ADVERTISEMENT

ಕಾವೇರಿ ನದಿ ಸ್ವಚ್ಛತೆ ಜಾಗೃತಿಯಾತ್ರೆಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 6:38 IST
Last Updated 25 ಅಕ್ಟೋಬರ್ 2017, 6:38 IST

ಕೊಣನೂರು: ‘ಕಾವೇರಿ ನದಿ ಒಡಲು ಕಲುಷಿತ ಆಗುತ್ತಿದ್ದರೂ ಸರ್ಕಾರ ಗಮನಿಸುತ್ತಿಲ್ಲ’ ಎಂದು ಎಂದು ಕಾವೇರಿ ನದಿ ಸ್ವಚ್ಛತೆ ಆಂದೋಲನದ ಸಂಚಾಲಕ ಚಂದ್ರಮೋಹನ್ ಆತಂಕ ವ್ಯಕ್ತಪಡಿಸಿದರು. ನದಿನೀರಿನ ಸ್ವಚ್ಛತೆ, ಪಾವಿತ್ರ್ಯ ಕುರಿತು ಜನ ಜಾಗೃತಿಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮತ್ತು ಆಖಿಲ ಭಾರತೀಯ ಸನ್ಯಾಸಿ ಸಂಘ ತಲಕಾವೇರಿಯಿಂದ ಈ ಜಾಗೃತಿ ರಥಯಾತ್ರೆ ಆರಂಭಿಸಿದೆ ಎಂದರು.

ಯಾತ್ರೆಯು ಮಂಗಳವಾರ ಕೊಣನೂರುಗೆ ಬಂದಿದ್ದು, ಪಟ್ಟಣದಲ್ಲಿ ಕಾವೇರಿ ನದಿಗೆ ಪೂಜೆ ಮತ್ತು ಆರತಿ ನೆರವೇರಿಸಲಾಯಿತು. ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಹೆಸರಿನಲ್ಲಿ ಕಾವೇರಿ ಉಪನದಿಗಳ ಅಸ್ಥಿತ್ವಕ್ಕೆ ಧಕ್ಕೆಯಾಗಿದೆ. ಈ ಬಗ್ಗೆ ಸರ್ಕಾರದ ಗಮನಸೆಳೆದು ಅರಿವು ಮೂಡಿಸಬೇಕು ಎಂದು ಸಲಹೆ ಮಾಡಿದರು.

ಜಾಗೃತಿಯಾತ್ರೆ ಸಮಿತಿ ಅಧ್ಯಕ್ಷ ಗಣೇಶ ಸ್ವರೂಪಾನಂದ ಸ್ವಾಮೀಜಿ, ಕಾವೇರಿ ನದಿ ಉಳಿವಿಗೆ ಸ್ಥಳೀಯರು ಜಾಗೃತರಾಗಿ, ನದಿ ಕಲುಷಿತವಾಗದಂತೆ ತಡೆಯಬೇಕು ಎಂದು ಹೇಳಿದರು.

ADVERTISEMENT

ತಾ.ಪಂ ಮಾಜಿ ಸದಸ್ಯ ಶ್ರೀನಿವಾಸಮೂರ್ತಿ, ನಿವೃತ್ತ ಉಪನ್ಯಾಸಕ ವಾಸುದೇವ್, ಕಾವೇರಿ ಸ್ವಚ್ಛತಾ ಆಂದೋಲನದ ಜಿಲ್ಲಾ ಮುಖಂಡ ಕುಮಾರಸ್ವಾಮಿ, ಕೆ.ವಿ ಸತೀಶ್ ಮಾತನಾಡಿದರು.

ಗ್ರಾ.ಪಂ ಅಧ್ಯಕ್ಷ ಕೆರೆಕೋಡಿ ರಮೇಶ್, ಸದಸ್ಯ ಎಸ್.ನಾಗರಾಜು, ಆಖಿಲ ಭಾರತೀಯ ಸನ್ಯಾಸಿ ಸಂಘದ 20ಕ್ಕೂ ಹೆಚ್ಚು ಸನ್ಯಾಸಿಗಳು, ನಂಜಪ್ಪ, ವೆಂಕಟೇಶ್, ಶಿಕ್ಷಕ ನಾಗರಾಜು ಕೋಟೆಕರ್, ಬೊಮ್ಮನಹಳ್ಳಿ ಕೃಷ್ಣ, ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ್, ಸದಸ್ಯರಾದ ಆನಂದ್, ಪ್ರತಾಪ್, ಮಂಜು, ಸೂರ್ಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.