ADVERTISEMENT

ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 15:34 IST
Last Updated 17 ಮೇ 2022, 15:34 IST
ಅಣ್ಣಿಗೇರಿ ತಾಲ್ಲೂಕು ಹಳ್ಳಿಕೇರಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಎನ್‌.ಎಚ್‌. ಕೋನರಡ್ಡಿ ಮಾತನಾಡಿದರು
ಅಣ್ಣಿಗೇರಿ ತಾಲ್ಲೂಕು ಹಳ್ಳಿಕೇರಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಎನ್‌.ಎಚ್‌. ಕೋನರಡ್ಡಿ ಮಾತನಾಡಿದರು   

ಅಣ್ಣಿಗೇರಿ: ಜೀವನ ಸಾಗಿಸಲು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಈಗಿನ ಕಾಲದ ಎಲ್ಲ ಸೊಸೆಯಂದಿರಿಗೆ ದಾರಿದೀಪ ಎಂದು ಎರೆಹೊಸಳ್ಳಿ ಹೇಮ, ವೇಮ, ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಸಮಿತಿ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ 595ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ‘ರಡ್ಡಿ ಸಮಾಜಕ್ಕೆ ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರ ಕೊಡುಗೆ ಅವಿಸ್ಮರಣೀಯ. ಸಮಾಜದ ಒಳಿತಿಗಾಗಿ ಅವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ’ ಎಂದರು.

ಸಾನ್ನಿಧ್ಯ ವಹಿಸಿದ್ದ ನರಗುಂದ ಪತ್ರಿವನ ಮಠದ ಗುರುಸಿದ್ದ ಶಿವಯೋಗಿ ಸ್ವಾಮೀಜಿ ‘ಮಹಾಮಾತೆ ಹೇಮರಡ್ಡಿ ಮಲ್ಲಮ್ಮ ರಡ್ಡಿ ಸಮಾಜಕ್ಕೆ ಮಾತ್ರವಲ್ಲದೇ ಇತರೆ ಸಮಾಜಕ್ಕೂ ಮಾದರಿಯಾಗಿದ್ದಾಳೆ’ ಎಂದರು.

ADVERTISEMENT

ಮಾಜಿ ಸಚಿವ ಬಿ.ಆರ್.ಯಾವಗಲ್ಲ, ರಡ್ಡಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ವಿ.ಮಾಡಳ್ಳಿ, ಜಿ.ಬಿ.ಗೌಡಪ್ಪಗೋಳ ಹಾಗೂ ಡಾ.ಎಚ್.ಟಿ.ಮಳಲಿ ಇದ್ದರು.

ಇಬ್ರಾಹಿಂಪೂರದ ದಯಾನಂದ ಸ್ವಾಮೀಜಿ, ಮೃತ್ಯುಂಜಯ ಹಿರೇಮಠ ಸ್ವಾಮೀಜಿ, ಕಾಂಗ್ರೆಸ್‌ ಮುಖಂಡ ಎನ್.ಎಚ್. ಕೋನರಡ್ಡಿ, ರಾಜುಗೌಡ ಪಾಟೀಲ, ಬಿ.ಬಿ.ಗಂಗಾಧರಮಠ, ಅಪ್ಪಣ್ಣ ಹಳ್ಳದ, ಜೀವನ ಪವಾರ, ಪ್ರಕಾಶ ಅಂಗಡಿ, ಕೆ.ಪಿ. ಗಿರಡ್ಡಿ, ಕಾಶಿನಾಥ ಅಸೂಟಿ, ವಿ.ಡಿ. ಅಂದಾನಿಗೌಡ್ರ, ರಂಗನಾಥಗೌಡ್ರ ಕೆಂಪಲಿಂಗನಗೌಡ್ರ, ನಾರಾಯಣ ಮಾಡಳ್ಳಿ, ಪ್ರದೀಪ ಲೆಂಕನಗೌಡ್ರ, ಕುಮಾರ ಗಿರಡ್ಡಿ, ಬಿ.ಎಚ್. ಪಾಟೀಲ ಕಿಷ್ಟಪ್ಪ ಕುರಹಟ್ಟಿ, ಸಂಜೀವ ಬಾಲರಡ್ಡಿ, ಮುದಕಪ್ಪ ಹಂಡಿ, ಎಸ್.ಎನ್. ಚಾಕಲಬ್ಬಿ, ಶ್ರೀನಿವಾಸ ಬೂದಿಹಾಳ, ಎಂ.ಕೆ. ಮೊರಬದ, ಕುಮಾರ ಗಿರಡ್ಡಿ, ಸೋಮರಡ್ಡಿ, ಹನಮರಡ್ಡಿ ಭದ್ರಾಪೂರ, ಬಿ.ಎಚ್. ದೊಡಗೌಡ್ರ, ಸಂಜು ರಾಯರಡ್ಡಿ, ಜಗು ಮುದರಡ್ಡಿ, ವೀರನಾರಾಯಣ ಬೆಂತೂರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.