ADVERTISEMENT

ಸೇನೆಗೆ ಸಿಎನ್‌ಸಿ ಲೇಥ್ ಮಷಿನ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 6:00 IST
Last Updated 6 ಫೆಬ್ರುವರಿ 2012, 6:00 IST

ಹುಬ್ಬಳ್ಳಿ: `ಮೆವಿನ್ ಮಷಿನ್ ಟೂಲ್ಸ್ ಲಿ. ಕಂಪೆನಿಯು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳನ್ನು ತಯಾರಿ ಸುವಲ್ಲಿ ಮುಂಚೂಣಿಯಲ್ಲಿದೆ~ ಎಂದು ಕಂಪೆನಿಯ ಎಂಜಿನಿಯರ್ ಎ.ಎಂ. ವರ್ಣೇಕರ್ ನುಡಿದರು.

ತಾರಿಹಾಳದ ತಮ್ಮ ಸಂಸ್ಥೆಯಲ್ಲಿ ಕಂಪೆನಿಯ ನೂತನ ಉತ್ಪನ್ನವಾದ `ಸಿಎನ್‌ಸಿ (ಕಂಪ್ಯೂಟರ್ ನ್ಯೂಮರಿ ಯಲ್ ಕಂಟ್ರೋಲ್ ಲೇಥ್ ಮಷಿನ್) ಕಂಟ್ರೋಲರ್ ಮತ್ತು ಡ್ರೈವ್‌ಗಳ~ ಪ್ರಾತ್ಯಕ್ಷಿಕೆಯನ್ನು ತೋರಿಸಿದ ಬಳಿಕ ಶನಿವಾರ ಅವರು ಸುದ್ದಿಗಾರೊಂದಿಗೆ ಮಾತನಾಡಿದರು.

3.50ಕೋಟಿ ರೂ. ಸಿಎನ್‌ಸಿ ಮಷಿನ್ ಸಹಾಯದಿಂದ ವಸ್ತುಗಳನ್ನು ತಯಾರಿಸಲಾಗುತ್ತಿದ್ದು, ಈ ಯಂತ್ರ ಒಂದು ಗಂಟೆಗೆ 30 ರಕ್ಷಣಾ ವಸ್ತುಗಳನ್ನು ಸಿದ್ಧಪಡಿಸುತ್ತದೆ. ಇದು `ಮಹಾರಾಷ್ಟ್ರದ ನಾಗಪುರದಲ್ಲಿರುವ ರಕ್ಷಣಾ ವಲಯದ ಆರ್ಡಿನನ್ಸ್ ಫ್ಯಾಕ್ಟರಿ ಯೋಜನೆಯಾಗಿದ್ದು, ಎಲ್ಲ ವಸ್ತುಗಳು ಸಿದ್ಧವಾಗಿ ನಾಗಪುರ ಸೇನಾ ಶಸ್ತ್ರ ತಯಾರಿಕಾ ಘಟಕ್ಕೆ ರಫ್ತಾಗು ತ್ತವೆ. ಇಲ್ಲಿ ಎಲ್ಲ ಕಾರ್ಯವೂ ಸ್ವಯಂ ಚಾಲಿತವಾಗಿ ನಡೆಯುತ್ತದೆ. ಕಂಪೆನಿ ಯಲ್ಲಿರುವ ಒಂದೊಂದು ಯಂತ್ರದ ಬೆಲೆಯೂ ಸುಮಾರು 75 ಲಕ್ಷ ರೂಪಾಯಿ ಇದೆ~ ಎಂದರು.

ಸೇನೆ ತಾಸಿಗೆ 24 ಕಂಪೋನೆಂಟ್‌ಗಳನ್ನು ಮಷಿನ್ ತಯಾರಿಸಬೇಕು ಎಂದು ನಿಗದಿಪಡಿಸಿದೆ. ಆದರೆ ನಾವು ತಯಾರಿಸಿದ ಈ ಯಂತ್ರ ಪ್ರತಿ ಗಂಟೆಗೆ 30 ಕಂಪೊನೆಂಟ್‌ಗಳನ್ನು ತಯಾರಿ ಸುತ್ತದೆ. ಹೀಗಾಗಿ ಸೇನೆಯವರು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಸಾಮರ್ಥ್ಯ ದ ಮಷಿನ್ ತಯಾರಿಸಿದ್ದೇವೆ. ಷೆಲ್‌ಗಳಲ್ಲಿ ವಿವಿಧ ಮಾದರಿಗಳಿದ್ದು, ಇದನ್ನು ಬೋಫೊರ್ಸ್ ಗನ್‌ಗಳ ಷೆಲ್-155 ಮಾದರಿಗೆಂದು ತಯಾರಿಸಲಾಗಿದೆ. ಪ್ರತಿ ಷೆಲ್ ತೂಕ 30 ಕೆ.ಜಿ. ಇರಲಿದೆ. ಇದಕ್ಕೆ ಗೇಜ್‌ಗಳನ್ನು ಅಳವಡಿಸಲು ಹಾಗೂ ಥ್ರೆಡ್ಡಿಂಗ್ ಮತ್ತು ಟರ್ನಿಂಗ್ ಮಾಡಲು 7-8 ಹಂತಗಳಲ್ಲಿ ಪ್ರಕ್ರಿಯೆ ನಡೆಯಲಿದೆ ಎಂದರು.

ಕಂಪೆನಿಯ ನಿರ್ದೇಶಕ ಎ.ಆರ್. ಮೆನನ್ ಮಾತನಾಡಿ, `ಈ ಕಂಪೆನಿ 19 ಜುಲೈ 1985ರಲ್ಲಿ ಸ್ಥಾಪನೆಯಾಗಿದೆ. ಕಿರ್ಲೋಸ್ಕರ್ ವಾರ್ನರ್ ಸ್ವಾಸೆ ಎಂಬ ಹೆಸರಿನಲ್ಲಿತ್ತು.

ನಂತರ ಈ ಕಂಪೆನಿ ಆರ್ಥಿಕವಾಗಿ ಹಾಗೂ ತಾಂತ್ರಿಕವಾಗಿ ಅಮೆರಿಕದ ಸ್ವಾಮ್ಯದ ಎನ್.ಎ. ಶಿರೂರ ಕಂಪನಿ ಜೊತೆ ಸಹಯೋಗ ಹೊಂದಿತು. ನಂತರ ಈ ಕಂಪೆನಿ ಮೆವಿ ನ್ ಮಷಿನ್ ಟೂಲ್ಸ್ ಲಿ. ಎಂದು ಮರುನಾಮಕರಣ ಹೊಂದಿದೆ. ಅಲ್ಲ ದೇ ಇದು ಸುಮಾರು 375 ತಂತ್ರಾಂಶ ಗಳನ್ನು ಹೊಂದಿದೆ~ ಎಂದರು.

`ಜಾಗತಿಕ ಮಾರುಕಟ್ಟೆಯಲ್ಲಿ ಕಂಪೆನಿ ತನ್ನದೇಯಾದ ಸ್ಥಾನವನ್ನು ಹೊಂದಿದ್ದು ಬರುವ ವರ್ಷದಲ್ಲಿ ಸುಮಾರು 60 ಕೋಟಿ ಆದಾಯದ ನಿರೀಕ್ಷೆಯಲ್ಲಿದೆ~ ಎಂದರು.

ಕಂಪೆನಿಯ ಹಿರಿಯ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಗೋಷ್ಠಿ ಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.