ADVERTISEMENT

ತಿಮ್ಮನಾಯಕನ ಕೆರೆ: ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 5:55 IST
Last Updated 5 ಜನವರಿ 2012, 5:55 IST

ಅರಸೀಕೆರೆ: ಇಲ್ಲಿಗೆ ನಾಗತಿಹಳ್ಳಿ ಗ್ರಾಮದ ತಿಮ್ಮಪ್ಪನಾಯಕನ ಕೆರೆ ಅಂಚಿನಲ್ಲಿ ರೈತರು ಮಾಡಿದ್ದ ಒತ್ತುವರಿ ಯನ್ನು ತೆರವುಗೊಳಿಸುವಲ್ಲಿ ಜಿಲ್ಲೆಯ ಜಲಸಂವರ್ಧನೆ ಯೋಜನಾ ಸಂಘ ಹಾಗೂ ನಾಗತಿಹಳ್ಳಿ ವಿಶ್ವಬಂಧು ಕೆರೆ ಅಭಿವೃದ್ದಿ ಸಂಘ ಯಶಸ್ವಿಯಾಗಿದೆ.

  ತಾಲ್ಲೂಕಿನ ಕಸಬಾ ಹೋಬಳಿ ಹಾಗೂ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ನಾಗತಿ ಹಳ್ಳಿಯ ತಿಮ್ಮಪ್ಪನಾಯಕನ ಕೆರೆ ಅಂಚಿನಲ್ಲಿ ರೈತರು ಸುಮಾರು 42 ಎಕರೆ ಜಾಗವನ್ನು ಒತ್ತುವರಿ ಮಾಡಿ ಕೊಂಡಿದ್ದರು. ಗ್ರಾಮದ ಸುಮಾರು 15 ಕುಟುಂಬಗಳವರು ಒತ್ತುವರಿ ಭೂಮಿ ಸಾಗುವಳಿ ಮಾಡಿ ತೆಂಗಿನ ಗಿಡಗಳನ್ನು ನೆಟ್ಟಿದ್ದು, ಅವು ಫಸಲು ನೀಡುತ್ತಿವೆ. ಈ ಜಾಗದಲ್ಲಿ ಬೆಲೆ ಬಾಳುವ ಮರಗಳನ್ನು ನೆಟ್ಟಿದ್ದರು.

ಜಲ ಸಂವರ್ಧನಾ ಯೋಜನಾ ಸಂಘದ ಜಿಲ್ಲಾ ಯೋಜನ ಘಟಕದ ಸಿಬ್ಬಂದಿ ಪ್ರತಿ ವಾರ ಗ್ರಾಮಕ್ಕೆ ಭೇಟಿ ನೀಡಿ ಕೆರೆ ನೀರು ಮತ್ತು ಮಣ್ಣಿನ ಸಂರಕ್ಷಣೆ ಮುಂತಾದ ಚಟುವಟಿಕೆ ಕುರಿತು ರೈತರಿಗೆ ಅರಿವು ಮೂಡಿಸಿದ್ದಾರೆ. ಇವರ ಪ್ರಯತ್ನದಿಂದ ಒತ್ತುವರಿ ಜಾಗವನ್ನು ರೈತರು ಖುದ್ದಾಗಿ ತೆರವುಗೊಳಿಸಿದ್ದಾರೆ. ಇದು ಜಲಸಂವರ್ಧನಾ ಯೋಜನಾ ಸಂಘದ ಶ್ಲಾಘನೀಯ ಕಾರ್ಯ ಎಂದು ಕೆರೆ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಓಂಕಾರಮೂರ್ತಿ ಹೇಳಿದ್ದಾರೆ.

ಕೆರೆ ಅಂಚಿನಲ್ಲಿ ಗಡಿ ಕಂದಕ ನಿರ್ಮಿ ಸಲಾಗಿದ್ದು, ಒತ್ತುವರಿ ಪ್ರದೇಶದಲ್ಲಿ 500ಕ್ಕೂ ಹೆಚ್ಚು ತೆಂಗಿನ ಮರಗಳಿವೆ ಜತೆಗೆ  ತೇಗ, ಬೇವು ಇತರ ಮರಗಳು ಇವೆ. ಇವುಗಳಿಂದ ಬರುವ ಆದಾಯ ವನ್ನು ಕೆರೆ ಅಭಿವೃದ್ದಿ ಸಂಘಕ್ಕೆ ಅರ್ಧ ಒತ್ತುವರಿದಾರರಿಗೆ ಉಳಿದ ಅರ್ಧ ನೀಡಲು ನಿರ್ಧರಿಸಲಾಗಿದೆ. ಕೆರೆ ಅಂಚಿನ ಜಮೀನನ್ನು ನಾಗತಿ ಹಳ್ಳಿಯ ವಿಶ್ವಬಂಧು ಕೆರೆ ಅಭಿವೃದ್ಧಿ ಸಂಘದ  ಸುಪರ್ದಿಗೆ ಬಿಟ್ಟುಕೊಡಲಾ ಗಿದೆ. ಒತ್ತುವರಿ  ಜಮೀನನ್ನು ಸ್ವಇಚ್ಛೆ ಯಿಂದ ಬಿಟ್ಟುಕೊಟ್ಟ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂ ಬಕ್ಕೆ ಹಾಸನ ಜಿಲ್ಲೆಯ ಜಲ ಸಂವರ್ಧನಾ ಯೋಜನಾ ಸಂಘ ಘಟಕದ ವತಿ ಯಿಂದ ಪುನರ್ವಸತಿ ಯೋಜ ನೆಯಡಿ ತಲಾ ರೂ.25 ಸಾವಿರ ಪ್ರೋತ್ಸಾಹ ಧನ ನೀಡಲು ಯೋಜನೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.