ಅರ್ಜಿ ಆಹ್ವಾನ
ಹುಬ್ಬಳ್ಳಿ: ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ನೀಡುವ 2025ರ ‘ವಿಭಾ ಸಾಹಿತ್ಯ ಪ್ರಶಸ್ತಿ’ಗೆ ಕನ್ನಡದ ಕವಿ ಮತ್ತು ಕವಯಿತ್ರಿಯರಿಂದ 30ಕ್ಕೂ ಹೆಚ್ಚು ಮತ್ತು 50ರ ಒಳಗಿರುವ ಸ್ವರಚಿತ ಕವನಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ಅನುವಾದಿತ ಕವನಗಳು, ಚುಟುಕು ಮತ್ತು ಹನಿಗವನಗಳು ಬೇಡ. ಪ್ರಶಸ್ತಿಯು ₹10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಯಾವುದೇ ಕಾರಣಕ್ಕೂ ಹಸ್ತಪ್ರತಿ ಹಿಂದಿರುಗಿಸುವುದಿಲ್ಲ. ಇ–ಮೇಲ್ ಬದಲು ಡಿಟಿಪಿ ಮಾಡಿದ ಅಥವಾ ಕೈಯಲ್ಲಿ ಬರೆದ ಹಸ್ತಪ್ರತಿ ಕಳುಹಿಸಬೇಕು. ಹಸ್ತಪ್ರತಿ ಸಲ್ಲಿಕೆಗೆ ಜೂನ್ 30 ಕೊನೆಯ ದಿನ.
ಹಸ್ತಪ್ರತಿ ಕಳುಹಿಸಬೇಕಾದ ವಿಳಾಸ: ಸುನಂದಾ, ಪ್ರಕಾಶ ಕಡಮೆ, ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-2025, ನಂ. 90, ‘ನಾಗಸುಧೆ ಜಗಲಿ’, 6/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ–580031. ದೂರವಾಣಿ ಸಂಖ್ಯೆ: 9380613683 ಅಥವಾ 9845779387.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.