೆ. ಕೇಂದ್ರದ ಅಧಿಕಾರಿಗಳಿಗೆ ಭೋಜನಕ್ಕೆ ಚಿಕನ್‌ ಮಸಾಲ, ಎಗ್‌ ಮಸಾಲ, ದಾಲ್, ರಾಗಿ ಮುದ್ದೆ, ಗೋಧಿ ಹುಗ್ಗಿ, ಸಲಾಡ್, ಬಾಳೆಹಣ್ಣುಗಳನ್ನು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.

ADVERTISEMENT

ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸ್‌ ಸಿಬ್ಬಂದಿಗೆ ಅನ್ನ-ಸಾಂಬಾರು, ಗೋಧಿ ಹುಗ್ಗಿಯ ಸಾಮಾನ್ಯ ಊಟ ವ್ಯವಸ್ಥೆ ಮಾಡಿತ್ತು. ಬಾಡೂಟ ಮಾಡಿದ ಬಳಿಕ ಅಧಿಕಾರಿಗಳ ತಂಡ ಜಗಳೂರು ಹಾಗೂ ದಾವಣಗೆರೆ ತಾಲ್ಲೂಕಿನ ಕೆಲ ಹಳ್ಳಿಗಳಿಗೆ ಭೇಟಿ ನೀಡಿ, ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಿತು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸಿ.ಇ.ಒ ಎಸ್‌. ಅಶ್ವತಿ, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.