ADVERTISEMENT

ಕಾಂಗ್ರೆಸ್ ಆಶ್ರಿತ ಬುದ್ಧಿಜೀವಿಗಳಿಂದ ಸಿಎಎ ಬಗ್ಗೆ ಅಪಪ್ರಚಾರ: ತೇಜಸ್ವಿ ಸೂರ್ಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 12:41 IST
Last Updated 25 ಡಿಸೆಂಬರ್ 2019, 12:41 IST
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ   

ಹುಬ್ಬಳ್ಳಿ: ‘ಪೌರತ್ವ‌ (ತಿದ್ದುಪಡಿ) ಕಾಯ್ದೆಯ ಬಗ್ಗೆ ಭಾರತೀಯರು ಭಯಪಡಬೇಕಿಲ್ಲ. ಆದರೆ, ಕಾಂಗ್ರೆಸ್, ಕಾಂಗ್ರೆಸ್ ಆಶ್ರಿತ ಬುದ್ಧಿಜೀವಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಅಪಪ್ರಚಾರದಿಂದ ಕಾಯ್ದೆ ಬಗ್ಗೆ ಆತಂಕದ ವಾತಾವರಣ ಸೃಷ್ಟಿಯಾಗಿದೆ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

‘ಪೌರತ್ವ ಮಸೂದೆ ಬಹಳ ವರ್ಷಗಳಿಂದ ಬಾಕಿ ಇತ್ತು. ಕಾಂಗ್ರೆಸ್ ತನ್ನ ವೋಟ್ ಬ್ಯಾಂಕಿಗೆ ಧಕ್ಕೆಯಾಗುತ್ತದೆ ಎಂದು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ, ಜಾರಿಗೆ ತಂದಿದೆ. ಪೌರತ್ವ ನೀಡೋದು ಈ ಕಾಯ್ದೆಯ ಉದ್ದೇಶವೇ ಹೊರತು, ಕಸಿದುಕೊಳ್ಳುವುದಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎನ್‌ಆರ್‌ಸಿ ಕಾಯ್ದೆ ಬಗ್ಗೆ ಯಾವ ದಾಖಲೆಗಳು ಬೇಕು ಬೇಡ ಎನ್ನುವುದರ ಬಗ್ಗೆ ಕೇಂದ್ರ ಇನ್ನು ಏನುಹೇಳಿಲ್ಲ. ಅದು ಚಿಂತನೆಯ ಹಂತದಲ್ಲಿದೆ.ಆದರೆ, ನಾಳೆಯೇ ಎನ್‌ಆರ್‌ಸಿ ನಡೆಯಲಿದೆ, ದಾಖಲೆ ನೀಡದಿದ್ದರೆ ಬಂಧಿಸುತ್ತಾರೆಎಂದು ಅಪಪ್ರಚಾರ ನಡೆಸಲಾಗುತ್ತಿದೆ.ಹೀಗಾಗಿ ಸಿಎಎ ಹಾಗೂ ಎನ್‌ಆರ್‌ಸಿ ಬಗ್ಗೆ ಜನರಿಗೆ ತಿಳುವಳಿಕೆ ನೀಡುವಕಾರ್ಯಕ್ರಮ ಮಾಡುತ್ತಿದ್ದೇವೆ. ಜನವರಿಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಪೌರತ್ವ ಕಾಯ್ದೆ ತಿಳುವಳಿಕೆ ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.

ADVERTISEMENT

‘ಮಂಗಳೂರಿನಲ್ಲಿ ನಡೆದ ಗಲಭೆ ಮಾಡಿರುವುದ ಯಾರು ಎನ್ನುವುದು ಗೊತ್ತಾಗಿದೆ. ಆದರೂ ಸಿದ್ದರಾಮಯ್ಯ ಅವರುಪೊಲೀಸರೇ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎನ್ನುವ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಈಮೂಲಕ ಪೊಲೀಸರ ಮನೋಸ್ಥೈರ್ಯವನ್ನು ಕುಗ್ಗಿಸುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.