ADVERTISEMENT

ಸೂರ್ಯಕಾಂತಿ ಬೀಜಕ್ಕಾಗಿ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 9:10 IST
Last Updated 12 ಅಕ್ಟೋಬರ್ 2012, 9:10 IST

ನರಗುಂದ: ಆರು ತಿಂಗಳುಗಳಿಂದ ಮಳೆಯಾಗದೇ ಈ ಭಾಗ ಬರಪೀಡಿತವಾಗಿ ಕೃಷಿ ಚಟುವಟಕೆಯಿಂದ ರೈತರು ದೂರವಾಗಿದ್ದರು. ಈ ಬರದ ನಡುವೆ ಈಗಷ್ಟೇ ವರುಣದೇವ ಕೃಪೆ ತೋರಿದ್ದು  ಹಿಂಗಾರು ಬಿತ್ತನೆಗೆ ತೊಡಗಿದ್ದಾರೆ. ಆದರೆ ಅವಶ್ಯವಿರುವ ಸಬ್ಸಿಡಿ ಬಿತ್ತನೆ ಬೀಜಗಳು ದೊರೆಯದೇ  ರೈತರು ಕಂಗಾಲು ಆಗಿದ್ದಾರೆ. 

ಹಿಂಗಾರಿ ಬಿತ್ತನೆಗೆ ಸೂರ್ಯಕಾಂತಿ, ಜೋಳ, ಕಡಲೆ, ಗೋಧಿ, ಕುಸುಬೆ, ಹೈಬ್ರಿಡ್ ಹತ್ತಿ ಬೀಜಗಳನ್ನು ಬಿತ್ತುವುದು ವಾಡಿಕೆ. ಆದರೆ ಇದರಲ್ಲಿ ಕೇವಲ ಜೋಳ, ಕಡಲೆ  ಬೀಜಗಳು ಮಾತ್ರ ಕೃಷಿ  ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ದೊರೆ ಯುತ್ತಿವೆ. ಅದರಲ್ಲೂ ಸೂರ್ಯಕಾಂತಿ ಬೀಜಗಳ ಬೇಡಿಕೆ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಹೆಚ್ಚಾಗಿದೆ. ಆದರೂ ಇದುವರೆಗೂ ಸೂರ್ಯಕಾಂತಿ ಬೀಜ ಪೂರೈಕೆಯಾಗುತ್ತಿಲ್ಲ. 

 ಇದರಿಂದ  ಸಬ್ಸಿಡಿ ಸೂರ್ಯಕಾಂತಿ ಬೀಜಗಳು ಶೀಘ್ರ ಸಿಗುವುದು ಕನಸಿನ ಮಾತಾಗಿದೆ. ಹಿಂಗಾರು ಬಿತ್ತನೆಯಲ್ಲಿ ಶೇ.50 ರಷ್ಟು ಬಿತ್ತನೆ ಸೂರ್ಯಕಾಂತಿಯನ್ನೇ ಮಾಡುವಾಗ ಈ ಬೀಜಗಳು ದೊರೆಯದಿರುವುದು  ರೈತರಲ್ಲಿಆಕ್ರೋಶ ಮೂಡಿಸಿದೆ.  ಈ ಬಗ್ಗೆ  ಅಧಿಕಾ ರಿಗಳ್ನು ಕೇಳಿದರೆ ಎರಡು  ದಿವಸಗಳಲ್ಲಿ  ಬರುತ್ತದೆ ಎಂದು ಹೇಳುತ್ತಾರೆಯೇ ಹೊರತು, ಸೂರ್ಯಕಾಂತಿ ಬೀಜಗಳನ್ನು ಪೂರೈಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಯುವ ರೈತ ಕುಮಾರ ಚಲವಾದಿ ಬೇಸರದಿಂದ ವ್ಯಕ್ತ ಪಡಿಸಿದ್ದಾರೆ.

ಬಗ್ಗೆ ಕೃಷಿ ಅಧಿಕಾರಿ ಮಂಜುನಾಥ್  ಅವರನ್ನು ಕೇಳಿದರೆ  `ಸರಕಾರದ ಮಟ್ಟದಲ್ಲಿಯೇ ಸೂರ್ಯಕಾಂತಿ  ಬೀಜಗಳ ಟೆಂಡರ್  ಆಗಬೇಕು. ಮೇಲಾಧಿಕಾರಿಗಳ  ಮಾಹಿತಿ ಪ್ರಕಾರ ಈಗಷ್ಟೇ ಅನುಮೋದನೆ ಸಿಕ್ಕಿದೆ. ಅದು ಟೆಂಡರ್ ಆದ  ತಕ್ಷಣ ಒಂದರೆಡು ದಿನಗಳಲ್ಲಿ ಬೀಜ ಪೂರೈಸಲಾಗುವುದು ಎಂದರು. 

 ಜೊತೆಗೆ ತಾಲ್ಲೂಕಿನಲ್ಲಿ 11,500 ಹೆಕ್ಟೇರ್ ಪ್ರದೇಶ ಸೂರ‌್ಯಕಾಂತಿ ಬೀಜ ಬಿತ್ತನೆ ಗುರಿ  ಹೊಂದಿದ್ದು 575 ಕ್ವಿಂಟಲ್ ಬೀಜದ ಬೇಡಿಕೆ ಇದೆ. ಕಡಲೆ, ಜೋಳದ ಬೀಜದ ದಾಸ್ತಾನು ಸಾಕಷ್ಟಿದೆ. ಆದ್ದರಿಂದ ಸೂರ್ಯಕಾಂತಿ ಬೀಜಗಳನ್ನು  ಶೀಘ್ರ ಪೂರೈಸುವ  ವ್ಯವಸ್ಥೆ ಮಾಡಲಾಗುವುದು ಎಂದರು. 

 575 ಕ್ವಿಂಟಲ್  ಸೂರ್ಯಕಾಂತಿ ಬೀಜದ  ಬೇಡಿಕೆ ಇದ್ದರೂ ಅದರಲ್ಲಿ  ಪೂರೈಕೆಯಾಗದೇ ಇರುವುದು ತೀವ್ರ ಅಸಮಾಧಾನ  ಉಂಟು ಮಾಡಿದೆ. ಹಿಂಗಾರಿ ಪ್ರಮುಖ ವಾಣಿಜ್ಯ ಬೆಳೆಯಾದ ಸೂರ್ಯಕಾಂತಿ  ಬೀಜ ಶೀಘ್ರ ಪೂರೈಕೆ ಯಾಗಬೇಕಿದೆ. ಇಲ್ಲವಾದರೆ ಇದಕ್ಕಾಗಿ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ.

ಈ ಹಿನ್ನೆಲೆಯಲ್ಲಿ  ಕೃಷಿ ಇಲಾಖೆ  ಎಚ್ಚೆತ್ತು ಕೊಂಡು ರೈತರ ಸಹಾಯಕ್ಕೆ ಧಾವಿಸಬೇಕಾಗಿದೆ. ಇಲ್ಲವಾದ್ದಲ್ಲಿ  ಸಂಕಷ್ಟದಲ್ಲಿ ಸಿಲುಕಲಿದ್ದಾರೆ ಎಂದು ರೈತರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರೆ.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.