ADVERTISEMENT

ಶ್ರೀಕಂಠದತ್ತ ಒಡೆಯರ್ ನಿಧನಕ್ಕೆ ಸಂತಾಪ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 6:24 IST
Last Updated 12 ಡಿಸೆಂಬರ್ 2013, 6:24 IST

ಹುಬ್ಬಳ್ಳಿ: ಮೈಸೂರು ರಾಜಮನೆ­ತನದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ಹಿನ್ನೆಲೆಯಲ್ಲಿ ಅವಳಿ ನಗರದ ವಿವಿಧ ಸಂಘ–ಸಂಸ್ಥೆಗಳು, ಸಂಘಟನೆಗಳು ಹಾಗೂ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ, ಒಡೆಯರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಬಿಜೆಪಿ ಯುವ ಮೋರ್ಚಾ: ಮಂಗಳವಾರ ಸಭೆ ಸೇರಿ ಸಂತಾಪ ವ್ಯಕ್ತಪಡಿಸಲಾಯಿತು. ಸಭೆಯಲ್ಲಿ ಯುವ  ಮೋರ್ಚಾ ಅಧ್ಯಕ್ಷ ರಾಜು ವಿ.ಜರತಾರಘರ, ಬಿಜೆಪಿ ಮಹಾ­ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಛಬ್ಬಿ, ಮುಖಂಡರಾದ ಚಂದ್ರು ಗಾಯಕವಾಡ, ಜಗದೀಶ ಕಂಬಳಿ, ಮೋಹನಲಾಲ ಜೈನ, ರಂಗಾ ಕಠಾರೆ, ಮಲ್ಲಿಕಾರ್ಜುನ ಮರಿ­ಗೌಡ್ರ, ಹನುಮಂತ ದೊಡ್ಡ­ಮನಿ ಪಾಲ್ಗೊಂಡಿದ್ದರು.

ವ್ಯಾಪಾರಸ್ಥರ ಸಂಘ: ಒಡೆಯರ್ ನಿಧನದಿಂದ ರಾಜ್ಯ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಂ­ತಾಗಿದೆ ಎಂದು ಹುಬ್ಬಳ್ಳಿಯ ಅಮರ­ಗೋಳ ಎಪಿಎಂಸಿಯ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ತಿಳಿಸಿದ್ದಾರೆ. ಪಂಚಮಸಾಲಿ ಸಮಾಜ ಶಹರ ಘಟಕ: ಮಂಗಳವಾರ ಸಂಜೆ ಅಯೋಧ್ಯಾ­ನಗರದ ಗಾಂಧಿ ಭವನದಲ್ಲಿ ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಟ್ರಸ್ಟ್ ವತಿ­ಯಿಂದ ಸಂತಾಪ ಸಭೆ ನಡೆಸಲಾಯಿತು.

ಸಮಾಜದ ಮುಖಂಡ­ರಾದ ನೀಲಕಂಠ ಅಸೂಟಿ, ಶಿವಾನಂದ ಬೆಲ್ಲದ, ರಾಜಶೇಖರ ಮೆಣಸಿನ­ಕಾಯಿ, ಕಲ್ಲಪ್ಪ ಯಲಿವಾಳ, ಗಿರೀಶ ಸುಂಕದ, ಕುಮಾರ ಕುಂದನಹಳ್ಳಿ, ಬಸವರಾಜ ಕಿತ್ತೂರ,ಮಹೇಶ ಕಂಬಾರ, ರವಿ ಹೊಸೂರ, ಓಂ ಸಂಗಮೇಶ ಹಾಜರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.