ADVERTISEMENT

ಮಲೇಬೆನ್ನೂರು | ಬಿರುಗಾಳಿ ಮಳೆ: 10 ವಿದ್ಯುತ್‌ ಕಂಬಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 16:09 IST
Last Updated 17 ಜೂನ್ 2025, 16:09 IST
<div class="paragraphs"><p>ಮಲೇಬೆನ್ನೂರು ಸಮೀಪದ ಗುಳದಹಳ್ಳಿ ಶ್ರೀನಿವಾಸ ಕ್ಯಾಂಪಿನಲ್ಲಿ ಮಂಗಳವಾರ ಬಿರುಗಾಳಿ ಮಳೆಗೆ ತೆಂಗಿನಮರ ಕತ್ತರಿಸಿ ಬಿದ್ದ ಕಾರಣ ವಿದ್ಯುತ್‌ ಕಂಬ ಮಾರ್ಗ ತುಂಡಾಗಿದೆ.</p></div>

ಮಲೇಬೆನ್ನೂರು ಸಮೀಪದ ಗುಳದಹಳ್ಳಿ ಶ್ರೀನಿವಾಸ ಕ್ಯಾಂಪಿನಲ್ಲಿ ಮಂಗಳವಾರ ಬಿರುಗಾಳಿ ಮಳೆಗೆ ತೆಂಗಿನಮರ ಕತ್ತರಿಸಿ ಬಿದ್ದ ಕಾರಣ ವಿದ್ಯುತ್‌ ಕಂಬ ಮಾರ್ಗ ತುಂಡಾಗಿದೆ.

   

ಮಲೇಬೆನ್ನೂರು: ಪಟ್ಟಣ ಸೇರಿ ಸುತ್ತಮುತ್ತ ಬೀಸಿದ ಬಿರುಗಾಳಿ ಮಳೆ ಆರ್ಭಟಕ್ಕೆ ಮಂಗಳವಾರ 10 ವಿದ್ಯುತ್‌ ಕಂಬಗಳು ತುಂಡಾಗಿ ಬಿದ್ದವೆ.

ಸಮೀಪದ ಗುಳದಹಳ್ಳಿ ಶ್ರೀನಿವಾಸ ಕ್ಯಾಂಪ್‌ನಲ್ಲಿ ಬೀಸಿದ ಬಿರುಗಾಳಿ ಮಳೆಗೆ ತೆಂಗಿನಮರ ತುಂಡಾಗಿದೆ. ಪಟ್ಟಣದ ಇಂದಿರಾನಗರದಲ್ಲಿ ಸಿಲ್ವರ್‌ ಓಕ್‌ ಮರ ತುಂಡಾಗಿ ಬಿದ್ದು, ವಿದ್ಯುತ್‌ ಮಾರ್ಗ ಬಂದ್‌ ಆಗಿದೆ. ಪಟ್ಟಣದ ಪೊಲೀಸ್‌ ಠಾಣೆ ಬಳಿ ಕಾಂಪೌಂಡ್‌ ಗೋಡೆಗೆ ಹಾನಿಯಾಗಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ

ADVERTISEMENT

3 ವಿದ್ಯುತ್‌ ಪರಿವರ್ತಕಗಳು ವಾಲಿದ್ದು, ಹೊಸದಾಗಿ ಅಳವಡಿಸಿಬೇಕಿದೆ. 2 ಕಡೆ ಸಂಭವಿಸಿದ ಹಾನಿಯಿಂದ ಅಂದಾಜು ₹ 2 ಲಕ್ಷ ನಷ್ಟವಾಗಿದೆ ಎಂದು ಬೆಸ್ಕಾಂ ಶಾಖಾಧಿಕಾರಿ ಉಮೇಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪಟ್ಟಣದ ಪಶ್ಚಿಮ ಭಾಗದಲ್ಲಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದು, ಬುಧವಾರ ಸಂಜೆ ಹೊತ್ತಿಗೆ ಪುನರಾರಂಭವಾಗಲಿದೆ ಎಂದರು.

ಮಲೇಬೆನ್ನೂರು ಪಟ್ಟಣದ ಇಂದಿರಾನಗರದಲ್ಲಿ ಮಂಗಳವಾರ ಬಿರುಗಾಳಿ ಮಳೆಗೆ ಸಿಲ್ವರ್‌ ಓಕ್‌ ಮರ ಬಿದ್ದು 4 ವಿದ್ಯುತ್‌ ಕಂಬ ಮಾರ್ಗ  ತುಂಡಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.