ADVERTISEMENT

ಜಿಲ್ಲೆಯಲ್ಲಿ ಇಂದಿನಿಂದ ನೋಂದಣಿ ಪ್ರಕ್ರಿಯೆ ಸ್ಥಗಿತ - ಶೀಘ್ರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 5:25 IST
Last Updated 10 ಫೆಬ್ರುವರಿ 2012, 5:25 IST

ಹುಬ್ಬಳ್ಳಿ: `ಜಿಲ್ಲೆಯಲ್ಲಿ ಆಧಾರ್ ವಿಶಿಷ್ಟ ಗುರುತಿನ ಚೀಟಿಗೆ ನೋಂದಣಿ ಮಾಡಿ ಕೊಳ್ಳುವ ಪ್ರಕ್ರಿಯೆ ಶುಕ್ರವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದ್ದು, ಶೀಘ್ರವೇ ಪುನರಾರಂಭ ಮಾಡಲಾ ಗುವುದು~ ಎಂದು ಜಿಲ್ಲಾಧಿಕಾರಿ ದರ್ಪಣ್ ಜೈನ್ ತಿಳಿಸಿದರು.

ಆಧಾರ್ ಕಾರ್ಡ್ ನೋಂದಣಿ ಕಾರ್ಯ ಸ್ಥಗಿತಗೊಳ್ಳುವ ಸುದ್ದಿಯಿಂದ ಸಾರ್ವಜನಿಕರು ಆತಂಕಗೊಂಡಿರುವ ಹಿನ್ನೆಲೆಯಲ್ಲಿ `ಪ್ರಜಾವಾಣಿ~ ಜಿಲ್ಲಾಧಿ ಕಾರಿಗಳನ್ನು ಸಂಪರ್ಕಿಸಿದಾಗ ಅವರು ಈ ಸ್ಪಷ್ಟನೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳ ಲಾಗಿದ್ದು, ಹೊಸ ಆದೇಶ ಬಂದ ತಕ್ಷಣ ಮತ್ತೆ ನೋಂದಣಿ ಪ್ರಕ್ರಿಯೆ ಆರಂಭ ವಾಗಲಿದೆ. ತಾತ್ಕಾಲಿಕ ವಾಗಿ ನೋಂದ ಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದ ರಿಂದ ಯಾರೂ ಆತಂಕಪಡಬೇಕಿಲ್ಲ ಎಂದು ಅವರು ಹೇಳಿದರು.

`ಫೆ. 10ರಿಂದ ನೋಂದಣಿ ಪ್ರಕ್ರಿಯೆ ಯನ್ನು ನಿಲ್ಲಿಸಬೇಕು ಎಂದು ಹತ್ತು ದಿನಗಳ ಹಿಂದೆಯೇ ಸರ್ಕಾರದಿಂದ ಸೂಚನೆ ಸಿಕ್ಕಿದೆ. ಕೇಂದ್ರ ಕಾರ್ಡ್ ವಿತರಣೆಯಲ್ಲಿ ಕೆಲವು ಮಾರ್ಪಾಡು ಮಾಡಲು ಉದ್ದೇಶಿಸಿದ್ದರಿಂದ ಈ ಆದೇಶ ಬಂದಿದ್ದು, ನೋಂದಣಿ ಕಾರ್ಯ ಪುನರಾರಂಭಿಸಲು ಶೀಘ್ರದಲ್ಲೇ ಅನು ಮತಿ ಸಿಗಲಿದೆ. ಇದುವರೆಗೆ ನೋಂದಣಿ ಆಗದಿರುವ ಜಿಲ್ಲೆಯ ಎಲ್ಲ ಜನರ ಹೆಸರನ್ನೂ ನೋಂದಣಿ ಮಾಡಿಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

ಕಳೆದ ಹತ್ತು ದಿನಗಳಲ್ಲಿ ಜಿಲ್ಲೆಯಲ್ಲಿ ಕೇವಲ ನಾಲ್ಕು ಕೇಂದ್ರಗಳು (ಧಾರವಾಡದಲ್ಲಿ ಮೂರು ಮತ್ತು ಹುಬ್ಬಳ್ಳಿಯಲ್ಲಿ ಒಂದು) ಕಾರ್ಯ ನಿರ್ವಹಿಸುತ್ತಿದ್ದವು. ಶುಕ್ರವಾರದಿಂದ ಅವು ಕೂಡ ಬಂದ್ ಆಗಲಿವೆ. ಈಗಾಗಲೇ ನೋಂದಣಿ ಮಾಡಿಕೊಂಡವರಿಗೆ ಕಾರ್ಡ್‌ಗಳು ಅಂಚೆ ಮೂಲಕ ಬರಲಿವೆ ಎಂದು ಅವರು ವಿವರಿಸಿದರು.

ಬೆಳಗಾವಿ ವಿಭಾಗದಲ್ಲೇ ಧಾರವಾಡ ಜಿಲ್ಲೆ ನೋಂದಣಿ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 181 ನೋಂದಣಿ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದವು. ಗ್ರಾಮಾಂತರ ಭಾಗದಲ್ಲೂ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು~ ಎಂದ ತಿಳಿಸಿದರು.

`ಸಾರ್ವಜನಿಕ ಸ್ಥಳಗಳಲ್ಲಿ ನೋಂದಣಿ ಕೇಂದ್ರಗಳನ್ನು ತೆರೆದಿದ್ದರಿಂದ ಭಾರಿ ಜನಸಂದಣಿ ಸೇರಿ ಗೊಂದಲ ಉಂಟಾ ಗಿತ್ತು. ಕೆಲ ಮಧ್ಯವರ್ತಿಗಳು ಪರಿಸ್ಥಿತಿ ದುರ್ಲಾಭ ಪಡೆದು ಬಡವರಿಗೆ ಮೋಸ ಮಾಡುತ್ತಿದ್ದ ಪ್ರಕರಣಗಳು ನಮ್ಮ ಗಮನಕ್ಕೂ ಬಂದಿದ್ದವು. ಹೀಗಾಗಿ ಸಾರ್ವಜನಿಕ ಸ್ಥಳಗಳನ್ನು ಬಿಟ್ಟು ಸಂಸ್ಥೆಗಳು ಹಾಗೂ ಶಾಲೆಗಳ ಮೂಲಕ ನೋಂದಣಿ ಕಾರ್ಯವನ್ನು ನಡೆಸಲಾ ಗುತ್ತಿತ್ತು~ ಎಂದು ಹೇಳಿದರು.

`ಜಿಲ್ಲೆಯ ಎಲ್ಲ ನಾಗರಿಕರಿಗೂ ಆಧಾರ್ ಚೀಟಿಯನ್ನು ನೀಡಲಾಗು ವುದು. ವದಂತಿಗಳಿಗೆ ಕಿವಿಗೊಟ್ಟು ಯಾರೂ ಈ ವಿಷಯವಾಗಿ ಆತಂಕಪ ಡಬೇಕಿಲ್ಲ~ ಎಂದ ಅವರು, `ನೋಂದಣಿ ಪ್ರಕ್ರಿಯೆ ಪುನರಾರಂಭ ಮಾಡಿದಾಗ ಹೆಚ್ಚಿನ ಕೇಂದ್ರಗಳನ್ನು ತೆರೆದು ಎಲ್ಲರಿಗೂ ಅವಕಾಶ ಮಾಡಿಕೊಡಲಾ ಗುವುದು~ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.