ADVERTISEMENT

ಸಿಲಿಂಡರ್ ಕಾದಿರಿಸಲು ಮಿಸ್ ಕಾಲ್ ಕೊಡಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 5:00 IST
Last Updated 18 ಆಗಸ್ಟ್ 2012, 5:00 IST

ಹುಬ್ಬಳ್ಳಿ: ಅಡುಗೆ ಸಿಲಿಂಡರ್ ಕಾದಿರಿಸಲು ಇನ್ನು ಮುಂದೆ ದೂರವಾಣಿ ಇಲ್ಲವೆ ಮೊಬೈಲ್ ಫೋನ್ ಮೂಲಕ ಸಂಪರ್ಕಿಸಬೇಕಿಲ್ಲ. ಎಸ್‌ಎಂಎಸ್ ಮಾಡಬೇಕಿಲ್ಲ. ಖುದ್ದು ವಿತರಕರ ಬಳಿ ಹೋಗಬೇಕಿಲ್ಲ. ಮೊಬೈಲ್ ಫೋನ್ ಮೂಲಕ ಮಿಸ್ ಕಾಲ್ ಕೊಟ್ಟರೆ ಸಿಲಿಂಡರ್ ಮುಂಗಡವಾಗಿ ಕಾದಿರಿಸಲಾಗುತ್ತದೆ. 

 ಹಾಗೆ ಮಿಸ್ ಕಾಲ್ ಕೊಟ್ಟಾಕ್ಷಣ ಕಾಲ್ ಕಟ್ ಆಗುತ್ತದೆ. ಇದಾದ 30 ಸೆಕೆಂಡುಗಳಲ್ಲಿ ಸಿಲಿಂಡರ್ ಮುಂಗಡ ವಾಗಿ ಕಾದಿರಿಸಲಾಗಿದೆ ಎಂಬ ಎಸ್‌ಎಂಎಸ್ ನಿಮ್ಮ ಮೊಬೈಲ್ ಫೋನ್‌ಗೆ ಬರಲಿದೆ. ನಂತರ ನಿಗದಿತ ದಿನ ಸಿಲಿಂಡರ್ ನಿಮ್ಮ ಮನೆಗೇ ತಲುಪಿದೆ ಎನ್ನುವ ಗ್ಯಾರಂಟಿಯೂ ಸಿಗಲಿದೆ.

 ಇದು ಹೇಗೆಂದರೆ ಇನ್ನು ಮುಂದೆ ಸಿಲಿಂಡರ್ ವಿತರಿಸುವ ಹುಡುಗ ತನ್ನ ಬಳಿ ಇರುವ `ಹ್ಯಾಂಡೆಲ್ ಮಶೀನ್~ಗೆ ನಿಮಗೆ ನೀಡಿರುವ ಸ್ಮಾರ್ಟ್ ಕಾರ್ಡ್ ಟಚ್ ಮಾಡುತ್ತಾನೆ. ಇದಾದ ನಂತರ ಸಿಲಿಂಡರ್ ನಿಮ್ಮ ಮನೆಗೆ ತಲುಪಿಸಿದ್ದೇವೆ ಎನ್ನುವ ಎಸ್‌ಎಂಎಸ್ ನಿಮ್ಮ ಮೊಬೈಲ್ ಫೋನಿನ ಮೆಸೇಜ್ ಬಾಕ್ಸ್‌ಗೆ ಬಂದು ಬೀಳುತ್ತದೆ.

ಇಷ್ಟೆಲ್ಲ ಕಸರತ್ತು ಯಾಕೆ? ಈ ಸ್ಮಾರ್ಟ್ ಕಾರ್ಡ್ ಸೌಲಭ್ಯ ಪಡೆ ಯುವು ದರಿಂದ ಬೇರೆಯವರಿಗೆ ನಿಮ್ಮ ಸಿಲಿಂಡರ್ ಮಾರಾಟ ಆಗುವುದಿಲ್ಲ. ಊರಿಗೆ ಹೋಗಿದ್ದರೆ, ಮಾರುಕಟ್ಟೆಗೆ ತೆರಳಿದ್ದರೆ ಸಿಲಿಂಡರ್ ವಿತರಿಸುವ ಹುಡುಗ ವಾಪಸು ಹೋಗುತ್ತಾನೆ. ಒಂದೆರಡು ದಿನಗಳವರೆಗೆ ಮತ್ತೆ ಮನೆ ಬಾಗಿಲಿಗೆ ಬರುತ್ತಾನೆ. ಆಗಲೂ ಸಿಗದಿದ್ದರೆ ನೀವು ಕಾಯ್ದಿದಿರಿಸಿದ ಸಿಲಿಂಡರ್ ರದ್ದಾಗುತ್ತದೆ. ಹಾಗೆ ರದ್ದುಗೊಂಡಿದೆ ಎನ್ನುವ ಎಸ್‌ಎಂಎಸ್ ಕೂಡ ನಿಮಗೆ ಸಿಗುತ್ತದೆ. ಮತ್ತೆ ನೀವು ಮಿಸ್ ಕಾಲ್ ಮಾಡಬಹುದು!

ಈ ಯೋಜನೆಯನ್ನು ಇಲ್ಲಿಯ ದೇಶಪಾಂಡೆನಗರದಲ್ಲಿಯ ಭಾರತ ಗ್ಯಾಸ್ ವಿತರಕರಾದ ಗರಗಟ್ಟೆ ಏಜೆನ್ಸಿ ಸ್ ಆರಂಭಿಸಿದ್ದು, 24 ಗಂಟೆಯೂ ಲಭ್ಯವಿರುತ್ತದೆ. ಆದರೆ ಇದೆಲ್ಲ ಸಾಧ್ಯವಾಗುವುದು ಅವರು ಗ್ರಾಹಕರಾಗಿದರೆ ಮಾತ್ರ.

ಸ್ಮಾರ್ಟ್ ಕಾರ್ಡ್ ಪಡೆಯಲು ಗ್ರಾಹಕರು ತಮ್ಮ ಭಾವಚಿತ್ರ, ಗುರುತಿ ನಪತ್ರ ಹಾಗೂ ಈಗಾಗಲೇ ನೀಡಿರುವ ಗ್ಯಾಸ್ ಪಾಸ್‌ಬುಕ್ ಹಾಜರು ಪಡಿಸಬೇಕು.

ಈ ಯೋಜನೆ ಯನ್ನು ಅವಳಿ ನಗರದಲ್ಲಿ ಇದೇ ಮೊದಲ ಬಾರಿಗೆ ಗರ ಗಟ್ಟೆ ಏಜೆನ್ಸಿಯು ಪರಿಚಯಿಸುತ್ತಿದ್ದು, ತನ್ನ 20 ಸಾವಿರ ಗ್ರಾಹಕರಲ್ಲಿ ಈಗಾಗಲೇ 3 ಸಾವಿರ ಗ್ರಾಹಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿದೆ.

`ಇದರಿಂದ ಗ್ರಾಹಕರಿಗೆ, ವಿತರಕರಾದ ನಮಗೆ ಹಾಗೂ ಕೇಂದ್ರ ಸರ್ಕಾರಕ್ಕೂ ಉಪಯೋಗವಾಗಲಿದೆ. ಇನ್ನು ಮುಂದೆ ಅಕ್ರಮವಾಗಿ ಸಿಲಿಂಡರ್ ಮಾರಾಟಕ್ಕೆ ತಡೆಯಾ ಗಲಿದೆ. ಮುಖ್ಯ ವಾಗಿ ಪಾರದರ್ಶ ಕವಾಗಿ ಸಿಲಿಂಡರ್ ವಿತರಿಸಲು ಸಾಧ್ಯ ವಾಗುತ್ತದೆ~ ಎನ್ನುತ್ತಾರೆ ಗರಗಟ್ಟೆ ಏಜೆನ್ಸಿ ವಿತರಕ ಅನೂಪ್ ಗರಗಟ್ಟೆ.

`ಆಕಸ್ಮಿಕವಾಗಿ ನಮ್ಮ ಕಚೇರಿ ಬಳಿ ಬಂದ ಗ್ರಾಹಕರು ಅಂಚೆ ಡಬ್ಬಿ ರೀತಿ ಇರುವ ಬುಕ್ಕಿಂಗ್ ಟರ್ಮಿನಲ್ ಕಿಯಾಕ್ಸ್ ಎಂಬ ಪೆಟ್ಟಿಗೆಗೆ ಸ್ಮಾರ್ಟ್ ಕಾರ್ಡ್‌ನ್ನು ಟಚ್ ಮಾಡಿದರೆ ಮುಂಗಡವಾಗಿ ಕಾದಿರಿಸಿದ ವಿವರ ತೋರಿಸುತ್ತದೆ. ಇದು ನಮ್ಮ ಕಚೇರಿ ಹೊರಗಿದ್ದು, ಸರ್ವರ್ ಸಂಪರ್ಕ ದಲ್ಲಿರುತ್ತದೆ. ಹೀಗೆ ಗ್ರಾಹಕರಿಗೆ ಅನುಕೂಲ7ವಾಗುವ ಸಲುವಾಗಿ ಈ ಯೋಜನೆ~ ಎನ್ನುತ್ತಾರೆ ಅನೂಪ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.