ADVERTISEMENT

ದಾವಣಗೆರೆ | ಗರ್ಭಿಣಿ ಸಾವು: ವೈದ್ಯರ ನಿರ್ಲಕ್ಷ್ಯ –ಆರೋಪ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 3:09 IST
Last Updated 16 ಮಾರ್ಚ್ 2021, 3:09 IST
ಮೃತ ಕಾವ್ಯ
ಮೃತ ಕಾವ್ಯ   

ದಾವಣಗೆರೆ:ಹೆರಿಗೆ ವೇಳೆ ತಾಯಿ ಮತ್ತು ಶಿಶು ಇಲ್ಲಿನ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದು, ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

ಹರಪನಹಳ್ಳಿ ತಾಲ್ಲೂಕಿನ ನಿಲುವಂಜಿ ಗ್ರಾಮದ ನಿವಾಸಿ ಕಾವ್ಯ (22) ಮೃತರು. ಪೊಲೀಸರು ಸ್ಥಳಕ್ಕೆ ಬಂದು ವಾತಾವರಣ ತಿಳಿಗೊಳಿಸಿದರು.

ಹೆರಿಗೆಗಾಗಿ ಆರಂಭದಲ್ಲಿ ಹರ‍‍ಪನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯ ಮೇರೆಗೆ ಭಾನುವಾರ ತಡರಾತ್ರಿ ಹೆರಿಗೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಕಾವ್ಯ ಅವರಿಗೆ ರಕ್ತಹೀನತೆ ಹಾಗೂ ರಕ್ತದೊತ್ತಡ ಇದ್ದುದರಿಂದ ರಕ್ತ ನೀಡಲಾಯಿತು. ಆನಂತರ ರಕ್ತದೊತ್ತಡ ನಿಯಂತ್ರಣಕ್ಕೆ ಇಂಜಕ್ಷನ್ ನೀಡಲಾಗಿದೆ. ಸಾಮಾನ್ಯ ಹೆರಿಗೆಯಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದರು.

ADVERTISEMENT

‘ರಾತ್ರಿ ವೇಳೆ ಇದ್ದಕ್ಕಿದ್ದಂತೆ ಉಸಿರಾಟದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಕಾರ್ಡಿಯೊ ಪಲ್ಮನರಿ ರೆಸ್ಯುಸಿಟೇಷನ್ (ಹೃದಯ ಮತ್ತು ಶ್ವಾಸಕೋಶ ಮೊದಲಿನ ಸ್ಥಿತಿಗೆ ಬರುವಂತೆ ಮಾಡಲು ಎದೆಯನ್ನು ಅದುಮುವುದು) ಚಿಕಿತ್ಸೆ ವೇಳೆ ಬಾಯಿಯಲ್ಲಿನ ನೊರೆ ಶ್ವಾಸಕೋಶಕ್ಕೆ ತುಂಬಿಕೊಂಡು ಸಮಸ್ಯೆಯಾಯಿತು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್ ತಿಳಿಸಿದರು.

ವೈದ್ಯರ ನಿರ್ಲಕ್ಷ್ಯ: ‘ಹೆರಿಗೆ ವೇಳೆ ವೈದ್ಯರು ಸರಿಯಾಗಿ ಗಮನಿಸಿಕೊಳ್ಳಲಿಲ್ಲ. ನರ್ಸ್‌ ಒಬ್ಬರನ್ನು ‘ಆಂಟಿ’ ಎಂಬ ಶಬ್ದ ಬಳಸಿದ್ದರಿಂದ ಕೋಪಗೊಂಡು ಎದೆಯನ್ನು ಜೋರಾಗಿ ಅದುಮಿದ್ದರಿಂದ ಕಾವ್ಯ ಮೃತಪಟ್ಟಿದ್ದಾರೆ’ ಮೃತರ ಸಂಬಂಧಿ ಶಿವಲೀಲಾ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.