ADVERTISEMENT

ಹರಪನಹಳ್ಳಿ: ಕೆರೆ ಒತ್ತುವರಿ ತೆರವಿಗೆ ಆಗ್ರಹಿಸಿ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 5:45 IST
Last Updated 20 ಸೆಪ್ಟೆಂಬರ್ 2021, 5:45 IST
ಹರಪನಹಳ್ಳಿ ತಾಲ್ಲೂಕು ಕರೆಕಾನಹಳ್ಳಿ ಕೆರೆ ಪ್ರದೇಶದಿಂದ ಎಂ.ಪಿ. ವೀಣಾ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿತು.
ಹರಪನಹಳ್ಳಿ ತಾಲ್ಲೂಕು ಕರೆಕಾನಹಳ್ಳಿ ಕೆರೆ ಪ್ರದೇಶದಿಂದ ಎಂ.ಪಿ. ವೀಣಾ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿತು.   

ಹರಪನಹಳ್ಳಿ: ಕೆರೆಯನ್ನು ಸಂರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಮತ್ತು ಕೆರೆ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಕರೆ ಕಾನಹಳ್ಳಿ ಗ್ರಾಮದಿಂದ ಪಾದಯಾತ್ರೆಗೆ ಭಾನುವಾರ ಚಾಲನೆ ನೀಡಿದರು.

ನೇತೃತ್ವ ವಹಿಸಿರುವದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ ಮಹಾಂತೇಶ್ ಮಾತನಾಡಿ, ‘ಕೆರೆ ಕಾನಹಳ್ಳಿ ಗ್ರಾಮದಲ್ಲಿರುವ ಕೆರೆ ಪ್ರದೇಶವನ್ನು ಕೆಲವರು ಅತಿಕ್ರಮಣ ಮಾಡಿ ಬಿತ್ತನೆ ಮಾಡಿದ್ದಾರೆ. ಸ್ಮಶಾನದ ಜಾಗವನ್ನು ಖಾಸಗಿ ವ್ಯಕ್ತಿಗೆ ಖಾತೆ ಬದಲಾವಣೆ ಮಾಡಿಕೊಡಲಾಗಿದೆ. ಒತ್ತುವರಿ ಮಾಡಿದ ಪ್ರದೇಶವನ್ನು ತೆರವುಗೊಳಿಸಿ ಕೆರೆಪ್ರದೇಶವನ್ನು ಸಂರಕ್ಷಿಸಬೇಕು’ ಎಂದು ಒತ್ತಾಯಿಸಿದರು.

ಮಳೆಯನ್ನೇ ಆಶ್ರಯಿಸಿರುವ ತಾಲ್ಲೂಕಿನಲ್ಲಿ ಜೀವನ ನಡೆಸುವುದೇ ಕಷ್ಟ. ಸಾವಿರಾರು ಕುಟುಂಬಗಳು ಕೆರೆಯನ್ನೇ ಆಶ್ರಯಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಕೆರೆಯಂಗಳವನ್ನು ಅತಿಕ್ರಮಿಸಿರುವ ಭೂಗಳ್ಳರಿಂದ ಭೂಮಿ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ಪಾದಯಾತ್ರೆಯು ಹುಲಿಕಟ್ಟೆ ಕ್ರಾಸ್, ಉದ್ಗಟ್ಟಿ ಕ್ರಾಸ್ ಮೂಲಕ ತೊಗರಿಕಟ್ಟೆಯನ್ನು ತಲುಪಿತು. ಸೋಮವಾರ ಬೆಳಿಗ್ಗೆ ನಾರಾಯಣಪುರ, ಯಲ್ಲಾಪುರದ ಮಾರ್ಗವಾಗಿ ಹರಪನಹಳ್ಳಿ ತಲುಪಿ ಮಿನಿ ವಿಧಾನಸೌಧ ತಲುಪಲಿದೆ.

ಮುಖಂಡರಾದ ಕೆ. ಸಿದ್ದಲಿಂಗನಗೌಡ, ದಾದಾಪೀರ್, ಹೂಮಾಲಿಬಾಯಿ, ನಾಗರಾಜ್ ನಾಯ್ಕ, ರಮೇಶ್, ತುಮನಪ್ಪ, ಅಂಜಿನಪ್ಪ, ಮಲ್ಲೇಶ್, ಲಾಲು ನಾಯ್ಕ್, ಧರ್ಮನಾಯ್ಕ, ಸೀತ್ಯನಾಯ್ಕ, ಯೋಗೇಂದ್ರ, ಮಂಜುನಾಥ್, ಸಂತೋಷ್, ಪ್ರಕಾಶ್, ಚಂದ್ರಪ್ಪ, ಶಿವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.