ADVERTISEMENT

ಸೊರಟೂರ ವಿಎಸ್‌ಎಸ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 5:30 IST
Last Updated 15 ಮಾರ್ಚ್ 2011, 5:30 IST
ಸೊರಟೂರ ವಿಎಸ್‌ಎಸ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ
ಸೊರಟೂರ ವಿಎಸ್‌ಎಸ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ   

ಮುಳಗುಂದ: ಸಮೀಪದ ಸೊರಟೂರ ವಿಎಸ್‌ಎಸ್ ಬ್ಯಾಂಕಿನ ಆಡಳಿತ ಮಂಡಳಿಯ ಐದು ವರ್ಷಗಳ ಅವಧಿಗೆ ಭಾನುವಾರ ಗ್ರಾಮದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದರು.ಗ್ರಾಮದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಕಾಂಗ್ರೆಸ್ ಬೆಂಬಲಿತ 8 ಅಭ್ಯರ್ಥಿಗಳ ಪೈಕಿ 6 ಅಭ್ಯರ್ಥಿಗಳು ಸಾಲಗಾರರ ಸಾಮಾನ್ಯ ಮತಕ್ಷೇತ್ರದಿಂದ ಹಾಗೂ ಬಿನ್ ಸಾಲಗಾರರ ಕ್ಷೇತ್ರದಿಂದ ಒಬ್ಬ ಅಭ್ಯರ್ಥಿ ಬಹುಮತ ಪಡೆದು ಆಯ್ಕೆಯಾದರೆ, ಬಿಜೆಪಿ ಬೆಂಬಲಿತ ತನ್ನ 8 ಅಭ್ಯರ್ಥಿಗಳ ಪೈಕಿ ಒರ್ವ ಮಾತ್ರ ಸಾಲಗಾರರ ಕ್ಷೇತ್ರದಿಂದ ಆಯ್ಕೆಯಾದರು.

ಮಲ್ಲಪ್ಪ ಕಲಗುಡಿ, ಫಕ್ಕೀರಪ್ಪ ಮಟ್ಟಿ, ಬಾಪುಗೌಡ ಪಾಟೀಲ, ಶಿವಪ್ಪ ಹೋಳಗಿ, ಪರಸಪ್ಪ ಮಲ್ಲಾರಿ, ದೇವಕ್ಕ ಜೈನರ, ರಾಮಪ್ಪ ತಳವಾರ ಸಾಲಗಾರರ ಕ್ಷೇತ್ರದಿಂದ ಹಾಗೂ ಬಿನ್ ಸಾಲಗಾರರ ಕ್ಷೇತ್ರದಿಂದ ಶಿವಮೂರ್ತಿ ಕರಿಗೌಡರ ಅವರು ಬಹುಮತ ಪಡೆದು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಗಿರೀಶ ಬಿ ಯಾವಗಲ್ ಪ್ರಕಟಿಸಿದರು.

ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮದಲ್ಲಿ ಮೆರವಣಿಗೆ ಹೊರಟು ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿ, ವಿಜಯೋತ್ಸವ ಆಚರಿಸಿದರು.ಈ ಸಂದರ್ಭದಲ್ಲಿ ಮರಿಯಪ್ಪ ಸಣ್ಣತಂಗಿಯವರ, ನಾಗಪ್ಪ ಬೋಳನವರ, ಸೋಮಪ್ಪ ರಾಠೋಡ, ಸಿ.ಬಿ. ಸಂಶಿ, ಎಸ್.ವಿ. ಬೋಳನವರ, ಅಡಿವೆಪ್ಪ ಕುನ್ನೂರ, ಪರಸಪ್ಪ ಮಲ್ಲಾರಿ, ಕೃಷ್ಣ ನಾಯಕ, ಮೋಹನ ಅರ್ಕಸಾಲಿ, ಮಹೇಶ ಸಣ್ಣತಂಗಿಯವರ, ಹನಮಂತ ಕಾರ್ಬಾರಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.