ADVERTISEMENT

ದೇವರ ಅನುಗ್ರಹದಿಂದ ಮನ ಪರಿವರ್ತನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 6:58 IST
Last Updated 9 ಜನವರಿ 2017, 6:58 IST

ಚನ್ನರಾಯಪಟ್ಟಣ: ದೇವರ ಅನುಗ್ರಹದಿಂದ ಮನಸು ಪರಿವರ್ತನೆ ಯಾಗುತ್ತದೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು. ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟದಲ್ಲಿರುವ ಮೆಳಿ ಯಮ್ಮ ಆಧ್ಯಾತ್ಮಿಕ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಲಲಿತಾ ಲಕ್ಷಾರ್ಚನೆ ಮತ್ತು ಚಂಡಿಕಾಹೋಮದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

84ನೇ ವಯಸ್ಸಿನಲ್ಲಿಯೂ ಹೋರಾಟ ಮಾಡುವ ಸಂಕಲ್ಪ ಇದೆ. ಇದು ದೈವ ಇಚ್ಛೆ. ದೇವರು ಕೊಟ್ಟ ಶಕ್ತಿಯಿಂದ ಮುಂದೆ ಸಾಗುತ್ತಿದ್ದೇನೆ ಎಂದ ಅವರು, ‘ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ನನಗೆ ರಾಜಕೀಯವಾಗಿ ಶಕ್ತಿ ನೀಡಿದೆ. ಅಭಿವೃದ್ಧಿ ವಿಚಾರದಲ್ಲಿ ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುತ್ತಾರೆ. ಇಂಥವರ ಬಗ್ಗೆ ಏನು ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ’ ಎಂದರು.

ಹೊಸದುರ್ಗ ತಾಲ್ಲೂಕು ಬೆಲಗೂರಿನ ಬಿಂದುಮಾಧವಶರ್ಮ ಸ್ವಾಮೀಜಿ ಆಶೀರ್ವಚನ ನೀಡಿದರು.  ಅರಸೀಕೆರೆ ತಾಲ್ಲೂಕು ಕೋಡಿ ಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಖಂಡ ಚನ್ನೇಗೌಡ ಮಾತನಾಡಿದರು.

ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಚಂದ್ರಶೇಖರ್‌ ಗುರೂಜಿ, ಎಚ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸತೀಶ್‌, ಶಿವನಂಜೇಗೌಡ,  ಎಚ್.ಎನ್. ಲೋಕೇಶ್‌, ಡಿ.ಎಲ್. ಮಂಜುನಾಥ್, ಡಾ.ಬಿ.ಸಿ.ಭಗವಾನ್, ಪುಟ್ಟಸ್ವಾಮಿಗೌಡ, ಡಾ.ಸೂರಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.