ADVERTISEMENT

ಕಲೆ ಉಳಿಸುವ ಅಲೆಮಾರಿ ಸಮುದಾಯ

ಹಿ.ಕೃ.ಚಂದ್ರು
Published 12 ಜೂನ್ 2011, 8:30 IST
Last Updated 12 ಜೂನ್ 2011, 8:30 IST

ವಿಶೇಷ ವರದಿ
ಹಿರೀಸಾವೆ:
ಪಟ್ಟಣದ ಬೀದಿಯಲ್ಲಿ ಶನಿವಾರ ರಾಮ, ಆಂಜನೇಯ ವೇಷ ಧರಿಸಿದ ಕಲಾವಿದರು ಕಂಡುಬಂದರು. ಇವರು ಹಗಲು ವೇಷಗಾರರು.

ನಮ್ಮ ಪೌರಾಣಿಕ ನಾಟಕಗಳಾದ ಮಹಾಭಾರತ- ರಾಮಾಯಣದ ಪಾತ್ರಗಳ ವೇಷ ಧರಿಸಿ ಅಂಗಡಿ ಮತ್ತು ಮನೆಗಳ ಮುಂದೆ ನಾಟಕದ ಹಾಡು ಮತ್ತು ಕತೆಗಳನ್ನು ಹೇಳಿ ಅವರಿಂದ ಧನ, ಧಾನ್ಯ ಪಡೆದು ಜೀವನ ನಡೆಸುತ್ತಾರೆ. ಇದು ಅವರ ವಿಶೇಷ.

ಕನ್ನಡದ ಜನಪದ ಕಲೆಯಲ್ಲಿ ಹಗಲುವೇಷವು ಒಂದು ಕಲೆಯಾಗಿದೆ. ಈ ಕಲೆಯನ್ನು ಮೈಗೂಡಿಸಿಕೊಂಡಿರುವ ಜನರು ರಾಜ್ಯದ ನಾನ ಭಾಗಗಳಲ್ಲಿ ಇದ್ದಾರೆ. ಹಿರಿಸಾವೆಯಲ್ಲಿಯೂ ಈ ಸಮುದಾಯ ಕಂಡುಬಂದಿದ್ದ, ಕಲೆ ಉಳಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದಾರೆ.ಇವರೆಲ್ಲ ಅಲೆಮಾರಿ ಜನಾಂಗದವರು. ಯಾವುದೇ ಸರ್ಕಾರದ ಸೌಲಭ್ಯಗಳು ಇವರಿಗೆ ತಲುಪಿಲ್ಲ, ಮೂಲತಃ ಅವಿದ್ಯಾವಂತರು.

ಆದರೆ, ನಾಟಕಗಳ ಕತೆಗಳು ಮತ್ತು ಸಂಗೀತದ ಜೊತೆಯಲ್ಲಿ ಹಾಡುಗಳನ್ನು ಹೇಳುವುದರಲ್ಲಿ ನಿಪುಣರು. ತಮ್ಮ ಹಿರಿಯರು ಇದೇ ಕಾಯಕ ಮಾಡುತ್ತಿದ್ದರು ಅವರಿಂದ ನಾವು ಕಲಿತು ಕಲೆಯನ್ನು ಮುಂದುವರೆಸಿದ್ದೇವೆ, ಆದರೆ ನಮ್ಮ ಮಕ್ಕಳಿಗೆ ಈ ಕಲೆಯನ್ನು ಪರಿಚಯಿಸದೆ ಶಾಲೆಗಳಿಗೆ ಕಳುಹಿಸುತ್ತಿದ್ದೇವೆ ಎನ್ನುತ್ತಾರೆ ಈ ಪಾತ್ರಧಾರಿಗಳು.

`ಕಲೆಯನ್ನು ಏಕೆ ತಮ್ಮ ಮಕ್ಕಳಿಗೆ ಕಲಿಸುತ್ತಿಲ್ಲ~ ಎಂದರೆ, `ಹಿಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬಗಳು ಮತ್ತು ಇತರೆ ವಿಶೇಷ ದಿನಗಳಲ್ಲಿ ನಮ್ಮನ್ನು ಕರೆಸಿ ನಾಟಕ ಅಡಿಸುತ್ತಿದ್ದರು. ಜೀವನ ಸಾಗಿಸಲು ಕಷ್ಟ ಇರಲಿಲ್ಲ. ಅಧುನಿಕ ಜಗತ್ತಿನಲ್ಲಿ ನಮ್ಮ ಕಲೆಯು ನೆಲೆ ಕಳೆದುಕೊಳ್ಳುತ್ತಿದೆ. ಮನರಂಜನೆಗೆ ಹಲವು ವಿಧಾನಗಳಿದ್ದು ಅದರಲ್ಲಿ ದೂರದರ್ಶನ ಮಾಧ್ಯಮವು ನಮ್ಮ ಕಲೆಯನ್ನು ನುಂಗಿ ಹಾಕಿದೆ ಮತ್ತು ಮಕ್ಕಳು ನಮ್ಮ ಹಾಗೆ ಊರು ಊರೂ ಅಲೆಯುವುದು ಬೇಡವೆಂದು ಶಾಲೆಗೆ ಕಳುಹಿಸುತ್ತಿದ್ದೇವೆ~ ಎನ್ನುತ್ತಾರೆ.

ಹಲವಾರು ಕಲೆಗಳು ನಶಿಸಿ ಹೋದ ಮಾರ್ಗದಲ್ಲೇ ಹಗಲು ವೇಷದ ಕಲೆಯು ಈ ಹಾದಿಯಲ್ಲಿದೆ. ಆದರೆ, ಈ ಕಲಾವಿದರು ಅದನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದು ವಿಶೇಷವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.