ಹುಬ್ಬಳ್ಳಿ: ದೇಶದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಗೊಳ್ಳಲು ಹಾಗೂ ಲೋಕದ ಕಲ್ಯಾಣಕ್ಕಾಗಿ ಬೆಳಗಾವಿ ತಾಲ್ಲೂಕಿನಲ್ಲಿ 2012ರಲ್ಲಿ ಅಯುತ ಚಂಡಿ ಮಹಾಯಜ್ಞ ಹಾಗೂ ಅತಿ ರುದ್ರ ಮಹಾಯಾಗ ನಡೆಯಲಿದೆ.
ಭೂತರಾಮನ ಹಟ್ಟಿಯ ಶ್ರೀಕ್ಷೇತ್ರ ಪಂಚಗ್ರಾಮ ಮುಕ್ತಿಮಠದಲ್ಲಿ ಜನವರಿ 14ರಿಂದ 22ರ ವರೆಗೆ ಯಾಗ ನಡೆ ಯಲಿದೆ.
ಯಜ್ಞಕ್ಕೆ ಸಂಬಂಧಿಸಿ ಚರ್ಚಿಸಲು ಹಾಗೂ ಹುಬ್ಬಳ್ಳಿಯಲ್ಲಿ ಸಮಿತಿ ರಚಿ ಸುವ ಸಲುವಾಗಿ ಕಾಟನ್ ಮಾರ್ಕೆಟ್‌ನ ವರ್ತಕರ ಸಂಘದಲ್ಲಿ ಭಾನುವಾರ ನಡೆದ ಸಭೆಯ ನಂತರ ಮಾತನಾಡಿದ ಶಿವಸಿದ್ಧ ಸೋಮೇಶ್ವರ ಶಿವಾ ಚಾರ್ಯರು, ಪ್ರಪಂಚದಲ್ಲಿ ಇಂದು ಅನೇಕ ವಿಧದ ಸಮಸ್ಯೆಗಳು ತಲೆ ದೋರಿದ್ದು ಇದರ ಪರಿಹಾರಕ್ಕಾಗಿ ಯಜ್ಞ-ಯಾಗಾದಿಗಳ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಸೇರಿ ದಂತೆ ಅನೇಕ ಗಣ್ಯರನ್ನು ಆಹ್ವಾನಿಸುವ ಆಲೋಚನೆ ಇದ್ದು ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಂಚಲ, ಗುಜರಾತ್, ಮಧ್ಯಪ್ರದೇಶ, ಆಂಧ್ರ ಪ್ರದೇಶ, ತಮಿಳುನಾಡು, ಒರಿಸ್ಸಾ ಮತ್ತಿತರ ರಾಜ್ಯಗಳಿಂದ ಭಕ್ತರು ಆಗ ಮಿಸಲಿದ್ದಾರೆ. ಲಕ್ಷಾಂತರ ಮಂದಿ ಭಾಗ ವಹಿಸುವರು ಎಂದು ಅವರು ವಿವ ರಿಸಿದರು.
ಯಾಗಕ್ಕೆ ಸಂಬಂಧಿಸಿ ವಿವಿಧ ಕಡೆಗಳಲ್ಲಿ ಸಮಿತಿಗಳನ್ನು ರಚಿಸ ಲಾಗುತ್ತಿದೆ. ಈ ಸಮಿತಿಗಳಿಂದ ಆಯ್ದ ವ್ಯಕ್ತಿಗಳನ್ನು ಸೇರಿಸಿ ಕೇಂದ್ರ ಸಮಿತಿ ಯೊಂದನ್ನು ರಚಿಸಲಾಗುವುದು ಎಂದು ಅವರು ತಿಳಿಸಿದರು.
ಯಾಗದ ಜೊತೆ ಒಂಬತ್ತು ಸಾವಿರ ಕನ್ನಿಕಾ ಪೂಜೆ, 11 ಸಾವಿರ ಮುತ್ತೈದೆ ಯರ ಉಡಿ ತುಂಬುವುದು, 108 ಮಂಟಪ ಪೂಜೆ, 108 ದೇವಿ ವಿಗ್ರಹ ಪ್ರತಿಷ್ಠಾಪನೆ ಹಾಗೂ 108 ಅಡಿ ಎತ್ತರದ ಶಿವನ ಮೂರ್ತಿ ಪ್ರತಿಷ್ಠಾಪನೆ ಇತ್ಯಾದಿ ನಡೆಯಲಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಯಜ್ಞ-ಯಗಾದಿಗಳು ನಡೆಯುವುದು ಕರ್ನಾಟಕದಲ್ಲಿ ಇದೇ ಮೊದಲು ಎಂದು ಸ್ವಾಮೀಜಿ ಅಭಿ ಪ್ರಾಯಪಟ್ಟರು.
2002 ಜನವರಿ 18ರಿಂದ ಒಂದು ವರ್ಷ ನಿರಾಹಾರ ವೃತ ಕೈಗೊಂಡದ್ದು, ಪ್ರತಿವರ್ಷ ಅನ್ನಾಹಾರ ಬಿಟ್ಟು ವೃತ ನಡೆಸುತ್ತಿರುವುದು, ಕೆಲವು ತಿಂಗಳ ಹಿಂದೆ ಧಾರವಾಡ ಬಳಿಯ ಮಮಸೂರ ಗ್ರಾಮದಲ್ಲಿ ಬೆಟ್ಟದಲ್ಲಿ ಮೌನಾನುಷ್ಠಾನ ಮಾಡಿದ್ದು ಇತ್ಯಾದಿಗಳನ್ನು ಅವರು ನೆನ ಪಿಸಿದ ಶ್ರೀಗಳು, ಮಠದ ಆಶ್ರಯದಲ್ಲಿ ಮುಂಡಗೋಡ ತಾಲ್ಲೂಕಿನಲ್ಲಿ ಗುರು ಕುಲ ಪರಂಪರೆಯ ಶಾಲೆಯನ್ನು ಸ್ಥಾಪಿ ಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು.
ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಐ. ಮುನವಳ್ಳಿ, ಮುಖಂಡ ರಾರ ಕಾಡಯ್ಯ ಹಿರೇಮಠ, ಎಸ್.ಎಸ್. ಹಿರೇಮಠ, ಜಿ.ಪಿ. ಹಿರೇಮಠ, ಪರ ಮೇಶ್ವರ ವಿಭೂತಿ ಹಾಗೂ ಹಳ್ಳಿಗೇರಿ ಮಠ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತ ರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.