ADVERTISEMENT

ರೈಲ್ವೆ ಕೆಳಸೇತುವೆ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 16:33 IST
Last Updated 10 ಸೆಪ್ಟೆಂಬರ್ 2020, 16:33 IST
ಹುಬ್ಬಳ್ಳಿಯಲ್ಲಿ ಕೃಷ್ಣಕಲ್ಯಾಣ ಮಂಟಪದ ಮುಂಭಾಗದಲ್ಲಿ ಗುರುವಾರ ನಡೆದಿದ್ದ ಕೆಳಸೇತುವೆ ನಿರ್ಮಾಣ ಕಾಮಗಾರಿ
ಹುಬ್ಬಳ್ಳಿಯಲ್ಲಿ ಕೃಷ್ಣಕಲ್ಯಾಣ ಮಂಟಪದ ಮುಂಭಾಗದಲ್ಲಿ ಗುರುವಾರ ನಡೆದಿದ್ದ ಕೆಳಸೇತುವೆ ನಿರ್ಮಾಣ ಕಾಮಗಾರಿ   

ಹುಬ್ಬಳ್ಳಿ: ದೇಶಪಾಂಡೆ ನಗರದ ಕೃಷ್ಣಕಲ್ಯಾಣ ಮಂಟಪದ ಮುಂಭಾಗದಿಂದ ಭವಾನಿ ನಗರಕ್ಕೆ ತೆರಳಲು ಅನುಕೂಲವಾಗುಂತೆ ರೈಲ್ವೆ ಕೆಳಸೇತುವೆ ನಿರ್ಮಿಸುವ ಕಾರ್ಯ ಆರಂಭವಾಗಿದೆ.

₹6.5 ಕೋಟಿ ವೆಚ್ಚದ ಕಾರ್ಯಕ್ಕೆ ಇದೇ ವರ್ಷದ ಫೆಬ್ರುವರಿಯಲ್ಲಿ ಭೂಮಿಪೂಜೆ ನಡೆದಿತ್ತು. ಸೇತುವೆ 7.5 ಮೀಟರ್‌ ಅಗಲ ಮತ್ತು 4 ಮೀಟರ್‌ ಎತ್ತರ ಇರಲಿದೆ. ಸೇತುವೆ ನಿರ್ಮಾಣವಾಗುವ ಜಾಗದಲ್ಲಿ ಸದ್ಯ ಮಣ್ಣಿನ ಗುಡ್ಡವಿದ್ದು, ಮಣ್ಣು ತೆರವು ಮಾಡುವ ಕೆಲಸ ಗುರುವಾರ ನಡೆದಿತ್ತು. ಈ ಕಾಮಗಾರಿ ಎರಡೂವರೆ ತಿಂಗಳಲ್ಲಿ ಪೂರ್ಣಗೊಳ್ಳಬೇಕಿದೆ.

‘ಫೆಬ್ರುವರಿಯಲ್ಲಿ ಭೂಮಿಪೂಜೆ ನೆರವೇರಿದ ಕಾಮಗಾರಿ ಕೋವಿಡ್ ಕಾರಣದಿಂದ ತಡವಾಗಿ ಆರಂಭವಾಗಿದೆ. ಕೆಳಸೇತುವೆ ನಿರ್ಮಾಣ ಪೂರ್ಣಗೊಂಡರೆ ಕೃಷ್ಣ ಕಲ್ಯಾಣ ಮಂಟಪದಿಂದ ಭವಾನಿಗರದ ಸವೆಂತ್ ಡೆ ಅಡ್ವೆಂಟಿಸ್ಟ್ ಹೈಸ್ಕೂಲ್‌ ಸಮೀಪದ ರಸ್ತೆಗೆ ನೇರ ಸಂಪರ್ಕ ಸುಲಭವಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ’ ಎಂದು ಕಾಮಗಾರಿಯ ಗುತ್ತಿಗೆದಾರ ವಿ.ಎಸ್‌.ವಿ. ಪ್ರಸಾದ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.