ADVERTISEMENT

ಸ್ವತಂತ್ರ ಅಭ್ಯರ್ಥಿ ಸೋಮಶೇಖರಗೆ ಭಾರಿಪ ಬೆಂಬಲ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 9:19 IST
Last Updated 17 ಏಪ್ರಿಲ್ 2019, 9:19 IST

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ವರ್ಧಿಸಿರುವ ಸೋಮಶೇಖರ ಯಾದವ ಅವರಿಗೆ ಭಾರತೀಯ ರಿಪಬ್ಲಿಕನ್‌ ಪಕ್ಷ (ಭಾರಿಪ) ಬಹುಜನ ಮಹಾಸಂಘ ಮತ್ತು ಕರ್ನಾಟಕ ಪ್ರದೇಶ ಬುದ್ಧ ಮಹಾಸಂಘ ಬೆಂಬಲ ವ್ಯಕ್ತಪಡಿಸಿವೆ.

ಭಾರಿಪದ ಕರ್ನಾಟಕ ಉಸ್ತುವಾರಿ ಮಹೇಂದ್ರ ಮಂಕಾಳೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾರ್ಪೊರೇಟ್‌ ಕಂಪನಿಗಳಿಗಷ್ಟೇ ಲಾಭವಾಗಿದೆ. ದೇಶದಲ್ಲಿ ಈಗ ಅಘೋಷಿತ ತುರ್ತುಪರಿಸ್ಥಿತಿ ನಿರ್ಮಾಣವಾಗಿದೆ. ಇದರ ವಿರುದ್ಧ ಹೋರಾಡಲು ಧಾರವಾಡ, ವಿಜಯಪುರ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಬೆಂಬಲ ಪಡೆದು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ’ ಎಂದರು.

ಸೋಮಶೇಖರ ಮಾತನಾಡಿ ‘ಎಲ್ಲರಿಗೂ ಉಚಿತ ಶಿಕ್ಷಣ ಕೊಡಬೇಕು. ಕ್ಷೇತ್ರದಲ್ಲಿ 24X7 ನೀರಿನ ಸೌಲಭ್ಯ ತಂದುಕೊಡುವ ಗುರಿಯಿದೆ. ರೈತರ ಸಂಕಷ್ಟ ಹೆಚ್ಚಾಗಿವೆ. ಇದೆಲ್ಲಕ್ಕೂ ಪರಿಹಾರ ಕೊಡಿಸುವ ಸಲುವಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎಂದರು.

ADVERTISEMENT

ಮಹಾಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಗುರುನಾಥ ಶಿವರಾಜ, ರಾಜು ಕಾಂಬಳೆ, ಗಂಗಾಧರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.