ADVERTISEMENT

‘ದೇಶದ ರಕ್ಷಣೆಗೆ ಯುವಕರು ಮುಂದೆ ಬನ್ನಿ ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 6:19 IST
Last Updated 1 ಜನವರಿ 2014, 6:19 IST

ಕುಂದಗೋಳ: ‘ದೇಶದ ಸಂಸ್ಕೃತಿ, ಆಚಾರ, ವಿಚಾರ­ಗಳು ನಿಜವಾಗಿ ಉಳಿಯಬೇಕೆಂದರೆ ಸಮಗ್ರ ಹಿಂದೂ ಯುವಕ–ಯುವತಿಯರು  ಜಾಗೃತಗೊಳ್ಳಬೇಕಾದ ಅಗತ್ಯವಿದೆ. ಪ್ರತಿ ಮನೆಯಿಂದ ಪ್ರತಿಯೊಬ್ಬ ಯುವಕ ದೇಶದ ರಕ್ಷಣೆಗಾಗಿ ಮುಂದೆ ಬರಬೇಕು. ಗಲ್ಲಿ ಗಲ್ಲಿಗಳಲ್ಲಿ ದೇಶ ರಕ್ಷಣೆಯ ಸಂಘಟನೆಗಳು ತಲೆ ಎತ್ತಬೇಕು’ ಎಂದು  ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಹೇಳಿದರು.

ಭಾನುವಾರ ಪಟ್ಟಣದ ಶಿವಾನಂದಮಠದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಒಂದು ದಿನದ ಅಭ್ಯಾಸ ಶಿಬಿರದಲ್ಲಿ  ಅವರು ಮಾತನಾಡಿದರು.
ಕೆಲವರು ಹಿಂದೂ ಸಮಾಜವನ್ನು ಮಟ್ಟ ಹಾಕಲು ಪಿತೂರಿ ನಡೆಸುತ್ತಿದ್ದಾರೆ. ಅವರನ್ನು ಧ್ಯೆರ್ಯದಿಂದ ಎದುರಿಸುವ ಸಲುವಾಗಿ ಸಮಸ್ತ ಹಿಂದೂಗಳು ಒಗ್ಗಟ್ಟಾಗಬೇಕು ಎಂದರು.

ವಿಶ್ವದಲ್ಲಿ ಕ್ರಿಶ್ಚಿಯನ್ನರಿಗಾಗಿ 153 ದೇಶಗಳಿವೆ. ಮುಸ್ಲಿ­ಮ್‌ರಿಗೆ  54 ದೇಶಗಳಿವೆ. ಆದರೆ ಹಿಂದೂ­ಗಳಿಗೆ ಭಾರತ ಬಿಟ್ಟು ಮತ್ತಾವ ದೇಶವೂ ಇಲ್ಲ. ಹೀಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಸಲುವಾಗಿ­ಯಾದರೂ ಒಟ್ಟಾಗುವ ಅಗತ್ಯತೆ ಇದೆ ಎಂದರು. 

ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ಉತ್ತರ ಪ್ರಾಂತ ಅಧ್ಯಕ್ಷ ಈಶ್ವರಗೌಡ ಪಾಟೀಲ, ಉತ್ತರ ಪ್ರಾಂತ ಕಾರ್ಯದರ್ಶಿ ಬಸವರಾಜ ಬೂದಿಹಾಳ, ಗೌರಿಶಂಕರ ಮೋಟ, ಗಂಗಾಧರ ಧರೆಣ್ಣವರ, ವಿರೂಪಾಕ್ಷಗೌಡ ಹಿರೇಗೌಡ್ರ, ಮುತ್ತು ತಹಶೀ­ಲ್ದಾರ, ಮಂಜುನಾಥ ಅಣ್ಣೀಗೇರಿ, ಅಶೋಕ ಪಾಳಂದೆ ಮತ್ತಿತರರಿದ್ದರು. ನಿಂಗಪ್ಪ ಇಂಗಳಹಳ್ಳಿ, ಪ್ರವೀಣ ಗಂಗಾಯಿ, ಉದಯ ಕಾಕಡೆ, ವಿನೋದ ಭೋಸಲೆ, ನಾಗು ಕುಂಕೂರ, ಗಣೇಶ ಕೊಕಾಟೆ, ಉಮೇಶ ನೆಲಗುಡ್ಡ, ವಿಶಾಲ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT