ADVERTISEMENT

ಮುಂದೂಡಿದ್ದ ಹೊಸರೈಲು ಸಂಚಾರ ಸೆ. 6ರಿಂದ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2019, 13:39 IST
Last Updated 2 ಸೆಪ್ಟೆಂಬರ್ 2019, 13:39 IST

ಹುಬ್ಬಳ್ಳಿ:ಪ್ರಯಾಣಿಕರ ಸಂಚಾರ‌ದಟ್ಟಣೆ ಸರಿದೂಗಿಸುವ ‌ಉದ್ದೇಶದಿಂದ ನೈರುತ್ಯ ರೈಲ್ವೆಯು ಮೂರು ತಿಂಗಳ ಅವಧಿಗೆ ಸೆ. 6ರಿಂದಬೆಳಗಾವಿ–ವಾಸ್ಕೋಡಿಗಾಮಾ ನಡುವೆ ವಾರಕ್ಕೆ ಎರಡು ದಿನ ವಿಶೇಷ ರೈಲು ಸಂಚಾರ ಆರಂಭಿಸಲಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ಆಯುಷ್‌ ಖಾತೆ ರಾಜ್ಯಸಚಿವ (ಸ್ವತಂತ್ರ) ಶ್ರೀಪಾದ್ ಯಸ್ಸೊ ನಾಯಕ್‌ ಅವರು ಸೆ. 4ರಂದು ಬೆಳಿಗ್ಗೆ 11 ಗಂಟೆಗೆವಾಸ್ಕೋಡಿಗಾಮಾದಿಂದ ಹೊಸ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಅಂಗಡಿ ಅವರು ಇದೇ ರೈಲಿನಲ್ಲಿ ವಾಸ್ಕೊಡಿಗಾಮದಿಂದದೂದ್‌ಸಾಗರ್‌ ಮಾರ್ಗದಪರಿಶೀಲನೆ ಮಾಡಲಿದ್ದಾರೆ. ಆ. 10ರಂದೇ ನಡೆಯಬೇಕಿದ್ದ ಹೊಸ ರೈಲಿನ ಸಂಚಾರವನ್ನು ಮುಂದೂಡಲಾಗಿತ್ತು.

ADVERTISEMENT

ಪ್ರತಿ ಶುಕ್ರವಾರ ಹಾಗೂ ಶನಿವಾರ ಬೆಳಿಗ್ಗೆ 6.20ಕ್ಕೆ ಬೆಳಗಾವಿಯಿಂದ ಹೊರಡುವ ರೈಲು ಮ.12.40ಕ್ಕೆ ವಾಸ್ಕೋಡಿಗಾಮ ತಲುಪಲಿದೆ.

ಖಾನಾಪುರ (ಬೆ. 6.49), ಗುಂಜಿ (7.09), ಲೋಂಡಾ (7.45), ತಿನೈಘಾಟ್‌ (8.10), ಕ್ಯಾಸಲ್‌ರಾಕ್‌ (8.40), ಕುಲೇಮ್‌ (10.20), ಸನ್ವೇರದಮ್‌ ಕಚ್‌ (10.50), ಚಾಂದರ್‌ (11.09), ಮಡಗಾಂವ್‌ (11.34), ಕ್ಯಾನ್ಸುಲಿಯಮ್‌ (12.01) ಮತ್ತು ದಾಬೊಲಿಮ್‌ (12.14) ನಿಲ್ದಾಣಗಳಲ್ಲಿ ರೈಲು ನಿಲುಗಡೆಯಾಗಲಿದೆ.

ಸೆ. 6ರಿಂದ ಪ್ರತಿ ಶುಕ್ರವಾರ ಹಾಗೂ ಶನಿವಾರವಾಸ್ಕೋಡಿಗಾಮದಿಂದ ಮ. 3.55ಕ್ಕೆ ಹೊರಟು ರಾತ್ರಿ 9.25ಕ್ಕೆ ಬೆಳಗಾವಿ ಮುಟ್ಟಲಿದೆ. ಈ ವಿಶೇಷ ರೈಲು ಪ್ರಾಯೋಗಿಕವಾಗಿ ಹತ್ತು ದಿನಗಳ ಮಟ್ಟಿಗೆ ಮಾತ್ರದೂದ್‌ಸಾಗರ್‌ ನಿಲ್ದಾಣದಲ್ಲಿ ನಿಲ್ಲಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.