ADVERTISEMENT

ಆಸ್ತಿ ಮಾಲೀಕರಿಗೆ ಬಿ ಖಾತಾ ವಿತರಣೆ

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:16 IST
Last Updated 15 ಮೇ 2025, 16:16 IST
ಕಲಘಟಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಸಾಮಾನ್ಯ ಸಭೆಯಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಬಿ ಖಾತಾ ಉತಾರ ವಿತರಿಸಲಾಯಿತು
ಕಲಘಟಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಸಾಮಾನ್ಯ ಸಭೆಯಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಬಿ ಖಾತಾ ಉತಾರ ವಿತರಿಸಲಾಯಿತು   

ಕಲಘಟಗಿ: ನಿವೇಶನ ಹಾಗೂ ಕಟ್ಟಡಗಳನ್ನು ಹೊಂದಿರುವ ಆಸ್ತಿ ಮಾಲೀಕರಿಗೆ ಮತ್ತು ಅನುಭೋಗದಾರರಿಗೆ ಪಟ್ಟಣ ಪಂಚಾಯಿತಿಯಿಂದ ಬಿ ಖಾತಾ ಉತಾರಗಳನ್ನು ವಿತರಣೆ ಮಾಡಲಾಯಿತು.

ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಸಾಮಾನ್ಯ ಸಭೆಯಲ್ಲಿ ಸಾಂಕೇತಿಕವಾಗಿ ಉತಾರ ವಿತರಿಸಲಾಯಿತು.

ಅಧ್ಯಕ್ಷೆ ಶಿಲ್ಪಾ ಪಾಲ್ಕರ ಮಾತನಾಡಿ, ‘1976ಕ್ಕಿಂತ ಮೊದಲು ಬಿನ್‍ಶೇತ್ಕಿಯಾದ (ಭೂ ಪರಿವರ್ತನೆ) ನಿವೇಶನಗಳಿಗೆ ಎ ಖಾತಾ ನಮೂನೆ–3 ನೀಡಲಾಗುತ್ತದೆ. 1976ರ ನಂತರ ಬಿನ್‍ಶೇತ್ಕಿಯಾದ ಭೂಮಿಯಲ್ಲಿ ನಗರ ಯೋಜನಾ ಇಲಾಖೆಯಿಂದ ಅನುಮೋದನೆ ಪಡೆಯದೆ ನಿವೇಶನ, ಕಟ್ಟಡ ನಿರ್ಮಿಸಿದ ಗ್ರಾಹಕರಿಗೆ ಬಿ ಖಾತಾ ಮಾಡಿಕೊಳ್ಳಲು ಸುವರ್ಣ ಅವಕಾಶವಿದೆ’ ಎಂದರು.

ADVERTISEMENT

ಮುಖ್ಯಾಧಿಕಾರಿ ಬಿ. ಚಂದ್ರಶೇಖರ ಮಾತನಾಡಿ, ‘ಬಾಕಿ ಉಳಿದ ಬಿ ಖಾತಾಗಳನ್ನು ಆದ್ಯತೆಯ ಮೇಲೆ ನೀಡಲಾಗುವುದು’ ಎಂದು ತಿಳಿಸಿದರು.

‘ಪಟ್ಟಣದಲ್ಲಿ 400 ಬಿ ಖಾತಾ ದಾಖಲೆಗಳಿದ್ದು, ಅವುಗಳ ಪೈಕಿ 275 ಅರ್ಜಿಗಳು ಸ್ವೀಕೃತವಾಗಿದ್ದವು. ಅದರಲ್ಲಿ ನಮೂನೆ 3–ಎ ಅಡಿ 103 ಬಿ ಖಾತಾಗಳನ್ನು ಪ್ರಾರಂಭಿಕ ಹಂತದಲ್ಲಿ ಸ್ಥಿರಗೊಳಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.