ADVERTISEMENT

ಜ್ಞಾನ ವಿಕಾಸಕ್ಕೆ ಮಾಧ್ಯಮ ಬಳಕೆ ಅಗತ್ಯ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 6:05 IST
Last Updated 22 ಆಗಸ್ಟ್ 2012, 6:05 IST
ಜ್ಞಾನ ವಿಕಾಸಕ್ಕೆ ಮಾಧ್ಯಮ ಬಳಕೆ ಅಗತ್ಯ: ಬೊಮ್ಮಾಯಿ
ಜ್ಞಾನ ವಿಕಾಸಕ್ಕೆ ಮಾಧ್ಯಮ ಬಳಕೆ ಅಗತ್ಯ: ಬೊಮ್ಮಾಯಿ   

ಶಿಗ್ಗಾವಿ: ಪ್ರಚಲಿತ ವಿದ್ಯಮಾನಗಳನ್ನು ಪ್ರಚಾರ ಪಡಿಸುವುದರಿಂದ ದೇಶ- ವಿದೇಶದಲ್ಲಿನ ಸುದ್ದಿ, ಸಮಾಚಾರ  ತಿಳಿಯಲು ಮಾಧ್ಯಮದಿಂದ ಮಾತ್ರ ಸಾಧ್ಯವಿದೆ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ವಿರಕ್ತಮಠದಲ್ಲಿ ಮಂಗಳ ವಾರ  ಕರ್ನಾಟಕ ಗ್ರಾಮೀಣ ಕೇಬಲ್ ಹಾಗೂ ಟಿ.ವಿ.ಆಪರೇಟರ್‌ಗಳ ಯೂನಿ ಯನ್ ಆಶ್ರಯದಲ್ಲಿ ನಡೆದ ಧಾರ ವಾಡ, ಗದಗ ಹಾಗೂ ಹಾವೇರಿ ಜಿಲ್ಲಾ ಮಟ್ಟದ `ಕೇಬಲ್ ಡೇ~ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಮಾಧ್ಯಮಗಳು ಸರ್ವ ಜನರ ಜೀವಾಳವಾಗಿವೆ. ಪ್ರತಿಯೊಬ್ಬರ ಬದು ಕಿನ ಆಯಾಮವನ್ನು ಪ್ರಚುರ ಪಡಿಸುವ ದೊಡ್ಡಕ್ರಾಂತಿ ಮಾಧ್ಯಮಗಳಿಂದ ಉಂಟಾಗಿದೆ ಎಂದರು.

ಪಟ್ಟಣ ಹಾಗೂ ಗ್ರಾಮೀಣ ಕೇಬಲ್‌ದಾರರಲ್ಲಿರುವ ಸಣ್ಣ ಪುಟ್ಟ ಭಿನ್ನಾಭಿ ಪ್ರಾಯಗಳನ್ನು ದೂರ ಮಾಡಿ ಒಗ್ಗಟ್ಟಿ ನಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ರಾಮ ಚಂದ್ರಪ್ಪ ಅರ್ಕಸಾಲಿ ಹಾಗೂ ವಿವಿಧ ಗಣ್ಯರನ್ನು ಸನ್ಮಾಸಲಾಯಿತು.

ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಕುಂದಗೋಳ ಮಾಜಿ ಶಾಸಕ ಸಿ.ಎಸ್.ಶಿವಳ್ಳಿ, ಜಿಪಂ. ಮಾಜಿ ಅಧ್ಯಕ್ಷೆ ಪ್ರೇಮಾ ಪಾಟೀಲ ಮಾತನಾಡಿದರು. ವಿರಕ್ತ ಮಠದ ಸಂಬನಬಸವ ಸ್ವಾಮೀಜಿ, ಹುಲ ಗೂರ ಓಲೆಮಠದ ಡಾ.ಅಭಿನವ ಕುಮಾರ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. `

ಕರ್ನಾಟಕ ಗ್ರಾಮೀಣ ಕೇಬಲ್ ಹಾಗೂ ಟಿ.ವಿ. ಆಪರೇಟರ್ ಯೂನಿ ಯನ್ ಅಧ್ಯಕ್ಷ ಮೃತ್ಯಂಜಯ ಕಣವಿ ಮಠ ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಪಂ ಸದಸ್ಯರಾದ ಸಿ.ಎಸ್‌ಪಾಟೀಲ, ಸರೋಜಾ ಆಡಿನ,  ತಾಪಂ ಅಧ್ಯಕ್ಷ ನಿಂಗಪ್ಪ ಜವಳಿ, ಸಾಹಿತಿ ಶಿವಾನಂದ ಮ್ಯಾಗೇರಿ, ನಾಟಕ ಆಕಾ ಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಬೆಂಗೇರಿ, ಎಲಬು ಕೀಲುಗಳ ತಜ್ಞ ಬಸವಂತಪ್ಪ ಭೋಸಲೆ, ಮಲ್ಲಕಂಬದಲ್ಲಿ ರಾಜ್ಯ ಚಾಂಪಿಯನ್ ಸವಿತಾ ನರ ಗುಂದ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.