ADVERTISEMENT

ಹುಬ್ಬಳ್ಳಿ: ಬ್ಯಾಂಕ್ ನೌಕರರ ಯುವಸಮಾವೇಶ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 6:28 IST
Last Updated 29 ಜನವರಿ 2023, 6:28 IST
ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಎಐಬಿಇಎ ಹಾಗೂ ಕೆಪಿಬಿಇಎಫ್ ವತಿಯಿಂದ ಎರಡನೇ ಯುವಸಮಾವೇಶ ಶನಿವಾರ ನಡೆಯಿತು
ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಎಐಬಿಇಎ ಹಾಗೂ ಕೆಪಿಬಿಇಎಫ್ ವತಿಯಿಂದ ಎರಡನೇ ಯುವಸಮಾವೇಶ ಶನಿವಾರ ನಡೆಯಿತು   

ಹುಬ್ಬಳ್ಳಿ: ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘ (ಎಐಬಿಇಎ) ಹಾಗೂ ಕರ್ನಾಟಕ ರಾಜ್ಯ ಬ್ಯಾಂಕ್‌ ನೌಕರ ಸಂಘದ (ಕೆಪಿಬಿಇಎಫ್) ವತಿಯಿಂದ ನಗರದ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಎರಡನೇ ಯುವಸಮಾವೇಶ ಶನಿವಾರ ನಡೆಯಿತು. 350ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ಎಐಬಿಇಎ ಜಂಟಿ ನಿರ್ದೇಶಕ ಎಸ್‌.ಡಿ. ಶ್ರೀನಿವಾಸನ್‌ ಮಾತನಾಡಿ, ‘ಸಾಲ ಪಡೆದ ಕೈಗಾರಿಕೆಗಳು ದಿವಾಳಿಯಾಗಿವೆ ಎಂದು ಘೋಷಣೆ ಮಾಡುವುದರಿಂದ ಬ್ಯಾಂಕ್‌ಗಳು ನಷ್ಟಕ್ಕೀಡಾಗುತ್ತಿವೆ. ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯಿಂದ ನೌಕರರಿಗೆ ಸೂಕ್ತ ಸ್ಥಾನ ದೊರೆಯುತ್ತಿಲ್ಲ’ ಎಂದು ಹೇಳಿದರು.

ಡಾ. ಸಿದ್ಧನಗೌಡ ಪಾಟೀಲ, ಕೆಪಿಬಿಇಎಫ್ ಅಧ್ಯಕ್ಷ ಎಂ.ಎಸ್‌. ಶ್ರೀನಿವಾಸನ್‌, ಶಿವಕುಮಾರ್‌, ಹುಬ್ಬಳ್ಳಿ–ಧಾರವಾಡ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಟೀಫನ್‌ ಜಯಚಂದ್ರ, ಫಣೀಂದ್ರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.