ADVERTISEMENT

ತೆಂಗಿನ ಮರ ಹತ್ತುವ ತರಬೇತಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 10:18 IST
Last Updated 2 ಆಗಸ್ಟ್ 2013, 10:18 IST

ಹಾಸನ: `ರೈತರು ತೆಂಗಿನ ಬೆಳೆಯೊಂದನ್ನೇ ಅವಲಂಬಿಸದೆ ಅಂತರ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಆದಾಯ ಹೆಚ್ಚಿಸಿ ಕೊಳ್ಳಬೇಕು' ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ  ಡಾ. ಓ.ಆರ್. ನಟರಾಜು ಸಲಹೆ ನೀಡಿದರು.

ತಾಲ್ಲೂಕಿನ ಮಡೆನೂರು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಕಂದಲಿ ಗ್ರಾಮದ ಯುವ ರೈತರಿಗೆ ಹಮ್ಮಿಕೊಂಡಿದ್ದ ತೆಂಗಿನ ಮರ ಹತ್ತುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಆರ್. ವಿನಯ್ ಕುಮಾರ್ `ಹಳ್ಳಿ ಗಳಲ್ಲಿ ಮರ ಹತ್ತುವವರು ಕ್ಷೀಣಿಸು ತ್ತಿದ್ದು, ಈ ಹಂತದಲ್ಲಿ ರೈತರು ಮರ ಹತ್ತುವುದನ್ನು ಉಪ ಕಸುಬಾಗಿ ತೆಗೆದುಕೊಳ್ಳಬಹುದು ಎಂದು ಸಲಹೆ ನೀಡಿದರು.

ಕೇಂದ್ರದ ವಿಜ್ಞಾನಿಗಳಾದ ಡಾ. ಜಿ.ಎಸ್. ಕೃಷ್ಣಾರೆಡ್ಡಿ, ಡಾ. ಟಿ.ಎಸ್. ಮಂಜುನಾಥಸ್ವಾಮಿ, ಡಾ. ಎಂ. ಶಿವಶಂಕರ್, ಡಾ. ಎಸ್. ಚೆನ್ನಕೇಶವ, ಕಾಂತರಾಜು, ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.