ADVERTISEMENT

ಉಣಕಲ್ ಕೆರೆ: ಮೀನಿಗೆ ಬರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 6:01 IST
Last Updated 13 ಏಪ್ರಿಲ್ 2013, 6:01 IST

ಹುಬ್ಬಳ್ಳಿ: ನಗರದ ಉಣಕಲ್ ಕೆರೆ ಯಲ್ಲಿ ಈ ಬಾರಿ ಮೀನಿಗೆ ಬರವಿದೆ. ಟೆಂಡರ್ ಪಡೆದ ನಗರದ ಅಬ್ದುಲ್ ಹಮೀದ್ ಹೈರಾತಿ ಆಹ್ವಾನದ ಮೇರೆಗೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ಬಂದ ಜಿ. ಶಂಕರ ನೇತೃತ್ವದ 16 ಜನರ ತಂಡ ಗುರುವಾರ ಇಲ್ಲಿಗೆ ಆಗಮಿಸಿದೆ.

ಕಮೀಷನ್ ಆಧಾರದ ಮೇಲೆ ಉಣ ಕಲ್ ಕೆರೆಯಲ್ಲಿ ತಂಡ ಬಲೆ ಹಾಕು ತ್ತಿದ್ದು, ಗುರುವಾರ ಸುಮಾರು 70 ಕಿಲೋ ಮೀನನ್ನು ಹಿಡಿದಿದೆ.
`ಕಳೆದ ವರ್ಷ ಒಂದು ತಿಂಗಳವರೆಗೆ ಇದ್ದೆವು. ಆದರೆ ಈ ಬಾರಿ ಅಷ್ಟೊಂದು ಮೀನುಗಳಿಲ್ಲ. ಸರಿಯಾಗಿ ಮೀನಿನ ಮರಿಗಳನ್ನು ಬೆಳೆಸಿಲ್ಲ.

ಹೀಗಾಗಿ ಈ ಬಾರಿ ಸೀಜನ್ ಸರಿಯಾಗಿ ಆಗುವುದಿಲ್ಲ. ಒಂದು ಸಲ ಬಲೆ ಹಾಕಿದರೆ ಎರಡರಿಂದ ಎರಡೂವರೆ ತಾಸು ಕಾಯಬೇಕು. ಪ್ರತಿ ಕಿಲೋ ಮೀನಿಗೆ 10 ರೂಪಾಯಿ ಕಮೀ ಷನ್ ಸಿಗುತ್ತದೆ. ಶುಕ್ರವಾರ 3 ಬಾರಿ ಬಲೆ ಹಾಕಿದೆವು. ಸುಮಾರು 2 ಟನ್ ಮೀನು ಸಿಕ್ಕಿತು. ಆದರೂ ಇದು ಕಡಿಮೆ. ಈ ವರ್ಷ ಬೇಗನೇ ಸೀಜನ್ ಮುಗಿ 2ಯುತ್ತದೆ' ಎನ್ನುತ್ತಾರೆ ಜಿ. ಶಂಕರ.

`ಕೆರೆಯಲ್ಲಿ ಮೀನು ಕಡಿಮೆಯಿದ್ದು, ನಮ್ಮ ತಂಡಕ್ಕೆ ಸರಿಯಾದ ಕಮೀಷನ್ ಸಿಗುವುದಿಲ್ಲ. ಹೀಗಾಗಿ ದಿನವೊಂದಕ್ಕೆ 5 ಸಾವಿರ ರೂಪಾಯಿ ಬಾಡಿಗೆ ಆಧಾರದ ಮೇಲೆ ಕೆಲಸ ಕೇಳುತ್ತೇವೆ' ಎಂದು ಶಂಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT