ADVERTISEMENT

ಸೃಷ್ಟಿ ಫಾರ್ಮ್‌ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಕಣವಿ ಅಂತ್ಯಕ್ರಿಯೆ

ಪತ್ನಿ ಬಗಲಲ್ಲಿ ಚಿರನಿದ್ರೆಗೆ ಜಾರಿದ ಕಣವಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 15:44 IST
Last Updated 16 ಫೆಬ್ರುವರಿ 2022, 15:44 IST
ಧಾರವಾಡದ ಅಳ್ನಾವರ ರಸ್ತೆಯಲ್ಲಿರುವ ಸೃಷ್ಟಿ ಫಾರ್ಮ್‌ನಲ್ಲಿ ನಡೆದ ಕವಿ ಡಾ. ಚೆನ್ನವೀರ ಕಣವಿ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಅವರ ಕುಟುಂಬದವರು ಅಂತಿಮ ನಮನ ಸಲ್ಲಿಸಿದರು  ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ
ಧಾರವಾಡದ ಅಳ್ನಾವರ ರಸ್ತೆಯಲ್ಲಿರುವ ಸೃಷ್ಟಿ ಫಾರ್ಮ್‌ನಲ್ಲಿ ನಡೆದ ಕವಿ ಡಾ. ಚೆನ್ನವೀರ ಕಣವಿ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ಅವರ ಕುಟುಂಬದವರು ಅಂತಿಮ ನಮನ ಸಲ್ಲಿಸಿದರು ಪ್ರಜಾವಾಣಿ ಚಿತ್ರ: ಬಿ.ಎಂ. ಕೇದಾರನಾಥ   

ಧಾರವಾಡ: ನಾಡೋಜ ಕವಿ ಡಾ.‌ ಚೆನ್ನವೀರ ಕಣವಿ ಅವರ ಅಂತ್ಯಕ್ರಿಯೆ ಅಳ್ನಾವರ ರಸ್ತೆಯಲ್ಲಿರುವ ಸೃಷ್ಟಿ ಫಾರ್ಮ್‌ ನಲ್ಲಿ ಬುಧವಾರ ಸಂಜೆ 7ರ ಸುಮಾರಿಗೆ ನೆರವೇರಿತು.

ಫಾರ್ಮ್‌ ನ ಮಾವಿನ ತೋಟದಲ್ಲಿರುವ ಪತ್ನಿ ಶಾಂತಾದೇವಿ ಕಣವಿ ಅವರ ಸಮಾಧಿಯ ಪಕ್ಕದಲ್ಲಿ ಚೆನ್ನವೀರ ಕಣವಿ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ನೆರವೇರಿತು. ಕಣವಿ ಅವರ ಕುಟುಂಬದವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ವಂದನೆ ಸಲ್ಲಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲದ, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ, ಸಾಹಿತಿಗಳಾದ ಕುಂ. ವೀರಭದ್ರಪ್ಪ, ಅಲ್ಲಮಪ್ರಭು ಬೆಟದೂರು, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಸ್ಪಿ ಪಿ‌. ಕೃಷ್ಣಕಾಂತ್, ಜಿ‌.ಪಂ.‌ ಡಾ. ಸುರೇಶ ಇಟ್ನಾಳ‌ ಸೇರಿದಂತೆ ಸಾಹಿತಿಗಳು, ಗಣ್ಯರು, ಅಭಿಮಾನಿಗಳು, ವಿದ್ಯಾರ್ಥಿಗಳು ಹಾಗೂ ಸಂಬಂಧಿಕರು ಕಣವಿ ಅವರಿಗೆ ಅಂತಿಮ ನಮನ ಸಲ್ಲಿಸಿದರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.