ADVERTISEMENT

ಸೌಲಭ್ಯ ವಿತರಣೆಯಲ್ಲಿ ವಿಳಂಬ ಬೇಡ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 6:35 IST
Last Updated 11 ಜನವರಿ 2012, 6:35 IST

ಧಾರವಾಡ: `ವ್ಯವಸ್ಥೆಯ ನ್ಯೂನತೆ ಗಳನ್ನು ಕಾರಣವಾಗಿಟ್ಟುಕೊಂಡು ಪರಿ ಶಿಷ್ಟ ಜಾತಿ ಹಾಗೂ ಪಂಗಡದವರಿಗೆ ದೊರೆಯಬೇಕಾದ ಸೌಲಭ್ಯ ನೀಡಿಕೆ ಯಲ್ಲಿನ ವಿಳಂಬವನ್ನು ಸಹಿಸಲಾಗದು. ಬರುವ ಮಾರ್ಚ್ 15 ರೊಳಗೆ ಶೇ. 22.75ರ ಅನುದಾನದ 2011-12ರ ಕಾಮಗಾರಿಗಳನ್ನು ಪೂರ್ಣ ಗೊಳಿಸಬೇಕು~ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಆಲೂರು ವೆಂಟಕರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಮಂಗಳ ವಾರ ನಡೆದ ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳ ಪ್ರಗತಿ ಪರಿಶೀಲನೆ ಮಾಡಿ ಅವರು ಮಾತನಾಡಿದರು.

`ಅನುದಾನದ ಕೊರತೆ ಇಲ್ಲ. ಸೌಲಭ್ಯಗಳನ್ನು ಒದಗಿಸಲು ಸ್ಪಷ್ಟ ಯೋಜನೆಗಳಿವೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಾಗೃತಿ ಸಮಿತಿ ಇದೆ. ಇಷ್ಟೆಲ್ಲ ಇದ್ದರೂ ಹಣಕಾಸು ವರ್ಷ ಮುಕ್ತಾಯವಾಗುತ್ತ ಬಂದಿದ್ದರೂ ಸರಿ ಯಾಗಿ ಅನುದಾನ ಬಳಕೆ ಆಗಿಲ್ಲ. ಗದಗ ಜಿಲ್ಲೆಯ ನರೇಗಲ್ಲ ಪುರಸಭೆಯಲ್ಲಿ 2011-12ರದಲ್ಲಿ ಕಾಮಗಾರಿ ಪ್ರಗತಿ ಶೇ. 3ರಷ್ಟು, ನರಗುಂದ ಶೇ. 9, ಮುಂಡರಗಿ ಶೂನ್ಯ, ಗದಗದಲ್ಲಿ ಶೇ. 12, ಹಾವೇರಿ ಜಿಲ್ಲೆಯ ಬಂಕಾಪುರ ಶೇ. 1.9 ರಷ್ಟು ಹಾಗೂ ಹುಬ್ಬಳ್ಳಿ- ಧಾರ ವಾಡ ಪಾಲಿಕೆಯಲ್ಲಿ ಶೇ. 47 ರಷ್ಟು ಪ್ರಗತಿ ಆಗಿದೆ ಎಂದರೆ ಯೋಜನೆಗಳು ಪೂರ್ಣಗೊಳ್ಳುವುದು ಹೇಗೆ ಎಂದು ಸಚಿವರು ಪ್ರಶ್ನಿಸಿದರು.

ಗದಗ ಜಿಲ್ಲೆಯಲ್ಲಿ ಕಡಿಮೆ ಪ್ರಗತಿ ಸಾಧಿಸಿರುವ ಪುರಸಭೆ, ಪಟ್ಟಣ ಪಂಚಾ ಯಿತಿ ಮುಖ್ಯಾಧ್ಯಾಕರಿಗಳಿಗೆ ಬಡ್ತಿ ಕಡಿತ ಮಾಡಬೇಕು ಎಂದು ಸಚಿವ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಶೇ. 22.75ರ ಅನುದಾನದಲ್ಲಿ ಮೂರು ಜಿಲ್ಲೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಕುರಿತು ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯದ ಎಸ್‌ಪಿ ಎ.ಎಸ್.ಕುರೇರ ಅವರು ಪರಿ ಶೀಲನಾ ಅಂಶಗಳನ್ನು ಸಚಿವರ ಗಮ ನಕ್ಕೆ ತಂದರು.

ಪಾಲಿಕೆಯ 4ನೇ ವಲಯ ಕಚೇರಿ ವ್ಯಾಪ್ತಿಯಲ್ಲಿ ವಡ್ಡರ ಓಣಿಯಲ್ಲಿ ಪರಿ ಶಿಷ್ಟ ಜಾತಿ, ವರ್ಗದವರು ಇರದಿದ್ದರೂ 6.90 ಲಕ್ಷ ರೂ. ವೆಚ್ಚದ ರಸ್ತೆ ಕಾಮ ಗಾರಿ ಕೈಗೊಂಡಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದರು.

`ಈ ಕಾಮಗಾರಿ ಕುರಿತು ದೂರು ಬಂದ ತಕ್ಷಣ ಸ್ಥಗಿತಗೊಳಿಸಲಾಗಿದೆ. ಕಾಮಗಾರಿ ಆರಂಭಿಸಿರಲಿಲ್ಲ, ಕೇವಲ ಟೆಂಡರ್ ಕರೆಯಲಾಗಿತ್ತು~ ಎಂದು ಪಾಲಿಕೆ ಆಯುಕ್ತ ಡಾ. ಕೆ.ವಿ.ತ್ರಿಲೋಕ ಚಂದ್ರ ಸ್ಪಷ್ಟಪಡಿಸಿದರು.

ಭೈರಿದೇವರಕೊಪ್ಪದಲ್ಲಿ ಸಮುದಾಯ ಭವನದಲ್ಲಿ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಪರಿಶಿಷ್ಟ ಜಾತಿ, ಪಂಗಡದವರ ಉಪಯೋಗಕ್ಕೆ ಈ ಸಮುದಾಯ ಭವನ ನಿರ್ಮಾಣ ವಾಗಿತ್ತು. ಆದರೆ ಈಗ ತೆರವು ಮಾಡು ತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಕ್ಕೆ, ಸಚಿವರು ಕೂಡಲೇ ತೆರವು ಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಅವರಿಗೆ ಸೂಚಿಸಿದರು.

ಕುಂದಗೋಳದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ತಕ್ಷಣವೇ ಆರಂಭಿಸ ಬೇಕು, ಜಾಗೆ ಸಮಸ್ಯೆ ಇದ್ದರೆ, ಖರೀದಿಸಿ ಎಂದು ಸಚಿವರು ತಿಳಿಸಿದರು.

ಶೇ. 22.75ರ ಅನುದಾನ ಯೋಜ ನೆಗಳ ಪರಿಣಾಮಕಾರಿ ಜಾರಿಗಾಗಿ ಕಾರ್ಯನಿರ್ವಹಿಸಲು ಜಾರಿ ನಿರ್ದೇ ಶನಾಲಯಕ್ಕೆ ಅವಕಾಶ ಕಲ್ಪಿಸಿದೆ. ಆಡ ಳಿತ ವ್ಯವಸ್ಥೆ ಬದಲಾಗುತ್ತ ಇದೆ. ತಮ್ಮ ಯೋಜನೆಗಳ ಜಾರಿ ಕುರಿತು ಸದಾ ಪರಿಶೀಲನೆ ನಡೆಯುತ್ತಿದೆ ಎನ್ನುವುದು ಪರಿಶಿಷ್ಟ ಜಾತಿ, ವರ್ಗದ ಜನರ ಅನು ಭವಕ್ಕೆ ಬರಬೇಕು ಎನ್ನುವುದು ಮುಖ್ಯ ಉದ್ದೇಶ.
 
ಜಾರಿ ನಿರ್ದೇಶನಾಲಯ ಅಧಿ ಕಾರಿಗಳು ಯೋಜನೆ ದುರುಪಯೋಗ ಆಗಿರುವ ಕುರಿತಂತೆ ಹೆಚ್ಚು ಗಮನ ಹರಿಸಬೇಕು ಎಂದ ಸಚಿವರು, ಯೋಜನೆ ಅನುಷ್ಠಾನದ ಸಾಧನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು.

ವಿದ್ಯಾರ್ಥಿನಿಲಯಗಳಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ ಊಟ, ತಿಂಡಿ ಒದಗಿಸಬೇಕು. ಪ್ರತಿ ಮೂರು ವರ್ಷ ಕ್ಕೊಮ್ಮೆ ಹಾಸಿಗೆ, ಹೊದಿಕೆಗಳನ್ನು ಬದಲಾಯಿಸಬೇಕು ಎಂದರು.

ಪರಿಶಿಷ್ಟ ಜಾತಿ, ಪಂಗಡದ ಮಕ್ಕಳು ಶಾಲೆ ಸಮಯ ಮುಗಿದ ನಂತರ ಉರುವಲು ಸೌದೆಗಾಗಿ ಅಡ್ಡಾಡು ವುದನ್ನು ತಪ್ಪಿಸಲು ಅಡುಗೆ ಅನಿಲ ಸಂಪರ್ಕವನ್ನು ಆ ಕುಟುಂಬಗಳಿಗೆ ಒದ ಗಿಸಬೇಕು. ಇಲಾಖೆಯಿಂದ ನೀಡಲಾ ಗುತ್ತಿರುವ ಮೂಲಭೂತ ಸೌಕರ್ಯದ ಅನುದಾನವನ್ನು ಇದಕ್ಕೆ ಬಳಸಿಕೊಳ್ಳ ಬೇಕು ಎಂದು ನಾರಾಯಣಸ್ವಾಮಿ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಅಡಿ ವೆಪ್ಪ ಮನಮಿ, ಶಾಸಕ ಚಂದ್ರಕಾಂತ ಬೆಲ್ಲದ, ವೀರಭದ್ರಪ್ಪ ಹಾಲಹರವಿ, ಶ್ರೀನಿವಾಸ ಮಾನೆ, ಡಿ.ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಕಾಟವೆ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ನವೀನ ರಾಜ್ ಸಿಂಗ್, ಗದಗ ಜಿಲ್ಲಾಧಿಕಾರಿ ಶಂಕರನಾರಾಯಣ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ. ಮೇಘಣ್ಣವರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.