ADVERTISEMENT

ಸೂರ್ಯಕಾಂತಿ ಬೆಳೆಗೆ ಕೀಟಬಾಧೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 6:47 IST
Last Updated 20 ಅಕ್ಟೋಬರ್ 2017, 6:47 IST

ಮುಳಗುಂದ: ಹೋಬಳಿ ವ್ಯಾಪ್ತಿಯಲ್ಲಿ ಸೂರ್ಯಕಾಂತಿ ಬೆಳೆಗೆ ಹಸಿರು ಎಲೆ ತಿನ್ನುವ ಕೀಟಬಾಧೆ ಕಾಡುತ್ತಿದೆ. ಇದರಿಂದ ರೈತರು ಇಳುವರಿ ಕುಸಿತದ ಆತಂಕ ಎದುರಿಸುತ್ತಿದ್ದಾರೆ. ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿರುವುದರಿಂದ ಹಿಂಗಾರು ಬೆಳೆ ಬಿತ್ತನೆಗೂ ಅಡ್ಡಿಯಾಗಿದೆ.

ಕೀಟಬಾಧೆ ತಡೆಯುವ ನಿಟ್ಟಿನಲ್ಲಿ ಮೋನೋಪ್ರೊಟೋಮಾಸ್ ಹಾಗೂ ಪ್ರೈಪೈನೋಪಾಸ್ ರಾಸಾಯನಿಕವನ್ನು ಪ್ರತಿ ಲೀಟರಿಗೆ 2 ಎಂ.ಎಲ್.ನಷ್ಟು ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಎಂದು ಕೃಷಿ ಸಹಾಯಕ ಅಧಿಕಾರಿ ಎಂ.ಬಿ.ಸುಂಕಾಪುರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT