ADVERTISEMENT

ಬಾಲಕಿ ಕೃತಿ ಮೆಚ್ಚಿ ಪ್ರಧಾನಿ ಪತ್ರ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 9:55 IST
Last Updated 9 ಮಾರ್ಚ್ 2018, 9:55 IST
ಬಾಲಕಿ ಕೃತಿ ಮೆಚ್ಚಿ ಪ್ರಧಾನಿ ಪತ್ರ
ಬಾಲಕಿ ಕೃತಿ ಮೆಚ್ಚಿ ಪ್ರಧಾನಿ ಪತ್ರ   

ಧಾರವಾಡ: 6ನೇ ತರಗತಿ ಬಾಲಕಿ ಬರೆದ ‘ವಿಷನ್ ಆಫ್‌ ಇಂಡಿಯಾ’ ಎಂಬ ಕೇಂದ್ರ ಸರ್ಕಾರದ ಯೋಜನೆ ಕುರಿತ ಪುಸ್ತಕವನ್ನು ಮುಕ್ತಕಂಠದಿಂದ ಶ್ಲಾಘಿಸಿ ಪ್ರಧಾನಿ ನರೇಂದ್ರ ಮೋದಿ, ಬಾಲಕಿಗೆ ಮೆಚ್ಚುಗೆ ಪತ್ರ ಬರೆದಿದ್ದಾರೆ.

ನಗರದ ಮಲ್ಲಸಜ್ಜನ ಇಂಗ್ಲಿಷ್ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಸಿರಿ ದೊಡ್ಡಮನಿ, ಮೋದಿ ಅವರು ಪ್ರಧಾನಿ ಆದ ನಂತರ ಜಾರಿಗೆ ತಂದ ಯೋಜನೆಗಳ ಕುರಿತು ಪುಸ್ತಕ ಬರೆದಿದ್ದಾಳೆ. ಈ ಪುಸ್ತಕದ ಬಗ್ಗೆ ಮೆಚ್ಚುಗೆ ಪತ್ರದ ಜತೆಗೆ‘ಎಕ್ಸಾಮ್ ಆಫ್ ವಾರಿಯರ್ಸ್‌’ ಎಂಬ ಪುಸ್ತಕವನ್ನು ಪ್ರಧಾನಿ ಮೋದಿ ಕಳುಹಿಸಿದ್ದಾರೆ. ಶಿಕ್ಷಕರು, ಸ್ನೇಹಿತರು ಹಾಗೂ ಪೋಷಕರಿಗೆ ಶುಭಾಶಯ ತಿಳಿಸು ಎಂದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT