ಗದಗ: ‘ಸಚಿವ ಎಚ್.ಕೆ.ಪಾಟೀಲ ಅವರಿಗೆ ಮುಖ್ಯಮಂತ್ರಿ ಯೋಗ ಕೂಡಿ ಬರಲಿ’ ಎಂದು ಚಿತ್ರದುರ್ಗ ಭೋವಿ ಗುರುಪೀಠ ಸಂಸ್ಥಾನ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಸಿದ್ಧರಾಮೇಶ್ವರ ಜಯಂತ್ಯುತ್ಸವದಲ್ಲಿ ಸಚಿವ ಎಚ್.ಕೆ.ಪಾಟೀಲ ಅವರಿಗೆ ಸ್ವಾಗತ ಕೋರುವ ವೇಳೆ, ‘ಸಚಿವ ಎಚ್.ಕೆ.ಪಾಟೀಲ ಅವರಿಗೆ ಸಿ.ಎಂ ಯೋಗ ಇತ್ತು. ಇಷ್ಟರಲ್ಲಿ ಪಾಟೀಲರು ಎರಡು, ಮೂರು ಬಾರಿ ಸಿ.ಎಂ ಆಗಿರುತ್ತಿದ್ದರು. ಎಸ್.ಎಂ.ಕೃಷ್ಣ ಆದಮೇಲೆ ಸಿ.ಎಂಗಾಗಿ ಹೆಸರು ಓಡಿದ್ದು ಪಾಟೀಲರದ್ದೇ. ತಡವಾಗಿಯಾದರೂ ಅವರಿಗೆ ಸಿ.ಎಂ ಯೋಗ ಕೂಡಿ ಬರಲಿ’ ಎಂದು ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.