ADVERTISEMENT

ಸಿಂಗಟಾಲೂರ: ಕಾಮಗಾರಿ ಸ್ಥಗಿತಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 5:40 IST
Last Updated 14 ಸೆಪ್ಟೆಂಬರ್ 2011, 5:40 IST

ಡಂಬಳ: ಸಿಂಗಟಾಲೂರ ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾ ರಿಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿರುವ ಡಂಬಳದ ರೈತರು, ಮಂಗಳವಾರ ತಹಸೀಲ್ದಾರ್ ರಮೇಶ ಕೋನರಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಕಾಲುವೆ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿರುವ ಕಂಪೆನಿಗಳು ರೈತರ ಜಮೀನಿನಲ್ಲಿ ಅಕ್ರಮವಾಗಿ ಜೆಸಿಬಿ ಯಂತ್ರ ಬಳಸಿ ಕಾಲುವೆ ನಿರ್ಮಾಣ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ಜಮೀನಿನಲ್ಲಿ ಬೆಳೆದ ಶೇಂಗಾ, ಉಳ್ಳಾಗಡ್ಡಿ, ಸೂರ್ಯಕಾಂತಿ, ಕಬ್ಬು, ಗೋವಿನಜೋಳ ಬೆಳೆಗೆ ಹಾನಿಯಾ ಗುತ್ತಿದೆ. ಆದ್ದರಿಂದ ನಿರ್ಮಾಣ ಕಾಮ ಗಾರಿ ತಡೆಯಬೇಕು  ಎಂದು ರೈತರು ಆಗ್ರಹಿಸಿದ್ದಾರೆ.

ಕಾಲುವೆ ನಿರ್ಮಾಣದ ಸಂದರ್ಭದಲ್ಲಿ ಆಗಿರುವ ಬೆಳೆಹಾನಿಗೆ ಪರಿಹಾರ ನೀಡುವ ವಿಚಾರದಲ್ಲೂ ಸಹ ಗುತ್ತಿಗೆ ಕಂಪೆನಿಗಳು ಮೋಸ ಮಾಡಿವೆ ಎಂದು ಆರೋಪಿಸಿರುವ ರೈತರು, ಪ್ರತಿ ಗುಂಟೆಗೆ ಬೆಳೆ ಪರಿಹಾರಕ್ಕಾಗಿ ಕೇವಲ 500 ರೂಪಾಯಿ ನೀಡಿದ್ದಾರೆ. ಇದೇ ಕಾಮಗಾರಿಯನ್ನು ಮಾಡಿದ ಬೇರೆ ಗ್ರಾಮಗಳ ರೈತರಿಗೆ ಪ್ರತಿ ಗುಂಟೆಗೆ 1500 ರೂಪಾಯಿ ಪರಿಹಾರವನ್ನು ನೀಡಲಾಗಿದೆ ಎಂದು ದೂರಿದರು.

ದರ ಪರಿಷ್ಕರಣೆಗೆ ಆಗ್ರಹ: ಸಿಂಗಟಾಲೂರ ಏತ ನೀರಾವರಿ ಯೋಜನೆಯ ಸ್ವಾಧೀನ ಪಡಿಸಿಕೊಂ ಡಿರುವ ಜಮೀನಿಗೆ ದರ ಪರಿಷ್ಕರಣೆ ಮಾಡಿ ಪ್ರತಿ ಎಕರೆಗೆ 10 ಲಕ್ಷ ರೂಪಾಯಿ ನೀಡುವಂತೆ ಆಗ್ರಹಿಸಿ ರೈತರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಆರಂಭ ಗೊಂಡಿದ್ದು, ಈ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಒಳಪಟ್ಟ ಜಮೀನುಗಳಿಗೆ ಸರ್ಕಾರ ಕಡಿಮೆ ದರ ನಿಗದಿಪಡಿಸಿರುವುದಕ್ಕೆ ಎಲ್ಲ ರೈತರ ವಿರೋಧವಿದೆ ಎಂದು ಮನವಿ ಯಲ್ಲಿ ತಿಳಿಸಿದ್ದಾರೆ.

ರೈತ ಮುಖಂಡರಾದ ಗೋಣಿಬಸಪ್ಪ ಕೊರ್ಲಹಳ್ಳಿ, ಸುರೇಶ ಗಡಗಿ, ಷಣ್ಮುಖ ಪಟ್ಟಣಶೆಟ್ಟಿ, ಮುತ್ತಣ್ಣ ಕೊಂತಿಕಲ್ಲ, ಮರಿಯಪ್ಪ ಸಿದ್ದಣ್ಣವರ, ಕೆ.ಐ. ಕೊಟ್ಟೂರಶೆಟ್ಟರ, ವೆಂಕಣ್ಣ ಗಡಗಿ, ಗವಿಸಿದ್ದಪ್ಪ ಹಾದಿಮನಿ, ಶಿವಕುಮಾರ ಗುರುವಿನ, ಸಿದ್ದಪ್ಪ ಹಡಪದ, ದೇವಪ್ಪ ಚೌಡಕಿ, ರಾಮಪ್ಪ ಹೊಸಕೆರೆ, ಹನುಮಪ್ಪ ಕೆರೆ, ಮಲ್ಲಪ್ಪ ಮಠದ, ಮಂಜುನಾಥ ಪೂಜಾರ, ರುದ್ರಪ್ಪ ಏಣಗಿ, ರಾಮಣ್ಣ ನಾಯ್ಕರ, ರಂಗಪ್ಪ ಕಾಶಬೋವಿ, ಹುಲಗಪ್ಪ ಬಂಗಾರ ಗುಂಡಿ, ತಿಮ್ಮಣ್ಣ ವಡ್ಡರ, ಚಂದ್ರ ಶೇಖರಪ್ಪ ಗಡಿಗಿ, ಮೊಹಮ್ಮದ್ ಅತ್ತಾರ್ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.