ಶಿರಹಟ್ಟಿ: ದೇಶದ ರಕ್ಷಣೆ ಮಾಡುವ ಕಾರ್ಯ ಕೇವಲ ಸೈನಿಕರಿಂದ ಮಾತ್ರವಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ ಎಂದು ನಿವೃತ್ತ ಪೋಲಿಸ್ ಅಧಿಕಾರಿ ಕೆ.ಎಫ್. ರಮಜಾನವರ ಹೇಳಿದರು.
ವಿಶ್ವ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಡಿಯಲ್ಲಿ ಸೇವೆ ಸಲ್ಲಿಸುವ ಸೈನಿಕರ ಕಾರ್ಯ ಶ್ಲಾಘನೀಯವಾದದು. ದೇಶದ ಎಲ್ಲ ನಾಗರಿಕರು ಸೈನಿಕರಂತೆ ಕಾರ್ಯೋನ್ಮುಖರಾದರೆ ದೇಶದ ಭದ್ರತೆ ಹಾಗೂ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.
ಹುತಾತ್ಮ ವೀರ ಯೋಧ ಮೊಹಮ್ಮದ್ ಶಬ್ಬೀರ್ ಅಂಗಡಿ ಅವರ ತಂದೆ ಬಾಬಾಜಾನ್ ಅಂಗಡಿ ಹಾಗೂ ಮಾಜಿ ಯೋಧ ಡಿ.ಸಿ. ಪವಾರ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಸವರಾಜ ಸಂಗಪ್ಪಶೆಟ್ಟರ, ನಜೀರ್ ಡಂಬಳ, ಗಂಗವ್ವ ಅಂಗಡಿ, ಮಧುಮತಿ ಕಪ್ಪತ್ತನವರ, ಸರೋಜಾ ಕಟ್ಟಿಮನಿ, ಪೂರ್ಣಿಮಾ ಮುದೋಳಕರ, ನೀಲಮ್ಮ ನಾರ್ಶಿ, ಗೌರಮ್ಮ ಸಂಗಪ್ಪಶೆಟ್ಟರ, ಕವಿತಾ ಬೋರಶೆಟ್ಟರ, ಪದ್ಮಾ ಬೇದ್ರೆ, ಆನಂದ ಕೊಡ್ಲಿ, ಹನಮಂತ ಶಿರಹಟ್ಟಿ, ಮಂಜುನಾಥ ಪವಾಡಶೆಟ್ಟರ, ಹಂಪಮ್ಮ ಬೋರಶೆಟ್ಟರ, ಹಜರತ್ ಟಿಪ್ಪು ಸುಲ್ತಾನ್ ಸಂಘ, ಪುಟ್ಟರಾಜ ಗವಾಯಿ, ಲಕ್ಷ್ಮೀ ಸ್ವಸಹಾಯ ಮಹಿಳಾ ಸಂಘ ದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೇಶ ರಕ್ಷಣೆಯಲ್ಲಿ ತೊಡಗಿರುವ ಯೋಧರು ನಮ್ಮ ದೇಶದ ಆಸ್ತಿಯಾಗಿದ್ದಾರೆ. ಅವರಿಗೆ ಎಲ್ಲರೂ ಗೌರವ ತೋರಬೇಕು
ಕೆ.ಎಫ್. ರಮಜಾನವರ, ನಿವೃತ್ತ ಪೊಲೀಸ್ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.