ADVERTISEMENT

ಹಿರಿಯರ ಅಸಮಾಧಾನ, ಸಭೆ ಇಂದು

ಯಾವಗಲ್‌ ಪುತ್ರನಿಗೆ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪಟ್ಟ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 17:18 IST
Last Updated 9 ಡಿಸೆಂಬರ್ 2018, 17:18 IST
ಕಾಂಗ್ರೆಸ್‌
ಕಾಂಗ್ರೆಸ್‌   

ನರಗುಂದ: ಮಾಜಿ ಶಾಸಕ ಬಿ.ಆರ್.ಯಾವಗಲ್‍ ಅವರ ಪುತ್ರ ಪ್ರವೀಣ ಯಾವಗಲ್‍ ಅವರನ್ನು ಏಕಾಏಕಿ ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಡಿ.3ರಂದು ನೇಮಕ ಮಾಡಿದ್ದು, ಇದರಿಂದ ತಾಲ್ಲೂಕು ಕಾಂಗ್ರೆಸ್ ಮುಖಂಡರು ಹಾಲಿ
ಅಧ್ಯಕ್ಷ ಚಂಬಣ್ಣ ವಾಳದ ನೇತೃತ್ವದಲ್ಲಿ ಶನಿವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘1999ರಿಂದ ಚಂಬಣ್ಣ ವಾಳದ ಅವರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವಗಲ್‍ ಅವರ ರಾಜಕೀಯ ಜೀವನಕ್ಕೆ ನಿರಂತರ ಬೆಂಬಲವಾಗಿ ನಿಂತಿದ್ದಾರೆ. ಆದರೆ ಈಗ ಅದನ್ನು ಲೆಕ್ಕಿಸದೇ ಏಕಾಏಕಿ ಅವರನ್ನು ಬದಲಾವಣೆ ಮಾಡಲಾಗಿದೆ. ಇದು ಮಾಜಿ ಶಾಸಕಯಾವಗಲ್‌ ಅವರಪುತ್ರ ಪ್ರೇಮಕ್ಕೆ ಸಾಕ್ಷಿ’ ಎಂದು ಮುಖಂಡರಾದಎಸ್.ಆರ್.ಪಾಟೀಲ, ಎಂ.ಎಂ.ಮುಳ್ಳೂರು, ಡಿ.ಎಸ್.ಪಾಟೀಲ ಸುದ್ದಿಗೋಷ್ಠಿಯಲ್ಲಿಆರೋಪಿಸಿದರು.

‘18 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಾಳದ ಅವರಿಗೂ ತಿಳಿಸದೇ ಏಕಾಏಕಿ ಬದಲಾವಣೆ ಮಾಡಿರುವುದು ಯಾವ ಪುರುಷಾರ್ಥಕ್ಕೆ’ ಎಂದು ಕಾಂಗ್ರೆಸ್‌ ಮುಖಂಡರು ಪ್ರಶ್ನಿಸಿದರು.

ADVERTISEMENT

ಇಂದು ಸಭೆ: ಈ ಸಂಬಂಧ ಚರ್ಚಿಸಲು ಸೋಮವಾರ (ಡಿ.10) ಬೆಳಿಗ್ಗೆ 11ಕ್ಕೆ ಪಟ್ಟಣದ ಜನತಾ ಬಜಾರ್‌ನಲ್ಲಿಸಭೆ ಕರೆಯಲಾಗಿದೆ. ಇದರಲ್ಲಿ ತಾಲ್ಲೂಕು ಕಾಂಗ್ರೆಸ್‍ನ ಪದಾಧಿಕಾರಿಗಳು ಭಾಗವಹಿಸುವಂತೆ ಚಂಬಣ್ಣ ವಾಳದ
ಕೋರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ್ಯಾಮಣ್ಣ ಸವದತ್ತಿ, ಎಫ್.ವೈ.ದೊಡಮನಿ, ರವಿ ಯರಗಟ್ಟಿ, ಈಶ್ವರಗೌಡ ಪಾಟೀಲ, ಪುಂಡಲೀಕಪ್ಪ ಹುಲಜೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.