ADVERTISEMENT

ಕಪ್ಪತ್ತಗುಡ್ಡಕ್ಕೆ ಬೆಂಕಿ; ಸಸ್ಯಗಳ ನಾಶ

5 ರಿಂದ 7 ಎಕರೆ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 19:52 IST
Last Updated 25 ಜನವರಿ 2021, 19:52 IST
ಡಂಬಳ ಹೋಬಳಿಯ ಡೋಣಿ ಮತ್ತು ಡೋಣಿ ತಾಂಡ ಗ್ರಾಮಗಳ ಮಧ್ಯೆ ಬರುವ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದ ಸೂಜಿ ಮಹಡಿಯಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ತಗುಲಿರುವುದು.
ಡಂಬಳ ಹೋಬಳಿಯ ಡೋಣಿ ಮತ್ತು ಡೋಣಿ ತಾಂಡ ಗ್ರಾಮಗಳ ಮಧ್ಯೆ ಬರುವ ಕಪ್ಪತ್ತಗುಡ್ಡದ ಅರಣ್ಯ ಪ್ರದೇಶದ ಸೂಜಿ ಮಹಡಿಯಲ್ಲಿ ಸೋಮವಾರ ಮಧ್ಯಾಹ್ನ ಬೆಂಕಿ ತಗುಲಿರುವುದು.   

ಡಂಬಳ (ಗದಗ): ಹೋಬಳಿಯ ಡೋಣಿ ಮತ್ತು ಡೋಣಿ ತಾಂಡ ಗ್ರಾಮಗಳ ಮಧ್ಯೆ ಇರುವ ಕಪ್ಪತ್ತಗುಡ್ಡ ಪ್ರದೇಶದ ಸೂಜಿ ಮಹಡಿ ಬಳಿ ಐದರಿಂದ ಏಳು ಎಕರೆಯಷ್ಟು ಅರಣ್ಯಕ್ಕೆ ಸೋಮವಾರ ಬೆಂಕಿ ಬಿದ್ದಿದೆ.

ಬೆಳಿಗ್ಗೆ 11ಕ್ಕೆ ಬೆಂಕಿ ಕಾಣಿಸಿ ಕೊಂಡಿದ್ದು, ಈ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇದ್ದಂತಹ ಗಿಡ, ಮರಗಳು, ಹುಲ್ಲು ಸಂಪೂರ್ಣ ಸುಟ್ಟು ಕರಕಲಾಗಿವೆ.

‘ಡೋಣಿ ಭಾಗದ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಕೆಲವರು ಅರಣ್ಯ ಭೂಮಿ ಯನ್ನು ಒತ್ತುವರಿ ಮಾಡಿಕೊಂಡಿದ್ದರು. ಈಚೆಗೆ ಅರಣ್ಯ ಇಲಾಖೆಯವರುಅದನ್ನು ವಶಪಡಿಸಿಕೊಂಡಿದ್ದರಿಂದ ಕೆಲವರು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಅನುಮಾನ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತಗೆದುಕೊಳ್ಳುತ್ತೇವೆ’ ಎಂದು ಅರಣ್ಯಾಧಿಕಾರಿ ಪ್ರದೀಪ ಪವಾರ್
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಡೋಣಿ ಭಾಗದಲ್ಲಿ ಕಪ್ಪತಗುಡ್ಡದ ವ್ಯಾಪ್ತಿ 150 ಎಕರೆಯಷ್ಟಿದ್ದು, ಅದರಲ್ಲಿ ಐದರಿಂದ ಏಳು ಎಕರೆಗೆ ಮಾತ್ರ ಬೆಂಕಿ ತಗುಲಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.