ADVERTISEMENT

ಪತ್ರಿಕಾರಂಗ ಸಮಾಜದ ಕಾವಲು ನಾಯಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 6:25 IST
Last Updated 13 ಆಗಸ್ಟ್ 2012, 6:25 IST

ಅರಸೀಕೆರೆ: ಪತ್ರಿಕಾ ರಂಗ ಸಮಾಜದ ಕಾವಲು ನಾಯಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸರಸ್ವತಿ ವಿ.ಕೋ. ಸುಂದರ್ ಹೇಳಿದರು.

 ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ರೋಟರಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾ ನದ ನಾಲ್ಕನೇ ಅಂಗವಾಗಿ ಪತ್ರಿಕಾ ರಂಗ ಕೆಲಸ ಮಾಡುತ್ತಿದೆ. ನಿಷ್ಪಕ್ಷ ಪಾತ ವರದಿ, ಸಕಾಲಿಕ ಲೇಖನಗಳ ಮೂಲಕ ಪತ್ರಕರ್ತರು ವ್ಯವಸ್ಥೆಯ ಗುಣಾವಗಣಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂದು ತಿಳಿಸಿದರು.

 ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ತಪ್ಪು ಎಸಗಿದಾಗ ಎಚ್ಚರಿಸುವ ಮತ್ತು ಉತ್ತಮ ಕಾರ್ಯ ಮಾಡಿದಾಗ ಶ್ಲಾಘಿಸುವ ಕಾರ್ಯವನ್ನು ಪತ್ರಿಕಾರಂಗ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದರು.

 ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ, ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿವಾನಂದ ತಗಡೂರು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಸನ್ನಕುಮಾರ್, ಡಿವೈಎಸ್‌ಪಿ ಜೆ.ಕೆ.ರಶ್ಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎಚ್. ಎಸ್.ಚಂದ್ರಶೇಖರ್, ರೋಟರಿ ಸಂಸ್ಥೆ ಅಧ್ಯಕ್ಷ ಯೋಗೀಶಾಚಾರ್ ಮಾತನಾ ಡಿದರು. ಪುರಸಭಾ ಅಧ್ಯಕ್ಷ ಜಿ.ಟಿ. ಗಣೇಶ್, ಉದಯ್‌ಕುಮಾರ್ ಇದ್ದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾಗಿದ್ದ ರೋಟರಿ ಸಂಸ್ಥೆ ತಂಡಕ್ಕೆ ಡಿ.ವೈಎಸ್‌ಪಿ ಜೆ.ಕೆ.ರಶ್ಮಿ ನೆನಪಿನ ಕಾಣಿಕೆ ನೀಡಿದರು. ಸಂಘದ ಉಪಾಧ್ಯಕ್ಷ ಹಾರನಹಳ್ಳಿ ನಾಗೇಂದ್ರ ಸ್ವಾಗತಿಸಿ, ಟಿ.ಆನಂದ್ ನಿರೂಪಿಸಿ, ಟಿ.ಎ.ಸ್ವಾಮಿ ವಂದಿಸಿದರು.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.