ADVERTISEMENT

ಪತಿ ಕೊಲೆ: ಪತ್ನಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 2:20 IST
Last Updated 4 ಮಾರ್ಚ್ 2021, 2:20 IST

ದಾವಣಗೆರೆ: ಅನೈತಿಕ ಸಂಬಂಧ ಕಾರಣದಿಂದ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಜಗಳೂರು ತಾಲ್ಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದ ವಾಸಿ ತಿಪ್ಪಮ್ಮ (45) ಹಾಗೂ ಅಜ್ಜಪ್ಪ (46) ಶಿಕ್ಷೆಗೆ ಗುರಿಯಾದವರು. ತಿಪ್ಪೇಸ್ವಾಮಿ ಕೊಲೆಯಾದವರು. ತಿಪ್ಪಮ್ಮ ಅಜ್ಜಪ್ಪನೊಂದಿಗೆ ಅನೈತಿಕ ಸಂಬಂಧದ ವಿಚಾರ ಇಬ್ಬರ ನಡುವೆ ಆಗಾಗ್ಗೆ ಜಗಳಕ್ಕೆ ಕಾರಣವಾಗಿತ್ತು. ಕೊಲೆ ಆರೋಪ ಸಾಬೀತಾದ ಕಾರಣ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಬಿ. ಗೀತಾ ತಿಪ್ಪಮ್ಮಳಿಗೆ ಜೀವಾವಧಿ ಶಿಕ್ಷೆ ಹಾಗೂ ₹40 ಸಾವಿರ ದಂಡ, ಮತ್ತೊಬ್ಬ ಆರೋಪಿ ಅಜ್ಜಪ್ಪನಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT