ADVERTISEMENT

ವಾಹನ ಸವಾರರಿಗೆ ಬೆದರಿಕೆ: ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 14:58 IST
Last Updated 28 ಮಾರ್ಚ್ 2020, 14:58 IST

ಚನ್ನಗಿರಿ: ಪಟ್ಟಣದ ಎಪಿಎಂಸಿ ಆವರಣದ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಪೊಲೀಸರಂತೆ ರಸ್ತೆಯಲ್ಲಿ ಹೋಗಿಬರುವ ಜನರಿಗೆ ಬೆದರಿಕೆ ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಏಳು ಜನರ ಕಿಡಿಗೇಡಿಗಳ ಗುಂಪು ಹೆದ್ದಾರಿಯಲ್ಲಿ ಹೋಗಿ ಬರುವ ವಾಹನಗಳ ಸವಾರರು ಹಾಗೂ ಜನರಿಗೆ ಕೋಲುಗಳನ್ನು ಹಿಡಿದುಕೊಂಡು ಬೆದರಿಕೆ ಹಾಕುತ್ತಾ ತಮಾಷೆ ಮಾಡುತ್ತಿತ್ತು.

ಈ ಬಗ್ಗೆ ಮಾಹಿತಿ ಪಡೆದಪೊಲೀಸರು ಸ್ಥಳಕ್ಕೆ ಬಂದು ಬೆದರಿಕೆ ಹಾಕುತ್ತಿದ್ದ ಶಕೀಲ್ ಹಾಗೂ ಶಾಹಿದ್ ಅವರನ್ನು ಬಂಧಿಸಿದ್ದಾರೆ. ಉಳಿದ ಐವರು ಆರೋಪಿಗಳು ಪರಾರಿಯಾಗಿದ್ದಾರೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.