ADVERTISEMENT

ಸ್ಫೂರ್ತಿಗೆ 15, ಸೂರಜ್‌ಗೆ 16 ಬಂಗಾರ

ಕರ್ನಾಟಕ ವಿಶ್ವವಿದ್ಯಾಲಯ ಅಂತರ ಕಾಲೇಜು ಈಜು ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:27 IST
Last Updated 5 ಸೆಪ್ಟೆಂಬರ್ 2013, 6:27 IST

ಹುಬ್ಬಳ್ಳಿ: ಕರ್ನಾಟಕ ವಿಶ್ವವಿದ್ಯಾಲಯದ `ಚಿನ್ನದ ಮೀನು'ಗಳಾದ ಸ್ಫೂರ್ತಿ ಪಾಟೀಲ ಹಾಗೂ ಸೂರಜ್ ಶ್ರೇಷ್ಠಿ ಅವರು ಕರ್ನಾಟಕ ವಿಶ್ವವಿದ್ಯಾಲಯ ಅಂತರ ಕಾಲೇಜು ಮಟ್ಟದ ಈಜು ಸ್ಪರ್ಧೆಯಲ್ಲಿ ತಮ್ಮ ಬಂಗಾರದ ಭೇಟೆ ಮುಂದುವರಿಸಿದರು. ಬುಧವಾರ ಮುಕ್ತಾಯ ವಾದ ಚಾಂಪಿಯನ್‌ಷಿಪ್‌ನ ಮಹಿಳೆಯರ ವಿಭಾಗದಲ್ಲಿ ಸ್ಫೂರ್ತಿ ಬರೋಬ್ಬರಿ 15 ಬಂಗಾರ ಹಾಗೂ 1 ಬೆಳ್ಳಿ ಪದಕಗಳನ್ನು ಕೊರಳಿಗೇರಿಸಿ ಕೊಂಡರು. ಪುರುಷರ ವಿಭಾಗದಲ್ಲಿ ಸೂರಜ್ 16 ಬಂಗಾರ (2 ರಿಲೆ), 2 ಕಂಚು ಪದಕ ತಮ್ಮದಾಗಿಸಿಕೊಂಡರು.

ಇಲ್ಲಿನ ಮಹಾನಗರ ಪಾಲಿಕೆ ಈಜುಕೊಳದಲ್ಲಿ ರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ಸ್ಪರ್ಧೆಯ ಎಲ್ಲ ವಿಭಾಗಗಳಲ್ಲೂ ಗ್ಲೋಬಲ್ ಕಾಲೇಜು ವಿದ್ಯಾರ್ಥಿನಿ ಸ್ಫೂರ್ತಿ ಮೇಲುಗೈ ಸಾಧಿಸಿದರು. ಧಾರವಾಡದ ಕೆಯುಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಯು.ಪಿ. ಸಂಜಿತಾ ಎರಡು ಬಂಗಾರ ಗೆಲ್ಲುವುದರೊಂದಿಗೆ ರನ್ನರ್ ಅಪ್ ಗೌರವ ಪಡೆದರು.

ಕಳೆದೆರಡು ವರ್ಷಗಳಿಂದ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿರುವ ಸ್ಫೂರ್ತಿ 2012ರಲ್ಲಿ ಅಮರಗೋಳದ ಈಜುಕೊಳದಲ್ಲಿ ನಡೆದ ಅಂತರ ಕಾಲೇಜು ಸ್ಪರ್ಧೆಯಲ್ಲಿ 14 ಬಂಗಾರ ಹಾಗೂ 2 ಬೆಳ್ಳಿ ಗೆದ್ದಿದ್ದರು.

ಕವಿವಿ ಪಿ.ಜಿ. ಜಿಮ್ಖಾನಾ ತಂಡದ ಈಜುಪಟು ಸೂರಜ್ ಫ್ರೀಸ್ಟೈಲ್, ಬಟರ್‌ಫ್ಲೈ ಹಾಗೂ ಮೆಡ್ಲೆ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ 16 ಬಂಗಾರಕ್ಕೆ ಕೊರಳೊಡ್ಡಿದ್ದರು. ಪಿ.ಜಿ. ಜಿಮ್ಖಾನ ತಂಡದವರೇ ಆದ ಅಂಕುಶ್ ಕಲಬರ್ಕರ್ 4 ಬಂಗಾರ (2 ರಿಲೆ) ಹಾಗೂ 6 ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ಕಳೆದ ಮೂರು ವರ್ಷಗಳಿಂದ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿರುವ ಸೂರಜ್ ಕಳೆದ ವರ್ಷ ಅಮರಗೋಳದಲ್ಲಿ ನಡೆದ ಸ್ಪರ್ಧೆಯಲ್ಲಿ 14 ಬಂಗಾರ ಹಾಗೂ ಮೂರು ಬೆಳ್ಳಿ ಗೆದ್ದಿದ್ದರು.

ಫಲಿತಾಂಶ
ಮಹಿಳೆಯರು:
800 ಮೀ. ಫ್ರೀಸ್ಟೈಲ್: ಸ್ಫೂರ್ತಿ ಪಾಟೀಲ (ಗ್ಲೋಬಲ್ ಕಾಲೇಜು, ಹುಬ್ಬಳ್ಳಿ)-1, ಯು.ಪಿ. ಸಂಚಿತಾ (ಕೆಯುಎಸ್ ಕಾನೂನು ಕಾಲೇಜು, ಧಾರವಾಡ)-2. ಸಮಯ: 14ನಿ. 11.36ಸೆ.

50 ಮೀ. ಬ್ರೆಸ್ಟ್ ಸ್ಟ್ರೋಕ್: ಸುಜಾತ ನಿರ್ಲಾಜ್‌ಕರ್-1, ಸ್ಫೂರ್ತಿ-2, ಯು.ಪಿ. ಸಂಚಿತಾ-3. ಸಮಯ: 51.84 ಸೆ.
50 ಮೀ. ಬಟರ್‌ಫ್ಲೈ: ಸ್ಫೂರ್ತಿ-1, ಯು.ಪಿ. ಸಂಜಿತಾ-2, ಎನ್. ಸುಷ್ಮಿತಾ (ನೆಹರೂ ಕಾಲೇಜು, ಹುಬ್ಬಳ್ಳಿ)-3. ಸಮಯ: 54.34 ಸೆ.
100 ಮೀ. ಬಟರ್‌ಫ್ಲೈ: ಸ್ಫೂರ್ತಿ-1, ಯು.ಪಿ. ಸಂಚಿತಾ-2. ಸಮಯ: 2ನಿ. 12.07 ಸೆ.

ಪುರುಷರು:  100 ಮೀ ಫ್ರೀಸ್ಟೈಲ್:  ಸೂರಜ್ ಶ್ರೇಷ್ಠಿ (ಪಿ.ಜಿ. ಜಿಮ್ಖಾನ, ಧಾರವಾಡ)-1, ಅಂಕುಶ್-2, ಧನುಶ್ ಶಾನಭಾಗ (ಎ.ವಿ. ಬಾಳಿಗ ಕಾಲೇಜು, ಕುಮಟಾ)-3. ಸಮಯ: 1ನಿ. 16.68 ಸೆ.

1500 ಮೀ. ಫ್ರೀಸ್ಟೈಲ್:  ಸೂರಜ್-1, ಅಂಕುಶ್ ಕನಬರ್ಕರ್ (ಪಿ.ಜಿ. ಜಿಮ್ಖಾನ, ಧಾರವಾಡ) 2, ಸಂಜೀವ ಕುಂಬಾರ (ಜೆಎಸ್‌ಎಸ್ ಕಾಲೇಜು, ಧಾರವಾಡ)-3. ಸಮಯ: 26 ನಿ. 45.42 ಸೆ.

4/100 ಫ್ರೀಸ್ಟೈಲ್ ರಿಲೆ:  ಪಿ.ಜಿ. ಜಿಮ್ಖಾನ, ಧಾರವಾಡ-1, ಮೃತ್ಯುಂಜಯ ಕಾಲೇಜು-2, ಪಿ.ಸಿ. ಜಾಬಿನ್ ವಿಜ್ಞಾನ ಕಾಲೇಜು, ಹುಬ್ಬಳ್ಳಿ-3.

100 ಮೀ. ಬ್ರೆಸ್ಟ್ ಸ್ಟ್ರೋಕ್: ಸೂರಜ್-1, ಸಿ.ಎಸ್. ವಿನೋದ್-2, ಸಂಜೀವ-3. ಸ: 1ನಿ, 36.84 ಸೆ.
50 ಮೀ ಬಟರ್ ಫ್ಲೈ:  ಸೂರಜ್-1, ಸಂಜೀವ-2, ಅಂಕುಶ-3. ಸಮಯ: 41.16 ಸೆ.

100 ಮೀ. ಬಟರ್‌ಫ್ಲೈ: ಸೂರಜ್-1, ಅಂಕುಶ-2, ಸಂಜೀವ-3. ಸಮಯ: 1ನಿ, 43.24 ಸೆ.

200 ಮೀ. ಬಟರ್‌ಫ್ಲೈ: ಸೂರಜ್-1, ಸಂಜೀವ-2, ಎಸ್.ಸಿ. ಅಮೃತಯ್ಯನವರ (ಮೃತ್ಯುಂಜಯ ಕಾಲೇಜು, ಧಾರವಾಡ)-3. ಸಮಯ: 4 ನಿ. 09.16 ಸೆ.

400 ಮೀ. ಇಂಡಿವಿಜಲ್ ಮೆಡ್ಲೆ: ಸೂರಜ್-1, ಸಂಜೀವ-2, ಸಿ.ಎಸ್. ವಿನೋದ್-3. ಸಮಯ: 8 ನಿ. 4.88 ಸೆ.
ಸ್ಟ್ರಿಂಗ್ ಬೋರ್ಡ್ ಡೈವಿಂಗ್: ಅನಿರುದ್ಧ ಹುಯಿಲಗೋಳ (ಪಿ.ಜಿ. ಜಾಬಿನ್ ಕಾಲೇಜು, ಹುಬ್ಬಳ್ಳಿ)-1. ಅಂಕುಶ್-2, ಸೂರಜ್-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.