ADVERTISEMENT

ಮಳೆ: ಶಿರಸಿ ಜಾತ್ರೆ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 21:25 IST
Last Updated 18 ಮಾರ್ಚ್ 2022, 21:25 IST
ಗಾಳಿ–ಮಳೆಗೆ ಶುಕ್ರವಾರ ಹಾನಿಗೀಡಾದ ಶಿರಸಿ ಜಾತ್ರೆಪೇಟೆಯ ಅಂಗಡಿಯನ್ನು ವ್ಯಾಪಾರಿಯೊಬ್ಬರು ಸರಿಪಡಿಸುವ ಯತ್ನದಲ್ಲಿದ್ದರು
ಗಾಳಿ–ಮಳೆಗೆ ಶುಕ್ರವಾರ ಹಾನಿಗೀಡಾದ ಶಿರಸಿ ಜಾತ್ರೆಪೇಟೆಯ ಅಂಗಡಿಯನ್ನು ವ್ಯಾಪಾರಿಯೊಬ್ಬರು ಸರಿಪಡಿಸುವ ಯತ್ನದಲ್ಲಿದ್ದರು   

ಹುಬ್ಬಳ್ಳಿ: ಹುಬ್ಬಳ್ಳಿ ನಗರ, ಗದಗದ ಲಕ್ಷ್ಮೇಶ್ವರ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಮುಂಡಗೋಡ, ಶಿರಸಿ ಸೇರಿದಂತೆ ಹಲವೆಡೆ ಶುಕ್ರವಾರ ಮಳೆಯಾಗಿದೆ. ಏಕಾಏಕಿ ಸುರಿಯಲಾರಂಭಿಸಿದ ಮಳೆಯಿಂದಾಗಿ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿ ಜಾತ್ರೆಪೇಟೆ ಅಸ್ತವ್ಯಸ್ತವಾಗಿದೆ.

ಹಾವೇರಿ ಜಿಲ್ಲೆ ಹಾನಗಲ್‌ ಕೊಂಡೋಜಿ ಗ್ರಾಮದಲ್ಲಿ ರೈತ ರವಿ ನೀಲಪ್ಪ ಬೋಳಮ್ಮನವರ (48) ಎಂಬುವವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಶಿರಸಿಯ ದೇವಿ ಗದ್ದುಗೆಯ ಎದುರು ಜಾತ್ರೆ ವೇಳೆ ನಿರ್ಮಿಸಿದ ಮುಂಭಾಗದ ಮಂಟಪದ ಗೋಪುರ ಗಾಳಿಯ ರಭಸಕ್ಕೆ ಕಳಚಿ ಬಿದ್ದಿದೆ. ಮಂಟಪದ ಒಳಭಾಗದಲ್ಲಿ ದೇವಿದರ್ಶನಕ್ಕೆ ಕಾದಿದ್ದ ಭಕ್ತರನ್ನು ಮುನ್ನೆಚ್ಚರಿಕೆಗಾಗಿ ಹೊರಕ್ಕೆ ಕಳಿಸಲಾಯಿತು.ಸಂಜೆ 5.50ರ ಸುಮಾರಿಗೆ ಜೋರಾದ ಗಾಳಿ ಬೀಸುವ ಜತೆಗೆ ಮಳೆ ಸುರಿಯಲಾರಂಭಿಸಿತು. ತಾತ್ಕಾಲಿಕ ಅಂಗಡಿಮುಂಗಟ್ಟುಗಳ ಚಾವಣಿಗಳು ಹಾರಿಬಿದ್ದವು.

ADVERTISEMENT

ಕಳಸದಲ್ಲಿ ಭಾರಿ ಗಾಳಿ, ಮಳೆ
ಕರಾವಳಿ ಹಾಗೂ ಮಲೆನಾಡಿನಲ್ಲಿ ಶುಕ್ರವಾರ ಮಳೆಯಾಗಿದೆ.ಕಳಸ ತಾಲ್ಲೂಕಿನಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ಕೆಲವೆಡೆ ಅಡಿಕೆ ಮರಗಳು ಮುರಿದು ಬಿದ್ದಿವೆ. ವಿದ್ಯುತ್ ತಂತಿಯ ಮೇಲೂ ಮರಗಳು ಉರುಳಿವೆ.

ಕೊಡಗು ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದು, ಕಾಫಿ ಬೆಳೆಗಾರರ ಮೊಗದಲ್ಲಿ ನೆಮ್ಮದಿ ತರಿಸಿದೆ. ಮಾರ್ಚ್‌ನಲ್ಲಿ ಸುರಿಯುವ ಮಳೆಗೆ ‘ಹೂವಿನ ಮಳೆ’ ಎಂದೇ ಕಾಫಿ ಬೆಳೆಗಾರರು ಕರೆಯುತ್ತಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿ ಆನವಟ್ಟಿ ಮತ್ತುಸುತ್ತಲಿನ ಹಲವು ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.