ADVERTISEMENT

‘ವಿಶ್ವಕ್ಕೆ ಭಾರತದ ಸಂಸ್ಕೃತಿ ಪರಿಚಯಿಸಿದ ವಿವೇಕಾನಂದರು’

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 11:08 IST
Last Updated 13 ಜನವರಿ 2019, 11:08 IST
ಗದುಗಿನ ಸ್ವಾಮಿ ವಿವೇಕಾನಂದ ಭವನದಲ್ಲಿ ಶನಿವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಉದ್ಘಾಟಿಸಿದರು. ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಶಾಸಕ ಎಚ್.ಕೆ.ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಬೆಂಗಳೂರು ದಕ್ಷಿಣ ವಲಯದ ಪೊಲೀಸ್ ಮಹಾನಿರ್ದೇಶಕ ರವಿ ಚನ್ನಣ್ಣವರ, ಗಾಂಧಿ ಭವನದ ಉಪಾಧ್ಯಕ್ಷ ಜಿ.ಬಿ.ಶಿವರಾಜು ಇದ್ದಾರೆ
ಗದುಗಿನ ಸ್ವಾಮಿ ವಿವೇಕಾನಂದ ಭವನದಲ್ಲಿ ಶನಿವಾರ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಉದ್ಘಾಟಿಸಿದರು. ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಶಾಸಕ ಎಚ್.ಕೆ.ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಬೆಂಗಳೂರು ದಕ್ಷಿಣ ವಲಯದ ಪೊಲೀಸ್ ಮಹಾನಿರ್ದೇಶಕ ರವಿ ಚನ್ನಣ್ಣವರ, ಗಾಂಧಿ ಭವನದ ಉಪಾಧ್ಯಕ್ಷ ಜಿ.ಬಿ.ಶಿವರಾಜು ಇದ್ದಾರೆ   

ಗದಗ: ‘ಭಾರತದ ಸಂಸ್ಕೃತಿ, ಘನತೆ ಗೌರವವನ್ನು ವಿಶ್ವದಾದ್ಯಂತ ಪರಿಚಯಿಸಿ, ಪಸರಿಸಿದ ವೀರ ಸನ್ಯಾಸಿ ವಿವೇಕಾನಂದರ ಧ್ಯರ್ಯ ಮತ್ತು ಸ್ಥೈರ್ಯ ಯವ ಜನತೆಗೆ ಆದರ್ಶವಾಗಿವೆ’ ಎಂದು ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಯುವಜನ ಸಬಲೀಕರಣ ಇಲಾಖೆ ಹಾಗೂ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಉಪನ್ಯಾಸ 125ನೇ ವರ್ಷಾಚರಣೆ ಸಮಿತಿಯ ಸಹಯೋಗದಲ್ಲಿ ಅವರು ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಭವನದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭರತ ಖಂಡವನ್ನು ಸಂಚರಿಸಿ ದೀನದಲಿತರನ್ನು ಸಂರಕ್ಷಿಸಲು, ಅಸಹಾಯಕರಿಗೆ ಸಹಾಯವಾಗಲು ಸ್ವಾಮಿ ವಿವೇಕಾನಂದರು ಶ್ರಮಿಸಿದವರು’ ಎಂದರು.

ADVERTISEMENT

‘ಸ್ವಾಮಿ ವಿವೇಕಾನಂದರು ಚಿಂತನೆಗಳ ಮೇಲೆ ಜೀವಿಸುವ ಯಾವುದೇ ವ್ಯಕ್ತಿ ಒಂದು ಶಕ್ತಿಯಾಗಿ ಬೆಳೆಯಲು ಸಾಧ್ಯಗುತ್ತದೆ’ ಎಂದು ಗದಗ-ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

‘ಯುವದಮನಿಗಳಲ್ಲಿ ವಿವೇಕಾನಂದರ ಸ್ಫೂರ್ತಿ ಸದಾ ಹರಿಯಬೇಕು. ಪರಿಶುದ್ಧ ವ್ಯಕ್ತಿತ್ವದ ವಿವೇಕಾನಂದರ ತತ್ವಗಳು ನಮಗೇ ಮಾರ್ಗದರ್ಶಿಯಾಗಿವೆ’ ಎಂದು ಬೆಂಗಳೂರಿನ ಗಾಂಧಿ ಭವನದ ಉಪಾಧ್ಯಕ್ಷ ಜಿ.ಬಿ. ಶಿವರಾಜು ಸಲಹೆ ನೀಡಿದರು.

‘ಅಹಂಕಾರವನ್ನು ತಳ್ಳಿದರೆ, ವಿದ್ಯೆ, ವಿನಯ ಸರಳತೆ ವ್ಯಕ್ತಿಯನ್ನು ಶಕ್ತಿಯಾಗಿ ಬೆಳೆಯಲು ಪ್ರೇರಣಾದಾಯಕವಾಗಿವೆ’ ಎಂದು ಬೆಂಗಳೂರು ದಕ್ಷಿಣ ವಲಯದ ಪೊಲೀಸ್ ಮಹಾನಿರ್ದೇಶಕ ರವಿ ಚನ್ನಣ್ಣವರ ಹೇಳಿದರು.

‘ನಾವೆಲ್ಲರು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ವೃತ್ತಿ ಯಾವುದೇ ಇರಲಿ ಅದನ್ನು ಪ್ರೀತಿಸಿ, ಮನಸ್ಸಿನಿಂದ ಹಗಲು, ರಾತ್ರಿ, ಕಷ್ಟ, ಸುಖ ಎನ್ನದೇ ಜೀವಿಸುವುದೇ ಎಲ್ಲ ಯಶಸ್ಸುಗಳ ಹಿಂದಿನ ರಹಸ್ಯವಾಗಿದೆ. ಸರ್ಕಾರದ ವ್ಯವಸ್ಥೆಯನ್ನು ದೂಷಿಸುವ ಅಗತ್ಯ ಇಲ್ಲ. ಇಡೀ ಮಾನವ ನಾಗರಿಕತೆಯ ಶ್ರೇಷ್ಠ ಆಡಳಿತ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿದೆ. ಎಲ್ಲ ವ್ಯಕ್ತಿಗಳಿಗೆ ತಮ್ಮ ಇತಿಮಿತಿಗಳನ್ನು ಮೀರಿ ಮುನ್ನಡೆಯವ ಅವಕಾಶ ಇಲ್ಲಿದೆ. ರಾಜ್ಯಕ್ಕೆ, ದೇಶಕ್ಕೆ ಇರುವ ವಾರ್ಷಿಕ ಬಜೆಟ್‌ನಂತೆ ವ್ಯಕ್ತಿ ಕೂಡಾ ತನ್ನ ವ್ಯಕ್ತಿತ್ವದ ಬಜೆಟ್‌ನ್ನು ಹೊಂದಬೇಕು, ಗುರಿಮುಟ್ಟಲು ಸತತ ಪ್ರಯತ್ನ ಹಾಗೂ ಪರಿಶ್ರಮ ಅವಶ್ಯವಾಗಿದೆ. ನನ್ನ ಜೀವನ ಪಯಣ ಹಾಗೂ ಯಶಸ್ಸಿನ ಹಿಂದೆ ನಿರ್ಭಯಾನಂದ ಸರಸ್ವತಿ ಅವರ ಮಾರ್ಗದರ್ಶನವಿದೆ. ಯುವಜನರು ಉತ್ತಮ ಧ್ಯೇಯ
ಹೊಂದಿ ಸಾಧಕರಾಗಬೇಕು’ ಎಂದರು.

‘ಜೀವನದಲ್ಲಿ ಯಶಸ್ಸು ಕಾಣಬೇಕಾದಲ್ಲಿ ಯುವಜನರು ತಾವೇನಾಬೇಕು ಎನ್ನುವುದನ್ನು ನಿರ್ಧರಿಸಿ, ಅದನ್ನು ಕಾರ್ಯಗತಗೊಳಿಸಬೇಕು. ಒಳ್ಳೆಯವರಾಗಲು ನಿರಂತರವಾಗಿ ಪ್ರಯತ್ನಿಸಬೇಕು. ಅದುವೇ ನಾವು ಸ್ವಾಮಿ ವಿವೇಕಾನಂದರಿಗೆ ಅರ್ಪಿಸುವ ಗೌರವಾಗಿದೆ’ ಎಂದು ಶಾಸಕ ಎಚ್.ಕೆ.ಪಾಟೀಲ ಹೇಳಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸರ್ವರನ್ನು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಚಿಕ್ಯಾಗೋ ಉಪನ್ಯಾಸದ 125ನೇ ವರ್ಷಾಚರಣೆ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜೀವನ ಸಾಧನೆ ವಿಷಯಗಳ ಕುರಿತ ವಿವಿಧ ಸ್ಪರ್ಧೆಗಳ ವಿಜೇತ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪುಟ್ಟರಾಜ ಸಂಗೀತ ವಿದ್ಯಾಲಯದ ಶಿಕ್ಷಕರು ನಾಡಗೀತೆ ಹಾಡಿದರು. ಬಾಹುಬಲಿ ಜೈನರ ನಿರೂಪಿಸಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಶಿವಲಿಂಗಪ್ಪ ಬಳಿಗಾರ, ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮೋಹನ ದುರಗಣ್ಣವರ, ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ, ಸದಸ್ಯ ಶ್ರೀನಿವಾಸ ಹುಯಿಲಗೋಳ, ಜಿಲ್ಲಾ ಪಂಚಾಯ್ತಿ ಸಿಇಒ ಮಂಜುನಾಥ ಚವ್ಹಾಣ, ಮಾಜಿ ಶಾಸಕ ಬಿ.ಆರ್.ಯಾವಗಲ್, ರವಿಕಾಂತ ಅಂಗಡಿ, ಜೆ.ಕೆ. ಜಮಾದಾರ, ರಂಗನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.