ADVERTISEMENT

ಕೃತಕ ಕೈ–ಕಾಲು ಜೋಡಣಾ ಶಿಬಿರಕ್ಕೆ 11ರಂದು ನೋಂದಣಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 10:29 IST
Last Updated 3 ಆಗಸ್ಟ್ 2019, 10:29 IST

ಹುಬ್ಬಳ್ಳಿ: ಭಾರತ ವಿಕಾಸ ಪರಿಷತ್‌ ಸಿದ್ಧಾರೂಢ ಶಾಖೆ ಹಾಗೂ ಮಜೇಥಿಯಾ ಫೌಂಡೇಷನ್‌ ಜಂಟಿಯಾಗಿ ಆ. 11ರಂದು ನಗರದ ಮೂರುಸಾವಿರ ಮಠದ ಆವರಣದ ಸಭಾಭವನದಲ್ಲಿ ಉಚಿತ ಕೃತಕ ಕೈ–ಕಾಲು ಜೋಡಣಾ ಶಿಬಿರದ ಹೆಸರು ನೋಂದಣೆ ಹಮ್ಮಿಕೊಂಡಿದೆ.

ಪರಿಷತ್‌ನ ವಿಕಲಾಂಗ ಸಹಯೋಗ ಪ್ರಮುಖ ಪಿ. ಮಂಜುನಾಥ ಭಟ್ಟ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2ರ ತನಕ ತಜ್ಞರಿಂದ ಅಂಗವಿಕಲರ ತಪಾಸಣೆ ಹಾಗೂ ಕೃತಕ, ಕೈ–ಕಾಲುಗಳ ಅಳತೆ ಪಡೆಯಲಾಗುತ್ತದೆ. ಹೆಸರು ನೋಂದಾಯಿಸಿದವರಿಗೆ ಸೆ. 29ರಂದು ಸಭಾಭವನದಲ್ಲಿ ಕೃತಕ ಸಾಮಗ್ರಿ ಅಳವಡಿಸಿ ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತದೆ’ ಎಂದರು.

‘ಎಂಟು ವರ್ಷಗಳಿಂದ ಉಚಿತವಾಗಿ ಈ ಕೆಲಸ ಮಾಡಿಕೊಂಡು ಬಂದಿದ್ದೇವೆ. ಕಾಲು ಅಥವಾ ಕೈ ಕಳೆದುಕೊಂಡವರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಅವರು ಕೋರಿದ್ದಾರೆ. ಇನ್ನಷ್ಟು ಮಾಹಿತಿಗೆ ಮಂಜುನಾಥ ಭಟ್ ಮೊ. 9731647630 ಅಥವಾ ಅಮರೇಶ ಹಿಪ್ಪರಗಿ ಮೊ. 9844064658 ಸಂಪರ್ಕಿಸಿ.

ADVERTISEMENT

ಮಜೇಥಿಯಾ ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ್‌, ಪರಿಷತ್‌ನ ಕಾರ್ಯದರ್ಶಿ ಶೋಭಾ ಜಿಗಳೂರು, ಅಧ್ಯಕ್ಷ ರವೀಂದ್ರ ನಾಯಕ ಇದ್ದರು.

***

ನೇಪಾಳ ರುದ್ರಾಕ್ಷಿಗಳ ಪ್ರದರ್ಶನ ಇಂದಿನಿಂದ

ಹುಬ್ಬಳ್ಳಿ: ದೇಶಪಾಂಡೆ ನಗರದ ಸರ್ಕಿಟ್‌ ಹೌಸ್‌ ಬಳಿಯಿರುವ ರೇವಣಕರ ಕಂಫರ್ಟ್ಸ್‌ನಲ್ಲಿ ಆ. 4ರಿಂದ 15ರ ವರೆಗೆ ಹೈದರಾಬಾದ್‌ ಇಂಡಸ್‌ ನೇಪಾಳ ರುದ್ರಾಕ್ಷ ಸಂಸ್ಥೆ ರುದ್ರಾಕ್ಷಿಗಳ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಂಡಿದೆ.

ಸಂಸ್ಥೆಯ ನಿರ್ದೇಶಕ ನರೇಂದ್ರ ಕಾಶಿರೆಡ್ಡಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9ರ ತನಕ ಪ್ರದರ್ಶನ ಜರುಗಲಿದೆ. ₹ 50ಯಿಂದ ₹ 1.5 ಲಕ್ಷದವರೆಗಿನ ರುದ್ರಾಕ್ಷಿಗಳು ಮಾರಾಟಕ್ಕಿವೆ. ಜನ್ಮದಿನಕ್ಕೆ ಅನುಗುಣವಾಗಿ ರುದ್ರಾಕ್ಷಿಗಳನ್ನು ಕೊಡಲಾಗುತ್ತದೆ. ಇವುಗಳನ್ನು ಧರಿಸುವುದರಿಂದ ಅನೇಕ ಅನುಕೂಲಗಳು ಇವೆ ಎಂಬುದು ವೈಜ್ಞಾನಿಕವಾಗಿವಾಗಿಯೇ ಸಾಬೀತಾಗಿದೆ’ ಎಂದರು.

‘ಅರ್ಧ ಚಂದ್ರಾಕೃತಿ ಮುಖ ಹೊಂದಿರುವ ರುದ್ರಾಕ್ಷಿ ಮತ್ತು 21 ಮುಖಗಳುಳ್ಳ ರುದ್ರಾಕ್ಷಿಗಳು ಪ್ರದರ್ಶನದಲ್ಲಿ ಇರಲಿವೆ. ಏಕಸ್ವರ, ಸಿದ್ಧಮಾಲೆ, ಸ್ಫಟಿಕ ಮಾಲೆ, ಜಪಮಾಲೆ, ತುಳಸಿಮಾಲೆ, ಶಿವಮಾಲೆ, ಜ್ಞಾನಮಾಲೆ, ಸಾಲಿಗ್ರಾಮ, ಐಶ್ಚರ್ಯ ಮಾಲೆ, ಸ್ಪಟಿಂಗ ಲಿಂಗಗಳನ್ನು ಮಾರಾಟ ಮಾಡಲಾಗುವುದು. ಸಸ್ಯಹಾರ ಹಾಗೂ ಮಾಂಸಹಾರ ಸೇವಿಸುವ ಎಲ್ಲರೂ ರುದ್ರಾಕ್ಷಿ ಧರಿಸಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.