ADVERTISEMENT

ಐಸಿಎಆರ್‌ ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:47 IST
Last Updated 19 ಜುಲೈ 2019, 19:47 IST
ಐಸಿಎಆರ್ ಸಂಸ್ಥಾಪನಾ ದಿನದ ಅಂಗವಾಗಿ ನವದೆಹಲಿಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ 2018ನೇ ಸಾಲಿನ ‘ಪಂಡಿತ್ ದೀನ್‍ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಪ್ರೋತ್ಸಾಹ ಪುರಸ್ಕಾರವನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‍ ಅವರು ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್‌. ದೇವರಾಜ ಅವರಿಗೆ ಪ್ರದಾನ ಮಾಡಿದರು

ದಾವಣಗೆರೆ: ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ 2018ನೇ ಸಾಲಿನ ‘ಪಂಡಿತ್ ದೀನ್‍ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕೃಷಿ ವಿಜ್ಞಾನ ಪ್ರೋತ್ಸಾಹ ಪುರಸ್ಕಾರ ನೀಡಲಾಯಿತು.

ಐಸಿಎಆರ್ ಸಂಸ್ಥಾಪನಾ ದಿನದ ಅಂಗವಾಗಿ ನವದೆಹಲಿಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‍ ಅವರು ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್‌. ದೇವರಾಜ ಅವರಿಗೆ ಪ್ರದಾನ ಮಾಡಿದರು.

ಪ್ರಶಸ್ತಿಯು ₹2.25 ಲಕ್ಷ ಹಾಗೂ ಫಲಕಗಳನ್ನು ಒಳಗೊಂಡಿದೆ. 15 ವರ್ಷಗಳಿಂದ ಜಿಲ್ಲೆಯ ಉದ್ದಗಲಕ್ಕೆ ಕೃಷಿ ತಂತ್ರಜ್ಞಾನಗಳನ್ನು ರೈತರಿಗೆ ನೀಡಿ ಅಭಿವೃದ್ಧಿ ಕಾರ್ಯಕ್ರಮ ಹಾಗೂ ನೂತನ ಮಾದರಿಯ ಕೃಷಿ ಮೇಳ, ಮಣ್ಣು ಮತ್ತು ನೀರು ಪ್ರಯೋಗಾಲಯ, ಸಸ್ಯ ಚಿಕಿತ್ಸಾಲಯ, ಶನಿವಾರ ಸಾವಯವ ಸಂತೆ, ದಾವಣಗೆರೆ ಡೈರಿ ಫಾರ್ಮರ್ಸ್ ಅಸೋಸಿಯೇಷನ್ ಮತ್ತು ನಿಕ್ರಾ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ADVERTISEMENT

ಐಸಿಎಆರ್‌ನ ಮಹಾ ನಿರ್ದೇಶಕ ಡಾ. ತ್ರಿಲೋಚನ ಮಹಾಪಾತ್ರ, ಸಿರಿಗೆರೆಯ ತರಳಬಾಳು ರೂರಲ್ ಡೆವಲಪ್‍ಮೆಂಟ್ ಫೌಂಡೇಶನ್ ಸದಸ್ಯ ಡಾ. ಕೆ.ಪಿ.ಬಸವರಾಜಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.